ದೇವನಹಳ್ಳಿ: ಇತ್ತೀಚಿನ ಸರ್ಕಾರದ ಸಭೆ, ಸಮಾರಂಭಗಳಿಗೆ ಸರ್ಕಾರಿ ಅದಿಕಾರಿಗಳೇ ಹೆಚ್ಚಾಗಿ ಗೈರು ಹಾಜರಾಗುತಿದ್ದಾರೆ ಅಂತಹವರಿಂದ ಸಂವಿಧಾನ ರಕ್ಷಣೆ ಸಾದ್ಯವೇ ಎಂದು ದೇವನಹಳ್ಳಿ ತಾಲ್ಲೂಕು ದಲಿತ ಹಿರಿಯ ಮುಖಂಡ ಕಗ್ಗಲಹಳ್ಳಿ ಗುರ್ರಪ್ಪ ಕಿಡಿಕಾರಿದರು.
ದೇವನಹಳ್ಳಿ ಪಟ್ಟಣದ ತಾಲ್ಲೂಕು ಆಡಳಿತ ಕಚೇರಿ ಯಲ್ಲಿ ಡಾ||ಬಿಆರ್. ಅಂಬೇಡ್ಕರ್ ಅವರ 67ನೇ ಪುಣ್ಯಸ್ನರಣೆ ದಿನದ ಅಂಗವಾಗಿ ಅಂಬೇಡ್ಕರ್ ಪುಥಳಿಕೆಗೆ ಪುಷ್ಪರ್ಚನೆ ಸಲ್ಲಿಸಿದ ಬಳಿಕ ಮಾತನಾಡಿ, ತಳ ಸಮುದಾಯಗಳನ್ನು ಕೂಡ ಸಮ- ಸಮಾಜಗಳಂತೆ ಒಟ್ಟುಗೊಡಿಸುವ ಡಾ|| ಅಂಬೇಡ್ಕರ್ ಅವರ ಕನಸ್ಸು ನನಸ್ಸು ಮಾಡಬೇಕಿದೆ.
ದಲಿತರು ಪಕ್ಷತೀತವಾಗಿ ಒಗ್ಗೂಡಿ ಒಗ್ಗಾಟಬೇಕಿದೆ.ಸರ್ಕಾರಿ ಅಧಿಕಾರಿಗಳು ಕಾಟಾಚಾರಕ್ಕೆ ಭಾಗವಿಸುತ್ತಿದ್ದಾರೆ. ತಳ ಸಮುದಾಯದ ದಿಮಾಂತ ನಾಯಕರ ಕಾರ್ಯಕ್ರಮಕ್ಕೆ ನಿರ್ಲಕ್ಷ್ಯ ನಿಜಕ್ಕೂ ಖಂಡನೀಯ. ಅಂಬೇಡ್ಕರ್ ಅವರು ಭಾರತದ ಸಂವಿಧಾನಶಿಲ್ಪಿ ಮಾತ್ರವಲ್ಲದೇ, ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞ ರಾಗಿ, ಸಮಾಜ ಸುಧಾರಕರಾಗಿ, ಮಹಿಳೆ ಯರು, ದಲಿತರು, ಅಲ್ಪ ಸಂಖ್ಯಾತರು ಸೇರಿದಂತೆ, ಅಸ್ಪೃಶ್ಯತೆ, ಅಸಮಾನ ತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ.
ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ತಿಳಿಸಿಸಿದರು.ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನ ರಚನೆಯ ಫಲವಾಗಿ ನಾವೇಲ್ಲರು ಸುಖ, ಶಾಂತಿಯಿಂದ ಬದುಕುವಂತಾಗಿದೆ ಅವರ ಆದರ್ಶ ಸೂರ್ಯ, ಚಂದ್ರ ಇರುವಷ್ಟು ಕಾಲ ಅಜರಾಮವಾಗಿತ್ತದೆ ಎಂದರು.
ಮಾಜಿ ಪುರಸಭಾದ್ಯಕ್ಷ ಮೂರ್ತಿ ಮಾತನಾಡಿ, ಅಂಬೇಡ್ಕರ್ ಅವರು ಸ್ವಂತಕ್ಕೆ ಏನನ್ನು ಬಯಸದವರು, ವಿಷೇಶವಾಗಿ ಮಹಿಳೆಯರಿಗೆ ಶಿಕ್ಷಣ, ಸಮಾನ ಮೀಸಲಾತಿ ಹಕ್ಕು ಕಲ್ಪಿಸಿಕೊಟ್ಟವರು. ಸಂವಿಧಾನದ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಲು ಕಂಕಣಭದ್ಧರಾಗಬೇಕು ಹಾಗೂ ಅಂಬೇಡ್ಕರ್ ಅವರ ಅಗಲಿಕೆ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವೆಂದರೆ ತಪ್ಪಾಗಲಾರದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬುದ್ದ ವಿಹಾರ ಕೇಂದ್ರ ಜ್ಞಾನೇಂದ್ರ ಜ್ಞಾನ ಲೋಕ ಭಂತೇಜೀ, ತಹಶಿಲ್ದಾರ್ ಶಿವರಾಜು, ದಲಿತ ಹಿರಿಯ ಮುಖಂಡ ಬುಳ್ಳಹಳ್ಳಿರಾಜಪ್ಪ, ಕುಂದಾಣ ಸಿದ್ದಾರ್ಥ, ಮಾರಪ್ಪ, ಸೋಮಶೇಖರ್, ಅತ್ತಿಬೆಲೆ ನರಸಪ್ಪ, ಕೆವಿ.ಸ್ವಾಮಿ, ಸೋಲೂರು ನಾಗರಾಜು, ದಲಿತ ಮುಖಂಡ ರಾದ ಶ್ರೀನಿವಾಸ್ ಗಾಂದಿ, ಬುಳ್ಳಹಳ್ಳಿ ಮುನಿರಾಜು,ಮೂರ್ತಿ, ಸಾವಕನಹಳ್ಳಿ ಶ್ರೀನಿವಾಸ್, ದಲಿತ ಮಹಿಳೆಯರಾದ ಅರುಂದತಿ ಸಿದ್ದಾರ್ಥ,ಆಂಜಿನಮ್ಮ ನಾರಾಯಣಸ್ವಾಮಿ, ರವಿಕಲಾ, ಸಮಾಜ ಕಲ್ಯಾಣ ಅದಿಕಾರಿ ನಳಿನಾಕ್ಷಿ, ಇಒ ಶ್ರೀನಾಥ್ ಗೌಡ, ಬಿಇಒ ಸುಮಾ ಮುಂತಾದವರು ಕಾರ್ಯಕರ್ತರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.