ಹಾಸನ: ಜಿಲ್ಲೆಯ ಪ್ರಸಿದ್ಧ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ಇಂದಿನಿAದ ಪ್ರಾರಂಭವಾಯಿತು. ಮಧ್ಯಾಹ್ನ ೧೨ ಗಂಟೆಗೆ ಹಾಸನಾಂಬೆ
ದೇವಿಯ ದೇವಾಲಯದ ಬಾಗಿಲನ್ನು ಧಾರ್ಮಿಕ ಪೂಜಾ ಕೈಂಕರ್ಯದ ಮೂಲಕ ತೆರೆಯಲಾಯಿತು. ಅ.೧೦ರಿಂದ ಅ.೧೭ ರವರೆಗೆ ಬೆ.೧೦ ರಿಂದ ಮ.೦೧ ಗಂಟೆಯವರೆಗೆ ಮಾತ್ರ ಶಿಷ್ಟಾಚಾರ ದರ್ಶನಕ್ಕೆ ಅವಕಾಶವಿರುತ್ತದೆ. ಅ.೧೮ರಿಂದ ಅ.೨೨ರವರೆಗೆ ಯಾವುದೇ ರೀತಿಯ ಶಿಷ್ಟಾಚಾರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅ.೨೩ರಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.
ಈ ವರ್ಷ ೧೨ ದಿನಗಳವರೆಗೆ ದೇವಿಯ ದರ್ಶನಕ್ಕೆ ಅವಕಾಶವಿದ್ದು, ಅಂದಾಜು ೨೦ ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ವರ್ಷಕ್ಕೊಮ್ಮೆ ಸಿಗುವ ಹಾಸನಾಂಬೆ ದೇವಿಯ ದರ್ಶನಕ್ಕೆ ಸಹಸ್ರಾರು ಭಕ್ತಗಣ ಕಾದು ಕುಳಿತಿದೆ. ೨೪ ಗಂಟೆ ದೇವಸ್ಥಾನದ ಬಾಗಿಲು
ತೆರೆದಿರುತ್ತೆ: ದಿನದ ೨೪ ಗಂಟೆಗಾಲ ಕಾಲದೇವಸ್ಥಾನ ಬಾಗಿಲು ಓಪನ್ ಇರುತ್ತದೆ. ಆದರೆ ಪೂಜೆಯ ಕೆಲಸಗಳನ್ನ ಮಾಡುವ ಸಮಯದಲ್ಲಿ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಉಳಿದ ಸಮಯದಲ್ಲಿ ಅವಕಾಶ ನೀಡಲಾಗುತ್ತದೆ. ಅಲ್ಲದೇ, ಹಿಂದಿನ ವರ್ಷ ಈ ಉತ್ಸವಕ್ಕೆ ೬.೮೦ ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗಿತ್ತು.
ಆದರೆ ಈ ವರ್ಷ ಇನ್ನೂ ಜಾಸ್ತಿ ಆಗಬಹುದು ಎಂದಿದ್ದಾರೆ. ಈ ವೇಳೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ತುಮಕೂರು ಶ್ರೀಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳು, ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ, ಕರ್ನಾಟಕ ರಾಜ್ಯ ಗೃಹ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ.ಶಿವಲಿAಗೇಗೌಡ, ಶಾಸಕರಾದ ಸ್ವರೂಪ್ ಪ್ರಕಾಶ್ ಸೇರಿದಂತೆ ಇತರರು ಇದ್ದರು. ವಿಐಪಿಗಳು ದರ್ಶನಕ್ಕೆ ಬಂದರೆ ಇದರಿಂದ ಜನ ಸಾಮಾನ್ಯರಿಗೆ ಬಹಳ ತೊಂದರೆ ಆಗುತ್ತಿತ್ತು.
ಅದರಲ್ಲೂ ಅವರ ಜೊತೆ ಇನ್ನೂ ೧೦ ರಿಂದ ೧೫ ಜನ ಬರುವುದರಿಂದ ಬಹಳಷ್ಟು ಹೊತ್ತು ಜನ ಜ್ಯೂನಲ್ಲಿ ಕಾಯಬೇಕಿತ್ತು. ಹಾಗಾಗಿ ಈ ಬಾರಿ ವಿಐಪಿಗಳ ದರ್ಶನಕ್ಕೆ ಸಹ ನಿಯಮಗಳನ್ನ ಜಾರಿ ಮಾಡಲಾಗಿದೆ. ಈ ಬಾರಿ ಗಣ್ಯರ ಜೊತೆ ಕೇವಲ ೪ ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ ಇಡೀ ದಿನ ಅವಕಾಶ ನೀಡುವುದಿಲ್ಲ. ಕೇವಲ ಬೆಳಗ್ಗೆ ೧೦:೩೦ ರಿಂದ ಮಧ್ಯಾಹ್ನ ೧೨:೩೦ ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇವುಗಳನ್ನ ನಿರ್ವಹಣೆ ಮಾಡಲು ಹಾಸನ ಎಡಿಸಿ ನಿಯೋಜನೆ ಮಾಡಲಾಗಿದೆ. ಆದರೆ ವಿಐಪಿ ಪಾಸ್ ಇರುವವರಿಗೆ ಪ್ರತಿದಿನ ಬೆಳಗ್ಗೆ ೭ ರಿಂದ ಬೆಳಿಗ್ಗೆ ೧೦ ಗಂಟೆವರೆಗೆ ಸಹ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಹಾಗೆಯೇ, ಬೆಳಿಗ್ಗೆ ೭:೩೦ ರಿಂದ ಬೆಳಿಗ್ಗೆ ೧೦:೩೦ ರವರೆಗೂ ಗೋಲ್ಡ್ ಪಾಸ್ ಇದ್ದವರಿಗೆ ಅವಕಾಶ ನೀಡಲಾಗುತ್ತದೆ.
ಅಕ್ಟೋಬರ್ ೨೧ ಮತ್ತು ೨೨ರಂದು ಈ ರೀತಿ ವಿಐಪಿ ಪ್ರೋಟ್ ಕಾಲ್ ದರ್ಶನ ಇರುವುದಲ್ಲ. ಬರೀ ಸಾರ್ವಜನಿಕರಿಗೆ ಮಾತ್ರ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ. ಅದರ ಜೊತೆಗೆ ಒಂದು ದಿನಕ್ಕೆ ಒಂದು ಸಾವಿರ ಮಂದಿಗೆ ಮಾತ್ರ ಪಾಸ್ಗಳನ್ನ ಕೊಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇನ್ನು ವಿಶೇಷ ದರ್ಶನಕ್ಕೆ ೩೦೦ ರೂ. ೧೦೦೦ ರೂ. ಪಾಸ್ ವ್ಯವಸ್ಥೆ ಮಾಡಲಾಗಿದ್ದು, ವಿಐಪಿ, ವಿವಿಐಪಿ ಪಾಸ್ ರದ್ದು ಮಾಡಲಾಗಿದೆ.