ತಿ.ನರಸೀಪುರ: ದಲಿತ ಸಂಘರ್ಷ ಸಮಿತಿ (ಬಣ ರಹಿತ) ದಸಂಸ ಜಿಲ್ಲಾ ಸಂಚಾಲಕ ಉಮಾಮಹದೇವ್ರ ವತಿಯಿಂದ ಪಟ್ಟಣದ ಖಾಸಗಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.ಸುದ್ದಿಗೋಷ್ಠಿ ಕುರಿತು ಮಾತನಾಡಿದ ಅವರು ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮೊದಲ ಅವಧಿಯಲ್ಲಿ ದಲಿತ ದೌರ್ಜನ್ಯ ಪ್ರಕರಣವನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನ ಮಾಡಿದರು,
ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆಗೆ ಎಂದು ಅಂದು ಸಂಸದರಾಗಿದ್ದ ಅನಂತ್ ಕುಮಾರ್ ಹೆಗಡೆ ಅಂತವರ ಮೂಲಕ ಹೇಳಿಸಿದರು, ಎರಡನೇ ಅವಧಿಯಲ್ಲಿ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದರು, ಮೂರನೇ ಅವಧಿಯಲ್ಲಿ 400 ಬಿಜೆಪಿ ಸಂಸದರು ಆಯ್ಕೆ ಆದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಅದೇ ಅನಂತ್ ಕುಮಾರ್ ಹೆಗಡೆ ಅಂತಹ ಹಲವು ಸಂಸತ್ ಮೂಲಕ ಹೇಳುತ್ತಿದ್ದಾರೆ
ಹೀಗಿರುವಾಗ ಸನ್ಮಾನ್ಯ ಮೋದಿಯವರು ಸಂವಿಧಾನ ಬದಲಾವಣೆಗೆ ಸ್ವತಹ ಅಂಬೇಡ್ಕರ್ ಅವರೇ ಬಂದರು ಸಾಧ್ಯವಿಲ್ಲ ಎಂಬಂತೆ ಹೇಳುತ್ತಿದ್ದಾರೆ ಆದರೆ ಇಲ್ಲಿಯ ತನಕ ಯಾವ ಒಂದು ಕ್ರಮವನ್ನು ಸಂವಿಧಾನ ವಿರುದ್ಧ ಮಾತನಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ನೋಡಿದರೆ ಅದು ಅವರ ಹೇಳಿಕೆಯಲ್ಲ ಬಿಜೆಪಿ ಹೇಳಿಕೆ ಎಂಬುದು ಸಾಬೀತಾಗುತ್ತದೆ ಎಂದು ಗಂಭೀರ ಆರೋಪ ಮಾಡಿದರು.
ಈ ಎಲ್ಲಾ ಅಂಶಗಳನ್ನು ನೋಡಿದರೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ದಲಿತರು, ಶೋಷಿಸಿತರು, ರೈತರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರಿಗೆ ಉಳಿಗಾಲವಿಲ್ಲ ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೂಲ ಆಶಯಗಳನ್ನು ಬದಲಾವಣೆ ಮಾಡುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಯುತ್ತದೆ ಎಂದರು.
*ಮೇಲಾಗಿ ದಲಿತರ ಮತ್ತು ಶೋಷಿತರ ಸರ್ವೋಚ್ಚ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲನೇ ಲೋಕಸಭಾ ಚುನಾವಣೆಯಾಗಿದೆ ಆದ್ದರಿಂದ ನಾವು ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಬೇಕಾಗಿದೆ* ಆದ್ದರಿಂದ ದಲಿತ ಸಂಘರ್ಷ ಸಮಿತಿ (ಬಣ ರಹಿತ)ಹಾಗೂ ದಲಿತ ಕಲಾವಿದರ ಸಂಘದ ಎಲ್ಲಾ ಕಾರ್ಯಕರ್ತರು *ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್* ಅವರನ್ನು ಹಾಗೂ *ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಲಕ್ಷ್ಮಣ್ ಅವರನ್ನು ಬೆಂಬಲಿಸಲು ನಿರ್ಧಾರ* ಕೈಗೊಂಡಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಈ ಸಂದರ್ಭ ಜಿಲ್ಲಾ ಸಂಘಟನಾ ಸಂಚಾಲಕರಾದ ಆಲತ್ತೂರು ಶಿವರಾಜ್, ಮೂಡಳ್ಳಿ ಮಹದೇವ್, ತಾಲ್ಲೂಕು ಸಂಚಾಲಕ ಕೇತುಪುರ ಶಿವಪ್ರಕಾಶ್, ತಾಲ್ಲೂಕು ಸಂಘಟನಾಸಂಚಾಲಕರಾದ ಹನುಮನಾಳು ಮಹದೇವ, ಕುರಿಸಿದ್ದನಹುಂಡಿ ರಾಜು, ಮಡವಾಡಿ ಮುತ್ತುರಾಜು, ಸುತ್ತೂರು ಮಹೇಶ್, ದಲಿತ ಕಲಾವಿದರ ಸಂಘದ ಉಪಾಧ್ಯಕ್ಷ ತುಂಬಲ ಶಿವಣ್ಣ, ಸಂಘಟನಾ ಕಾರ್ಯದರ್ಶಿ ಯರಗನಳ್ಳಿ ಪವನ್ ಕುಮಾರ್, ಸುಜ್ಜಲೂರು ಮಹದೇವ, ಸಿದ್ದರಾಜು, ಮಾದಾಪುರ ನಂಜುಂಡಯ್ಯ, ಹ್ಯಾಕನೂರು ಹೊಂಗನೂರಯ್ಯ, ಯಡದೋರೆ ಜಯಪ್ಪ, ಸೇರಿದಂತೆ ಹಲವಾರು ಕಾರ್ಯಕರ್ತರು ಹಾಜರಿದ್ದರು.