ಬೆAಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬAಧಪಟ್ಟAತೆ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಗೆ ಹಾಸಿಗೆ ದಿಂಬು ಸೇರಿದಂತೆ ಕನಿಷ್ಠ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇಂದು ಅರ್ಜಿಯ ಸಂಬAಧ ಬೆಂಗಳೂರಿನ ೫೭ನೇ ಸಿಸಿಎಚ್ ಕೋರ್ಟ್ ವಿಚಾರಣೆ ನಡೆಸಿ ವಿಚಾರಣೆಯನ್ನ ಮತ್ತೆ ಸೆಪ್ಟೆಂಬರ್ ೨೫ಕ್ಕೆ ಮುಂದೂಡಿದೆ.
ಇAದು ಬೆಂಗಳೂರಿನ ೫೭ನೇ ಸಿಸಿಎಚ್ ನ್ಯಾಯಾಲಯದಲ್ಲಿ ದರ್ಶನ ಸಲ್ಲಿಸಿರುವ ಅರ್ಜ ಕುರಿತು ವಿಚಾರಣೆ ನಡೆಯಿತು ಈ ವೇಳೆ ಕೊಲೆ ಆರೋಪಿಗಳಾದ ದರ್ಶನ್ ಮತ್ತು ಪವಿತ್ರ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟಿಗೆ ಹಾಜರಾಗಿದ್ದರು . ವಿಚಾರಣೆಯ ಬಳಿಕ ಕೋರ್ಟ್ ಸೆಪ್ಟೆಂಬರ್ ೨೫ಕ್ಕೆ ಮತ್ತೆ ವಿಚಾರಣೆ ಮುಂದೂಡಿತು ಹಾಗಾಗಿ ನಟ ದರ್ಶನ್ ಗೆ ಹಾಸಿಗೆ ದಿಂಬು ಸೇರಿದಂತೆ ಕನಿಷ್ಠ ಸೌಲಭ್ಯ ನೀಡಿದ ವಿಚಾರವಾಗಿ ಮತ್ತೆ ನಿರಾಸೆಯಾಗಿದೆ.
ದೋಷಾರೋಪ ಹೊರಿಸುವ ದಿನಾಂಕವನ್ನು ಕೂಡ ಇಂದು ಕೋರ್ಟ್ ನಿಗದಿಪಡಿಸುವ ಸಾಧ್ಯತೆ ಇತ್ತು. ಕಳೆದ ವಿಚಾರಣೆಯ ವೇಳೆ ದರ್ಶನ್ ಪರ ವಕೀಲರು ಸುಧೀರ್ಘ ವಾದ ವಾದಮಂಡನೆ ನಡೆಸಿದರು. ಪಕ್ಕದ ಸೆಲ್ ನಲ್ಲಿರುವ ಟೆರರಿಸ್ಟ್ ಗಳಿಗೆ ಕೇರಂ, ಟಿವಿ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಲಾಗಿದ್ದು ಕೇವಲ ಕೊಲೆ ಆರೋಪಿಯಾಗಿರುವ ನಟ ದರ್ಶನ್ ಗೆ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ ಎಂದು ವಾದಿಸಿದ್ದರು.