ಪೀಣ್ಯ ದಾಸರಹಳ್ಳಿ: ಬಿ ನಟರಾಜ್ ಕುಮಾರ್ ಸ್ಮರಣಾರ್ಥ ಬಿಬಿಎನ್ ಸೇವಾ ಟ್ರಸ್ಟ್ ವತಿಯಿಂದ ಅಯೋಜಿಸಿದ್ದ ವೈಕುಂಠ ಏಕಾದಶಿ ಮಹೋತ್ಸವದಲ್ಲಿ.
ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಬಿ ಜಗದೀಶ್ ಕುಮಾರ್ ಹಾಗು ಸಹೋದರ ಬಿಬಿಎನ್ ಟ್ರಸ್ಟ್ ನ ಅಧ್ಯಕ್ಷ ಬಿ ದೇವೆಂದ್ರ ಕುಮಾರ್ ಕುಟುಂಬಸ್ಥರು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ದಿವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.
ಸಾರ್ವಜನಿಕರು, ಕುಟುಂಬ ಸಮೇತರಾಗಿ ಬಂದು ಶ್ರೀ ಸ್ವಾಮಿಯ ದರ್ಶನ ಪಡೆದರು. ವಿಶೇಷವಾಗಿ ದರ್ಶನಬಳಿಕ ಬಂದ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಹಾಗು ತಿರುಪತಿಯಿಂದ ತಂದ ಲಡ್ಡು ವಿತರಣೆ ಕಾರ್ಯ ಹಮ್ಮಿಕೊಳ್ಳಲಾಗಿತ್ತು.ಇದೇ ವೇಳೆ ಉಚಿತ ಅರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ ಆಗಮಿಸಿ ಲಕ್ಷ್ಮಿ ವೆಂಕಟೇಶ್ವರ ದರ್ಶನ ಪಡೆದರು. ಕುಟುಂಬಸ್ಥರಾದ ಗಂಗಮ್ಮ ಭೋಜರಾಜ್ ಹಾಗೂ ಕೆಪಿಸಿಸಿ ನರಸಿಂಹ, ಭೈರವ ಗೌಡ, ಶ್ರೀನಿವಾಸ್ ಗೌಡ, ಮುಂತಾದವರು ಉಪಸ್ಥಿತರಿದ್ದರು.