ಹೌದು ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಏಳರ ಖ್ಯಾತ ಸ್ಪರ್ಧಿ, ಡ್ಯಾನ್ಸರ್ ಕಿಶನ್ ಯಾರಿಗೆ ಗೊತ್ತಿಲ್ಲ ಹೇಳಿ? ರಿಯಾಲಿಟಿ ಶೋವಿನ ಮೂಲಕ ತಮ್ಮ ಡಾನ್ಸ್ ಸ್ಕಿಲ್ಗಳನ್ನು ಇಡೀ ಕರ್ನಾಟಕದ ಜನತೆಗೆ ತೋರಿಸಿಕೊಂಡು ಬಂದಿದ್ದಾರೆ ಕಿಶನ್.ಇದೀಗ ಕಿಶನ್ ಅವರು ಸ್ಕೂಬಾ ಡೈವಿಂಗ್ ಸರ್ಟಿಫಿಕೇಟ್ ಅನ್ನು ಪಡೆದಿದ್ದಾರೆ.
ಸ್ಕೂಬಾ ಡೈವಿಂಗ್ ಇದೊಂದು ಅಡ್ವೆಂಚರ್ ಕ್ರೀಡೆ ಆಗಿದ್ದು ಸರ್ಟಿಫಿಕೇಟ್ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಧೈರ್ಯ ತಾಳ್ಮೆ ಹಾಗೂ ಕಲಿಯುವ ಆಸಕ್ತಿ ಇರಬೇಕು. ಇದೆಲ್ಲವನ್ನು ಹೊಂದಿರುವ ನೃತ್ಯಗಾರ ಕಿಶನ್ ಬೆಳಗಲಿ ಅವರು ಸ್ಕೂಬಾ ಡೈವಿಂಗ್ ನಲ್ಲಿ ಪರಿಣತಿಯನ್ನು ಪಡೆದಿದ್ದಾರೆ. ಮಾತ್ರವಲ್ಲದೇ ನಾಲ್ಕು ದಿನಗಳ ಕಾಲ ನೀರಿನ ಒಳಗಿನ ಸೌಂದರ್ಯವನ್ನೆಲ್ಲಾ ಕಣ್ಣಾರೆಯಾಗಿ ಸವಿದಿದ್ದಾರೆ.
ಅಂದ ಹಾಗೇ ಸಮುದ್ರದೊಳಗಿನ ಜಲಚರ ಜೀವಿಗಳನ್ನು ಹತ್ತಿರದಿಂದ ಕಾಣುವ ಅತ್ಯದ್ಭುತ ಅವಕಾಶವನ್ನು ಕೊಡುವ ಈ ಕ್ರೀಡೆಯನ್ನು ಕಲಿತಿರುವುದು ಸಾಹಸವೇ ಸರಿ. ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇರುವ ಕಿಶನ್ ಬಿಳಗಲಿ ಅವರು ತಮ್ಮ ಹೊಸ ಹೊಸ ಡಾನ್ಸ್ ಮೂವ್ ಗಳನ್ನು ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ತೋರಿಸುತ್ತಿರುತ್ತಾರೆ.
ಸ್ಕೂಬಾ ಡೈವಿಂಗ್ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಖುಷಿಯಿಂದ ಹಂಚಿಕೊಂಡಿದ್ದು ಪ್ರೇಕ್ಷಕರು ಅಭಿಮಾನಿಗಳು ಹಾಗೂ ಸೋಶಿಯಲ್ ಮೀಡಿಯಾ ಫಾಲೋವರ್ಸ್ ನಿಂದ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ತಮ್ಮ ಪೋಟೋಗಳನ್ನಷ್ಟೇ ಹಾಕಿಕೊಳ್ಳದೇ ನೀರಿನೊಳಗಿನ ಜಲಚರ ಸೌಂದರ್ಯದ ಬಗ್ಗೆಯೂ ವಿಡಿಯೋ ಹಂಚಿಕೊಂಡಿದ್ದು, ಅದೀಗ ಎಲ್ಲರ ಕಣ್ಮನ ಸೆಳೆಯುತ್ತಿದೆ.
“ನಾನು ಡ್ಯಾನ್ಸ್ ಅನ್ನು ಕಲಿಯುತ್ತಿದ್ದ ಶುರುವಿನ ದಿನಗಳು ನೆನಪಾಯಿತು. ಡ್ಯಾನ್ಸ್ ಕಲಿಯುತ್ತಿದ್ದ ಆರಂಭದ ದಿನಗಳಲ್ಲಿ ಹೊಸ ಹೊಸ ಮೂಮೆಂಟ್ ಗಳನ್ನು ಕಲಿತಾಗಲು ಕೂಡಾ ನನಗೆ ಇಷ್ಟೇ ಖುಷಿಯಾಗುತ್ತಿತ್ತು. ಅದೇ ರೀತಿ ಸ್ಕೂಬಾ ಡೈವಿಂಗ್ ಕೂಡ ಕಲಿಯುವಾಗಲೂ ಕೂಡಾ ನನಗೆ ಖುಷಿಯಾಗಿದೆ. ಒಟ್ಟಿನಲ್ಲಿ ಸ್ಕೂಬಾ ಡೈವಿಂಗ್ ನನ್ನ ಮನಸ್ಸಿಗೆ ಹತ್ತಿರವಾದಂತಹ ವಿಚಾರ” ಎಂದು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಕಿಶನ್ ಬಿಳಗಲಿ.