ಬ್ಯಾಟರಾಯನಪುರ: ಪೊಲೀಸ್ ಠಾಣೆ ವ್ಯಾಪ್ತಿಯ ದಲಿತ ಮಾಸಿಕ ಸಭೆಯನ್ನು ವಿಜಯನಗರ ವಿಧಾನಸಭಾ ಕ್ಷೇತ್ರದ ಹಂಪಿನಗರ ವಾರ್ಡ್ ನ ಮಾರುತಿ ನಗರದ ಅಂಬೇಡ್ಕರ್ ಭವನದಲ್ಲಿ ಬ್ಯಾಟರಾಯನಪುರ ಪೊಲೀಸ್ ಇನ್ಸ್ಪೆಕ್ಟರ್ ಜೀವನ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಸ್ಥಳೀಯ ಮಾರುತಿ ನಗರದ ನಿವಾಸಿಗಳು, ಬಿಬಿಎಂಪಿ ಆಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಆಧಿಕಾರಿಗಳು ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗಳು ಭಾಗವಹಿಸಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ನಾಗರೀಕರು ಸ್ಥಳೀಯ ಸಮಸ್ಯೆಗಳ ಬಗ್ಗೆ ಆಧಿಕಾರಿಗಳ ಗಮನಕ್ಕೆ ತಂದರು. ಕೊನೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದರು. ಇನ್ನುಳಿದ ಕೆಲವು ಸಮಸ್ಯೆಗಳನ್ನು ಅದಷ್ಟು ಬೇಗ ಪರಿಹಾರಿಸಿಕೊಡುವ ಭರವಸೆ ನೀಡಿದರು. ಈ ವೇಳೆ ದಲಿತ ಮುಖಂಡರುಗಳಾದ ನಾಗರಾಜ್, ಚೆಲುವರಾಜ್, ವೆಂಕಟೇಶ್ , ಅಜಯ್ ಕುಮಾರ್ , ಭದ್ರಮ್ಮ , ಉಮಾ, ಗೌರಮ್ಮ ಇನ್ನಿತರರು ಹಾಜರಿದ್ದರು.
ಈ ವೇಳೆ ಕರ್ನಾಟಕ ದಲಿತ ಕ್ರಿಯಾ ಸಮಿತಿಯ ಉಪಾಧ್ಯಕ್ಷ ಡಿ. ಪುರುಷೋತ್ತಮ್, ಕಾರ್ಯದರ್ಶಿ ಶ್ರೀನಿವಾಸ್ ಮತ್ತಿತರರ ಪದಾಧಿಕಾರಿಗಳು 75ನೇ ಭಾರತ ಸುವರ್ಣ ಗಣರಾಜ್ಯೋತ್ಸವದ ಆಚರಿಸುತ್ತಿರುವ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ರಚಿಸಿದ ಭಾರತ ಸಂವಿಧಾನದ ಜಾಗೃತಿಗಾಗಿ ಸಂವಿಧಾನ ಪೀಠಿಕೆಯನ್ನು ಬ್ಯಾಟರಾಯನಪುರ ಪೊಲೀಸ್ ಇನ್ಸ್ಪೆಕ್ಟರ್ ಜೀವನ್ ರವರಿಗೆ ನೀಡಿ ಗೌರವಿಸಿದರು.