ಬೆಂಗಳೂರು: ಚಾರ್ಜ್ ಶೀಟ್ ಆದ್ಮೆಲೆ ದರ್ಶನ್ ಮತ್ತೊಂದು ಸಂಕಷ್ಟ ಎದುರಾಗಲಿದೆ. ಚಿತ್ರರಂಗಕ್ಕೂ ಕೂಡ ಇದೊಂದು ಆಘಾತಕಾರಿ ವಿಚಾರ ಎಂದು ಹೇಳಲಾಗುತ್ತಿದೆ. ದರ್ಶನ್ನ ಹಾಕಿ ಚಿತ್ರ ಮಾಡೋರು ಇನ್ಮೇಲೆ ಇದನ್ನ ಗಮನಿಸಲೇಬೇಕಾಗುತ್ತದೆ. ಈ `ರದ್ದು’ನ್ನು ಗಮನದಲ್ಲಿಟ್ಟುಕೊಂಡು ಚಿತ್ರೀಕರಣ ಪ್ಲಾನ್ ಮಾಡಬೇಕು ಎಂದು ಚರ್ಚೆ ನಡೆಯುತ್ತಿದೆ.
ಹೀಗಾಗಿ ನಟನನ್ನ ಹಾಕಿ ಚಿತ್ರ ನಿರ್ದೇಶನ ಮಾಡುವ ನಿರ್ದೇಶಕರು ಕೂಡ ಗಮನಹರಿಸಬೇಕಾಗಿದೆ.ಚಾರ್ಜ್ ಶೀಟ್ ಆದ ಬಳಿಕ ಆತನ ಪಾಸ್ ಪೋರ್ಟ್ ರದ್ದಾಗುತ್ತದೆ. ಕೊಲೆ ಆರೋಪಿ ಹಾಗು ಪ್ರಭಾವಿಯಾಗಿರುವ ಕಾರಣ.ಪಾಸ್ ಪೋರ್ಟ್ ರದ್ಧತಿಗೆ ಪತ್ರ ಬರೆಯಲುಪೊಲೀಸರು ಚಿಂತನೆ ನಡೆಸಿದ್ದಾರೆ.
ಕೊಲೆ ಆರೋಪಿ ಬೇರೆ ದೇಶಗಳಿಗೆ ಎಸ್ಕೇಪ್ ಆಗಬಹುದು ಎಂಬ ಕಾರಣದಿಂದ ಪಾಸ್ ಪೋರ್ಟ್ ರದ್ಧತಿಗೆ ಪೊಲೀಸರು ಪತ್ರ ಬರೆಯಲಿದ್ದಾರೆ.
ಆತ ಎಷ್ಟೇ ಪ್ರಭಾವಿ , ಗಣ್ಯನಾಗಿದ್ದರೂ ಪೊಲೀಸರಿಗೆ ಹಾಗು ಕಾನೂನಿಗೆ ಆತನೊಬ್ಬ ಆರೋಪಿ ಅಷ್ಟೇ.ಕೃತ್ಯವನ್ನ ಎಸಗಿರುವ ವ್ಯಕ್ತಿ ಪರಾರಿಯಾಗದಂತೆ ನೋಡಿಕೊಳ್ಳಬೇಕಿದೆ. ಈ ಹಿನ್ನಲೆ ಪಾಸ್ ಪೋರ್ಟ್ ರದ್ಧು ಮಾಡಲು ಪತ್ರ ಬರೆಯಲಿರುವ ಪೊಲೀಸರು. ಪಾಸ್ ಪೋರ್ಟ್ ರದ್ಧು ಬಳಿಕ ದೇಶದಲ್ಲಿಯೇ ದರ್ಶನ್ ಚಿತ್ರಗಳನ್ನ ಚಿತ್ರೀಕರಣ ಮಾಡಬೇಕು.
ವಿದೇಶದಲ್ಲಿ ಚಿತ್ರೀಕರಣದ ಕನಸನ್ನ ಕೈ ಬಿಡಬೇಕಾಗುತ್ತದೆ. ಸದ್ಯ ವಿದೇಶದಲ್ಲಿ ಚಿತ್ರೀಕರಣ ಮಾಡುವ ಟ್ರೆಂಡ್ ಇದೆ. ಪೂರ್ತಿ ಆಗದಿದ್ರೂ ಒಂದು ಹಾಡನ್ನಾದರೂ ವಿದೇಶದಲ್ಲಿ ಚಿತ್ರೀಕರಣ ಮಾಡುವ ಟ್ರೆಂಡ್ಇದೆ. ಮುಂದಿನ ದಿನಗಳಲ್ಲಿ ವಿದೇಶಿ ಚಿತ್ರೀಕರಣ ಮಾಡಿದರೆ ಅದಕ್ಕೆ ನ್ಯಾಯಾಲಯದ ಅನುಮತಿ ಅಗತ್ಯ. ನ್ಯಾಯಾಲಯ ಅನುಮತಿ ನೀಡಿದರೆ ಮಾತ್ರ ವಿದೇಶಕ್ಕೆ ತೆರಳಬಹುದು. ಆದರೆ ಪಾಸ್ ಪೋರ್ಟ್ ರದ್ದು ಮಾಡಿದರೆ ವಿದೇಶಿ ಕನಸೂ ಭಗ್ನ ಎಂದು ಚರ್ಚೆ ನಡೆದಿದೆ.