ತಿ.ನರಸೀಪುರ: ಕ್ಷುಲ್ಲಕ ವಿಚಾರಕ್ಕೆ ಜಾತಿನಿಂದನೆ ಹಾಗೂ ಮಾರಣಾಂತಿಕ ಹಲ್ಲೆ ನೆಡೆದು ತಿಂಗಳೆ ಕಳೆದರು ಕಣ್ಮುಚ್ಚಿ ಕುಳಿತ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಸುದ್ದಿಗೋಷ್ಠಿ ನೆಡೆಸಿ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಕಛೇರಿಯಲ್ಲಿ ನೆಡೆದ ಸುದ್ದಿಘೊಷ್ಠಿಯನ್ನು ಉದ್ದೇಶಿಸಿ ಹಿರಿಯ ದಲಿತ ಮುಖಂಡ ಎಸ್.ಸಿ ಗಣೇಶಸ್ವಾಮಿ ಮಾತನಾಡಿ ಸೋಮನಾಥಪುರ ಗ್ರಾಮದಲ್ಲಿ ಕಳೆದ ಮಾರ್ಚ್ 04 ರಂದು ಕ್ಷುಲ್ಲಕ ವಿಚಾರಕ್ಕೆ ಕೇತುಪುರ ಗ್ರಾಮದ ಅನ್ಯಕೋಮಿನ ಕೆಲ ಯುವಕರು ನಮ್ಮ ಗ್ರಾಮದ ದಲಿತ ಸಮುದಾಯದ ಸಂದೀಪ್ ಕುಮಾರ್ ಹಾಗೂ ಆನಂದ್ ಎಂಬುವವರಿಗೆ ಜಾತಿನಿಂದನೆ ನೆಡೆಸಿ ಮಾರಣಾಂತಿಕ ಹಲ್ಲೆ ನೆಡೆಸಿದ್ದು. ಈ ಸಂಭಂದ ಮಾರ್ಚ್ 06 ರಂದು ಜಿಲ್ಲಾ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಹೀಗಿದ್ದರೂ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೌಜನ್ಯಕಾದರು ಗ್ರಾಮಕ್ಕೆ ಭೇಟಿ ಪ್ರಕರಣದ ಮಾಹಿತಿ ಪಡೆಯುವುದಿರಲಿ ಸಾಂತ್ವಾನ ಕೂಡ ಹೇಳದಿರುವುದು ವಿಷಾದನಿಯ ಸಂಗತಿ ಈ ಬಗ್ಗೆ ಹಲವು ಬಾರಿ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು ಯಾವುದೇ ಕ್ರಮ ವಹಿಸದಿರುವುದು ದಲಿತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಎಂದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ನೊಂದ ಯುವಕರ ನೆರವಿಗೆ ಧಾವಿಸದಿದ್ದರೆ ತಾಲ್ಲೂಕು ಕಛೇರಿ ಮುಂದೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭ ದಲಿತ ಮುಖಂಡರುಗಳಾದ ವಿಚಾರವಾದಿ ಕೆ.ಎನ್ ಪ್ರಭುಸ್ವಾಮಿ, ಮದಾಪುರ ಎಂ.ಎಸ್ ಬಸವರಾಜು, ಸೋಮನಾಥಪುರ ಗ್ರಾಮದ ಎನ್ ಮಹದೇವಯ್ಯ ಉಪಸ್ಥಿತರಿದ್ದರು.
ತಿ.ನರಸೀಪುರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ದಲಿತ ಮುಖಂಡರು ಆಕ್ರೋಶ



