ಲವ್ ಮಾಕ್ಟೇಲ್ ಚಿತ್ರ ಖ್ಯಾತಿಯ ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಮತ್ತೊಂದು ಚಿತ್ರಕ್ಕೆ ಜೋಡಿಯಾಗಿದ್ದು, ಚಿತ್ರವು ಫೆ.17ಕ್ಕೆ ಬಿಡುಗಡೆಯಾಗಲಿದೆ. ಲವ್ ಮಾಕ್ಟೇಲ್ ಚಿತ್ರ ಖ್ಯಾತಿಯ ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಮತ್ತೊಂದು ಚಿತ್ರಕ್ಕೆ ಜೋಡಿಯಾಗಿದ್ದು, ಚಿತ್ರವು ಫೆ.17ಕ್ಕೆ ಬಿಡುಗಡೆಯಾಗಲಿದೆ.
ಲವ್ ಬರ್ಡ್ಸ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ಅವರು ನಟಿಸಿದ್ದು, ಚಿತ್ರವನ್ನು ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡಿದ್ದಾರೆ. ಕೃಷ್ಣ ಮತ್ತು ಮಿಲನಾ ಮೊದಲು ಪ್ರೀತಂ ಗುಬ್ಬಿ ಅವರ ನಮ್ ದುನಿಯಾ ನಮ್ ಸ್ಟೈಲ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಂತರ ಚಾರ್ಲಿ, ಲವ್ ಮಾಕ್ಟೈಲ್ 1 ಮತ್ತು 2 ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಿಜ ಬದುಕಿನಲ್ಲೂ ಜೋಡಿಯಾಗಿರುವ ಇವರು ಸಿನಿಪ್ರಯಾಣದಲ್ಲಿ ನಾಲ್ಕನೇ ಜಿತ್ರದಲ್ಲಿ ಜೋಡಿಯಾಗಿ.
ಲವ್ ಬರ್ಡ್ಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿವಾಹದ ನಂತರ ಆಧುನಿಕ ಯುಗದ ಜೋಡಿಗಳು ಯಾವ ರೀತಿಯಲ್ಲಿ ಜೀವನ ನಡೆಸುತ್ತಾರೆ ಎಂಬುದು ಚಿತ್ರದ ಕಥೆಯಾಗಿದ್ದು, ಚಿತ್ರದಲ್ಲಿ ಪ್ರಮುಖ ಪಾತ್ರವಾಗಿರುವ ವಕೀಲೆ ಪಾತ್ರದಲ್ಲಿ ಸಂಯುಕ್ತ ಹೊರನಾಡ್ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಕ್ತಿ ಶೇಖರ್ ಅವರು ಛಾಯಾಗ್ರಹಣ ಮಾಡಿದ್ದು, ಕವಿ ರಾಜ್ ಅವರ ಸಾಹಿತ್ಯ, ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ.
Leave a Review