ನವಲಗುಂದ: ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ ಹುಚ್ಚಪ್ಪಗಳಿರಾ ಎನ್ನುವಂತಹ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದ ಭಕ್ತ ಶ್ರೇಷ್ಠ ಕನಕದಾಸರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಧಾನ ಗುರುಗಳಾದ ಎಸ್.ಎಸ್. ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಸರ್ಕಾರಿ ಹಿರಿಯ
ಪ್ರಾಥಮಿಕ ಶಾಲೆ ನಂ-೩ ರಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಕನಕದಾಸರ ಜಯಂತಿಯು ಕೇವಲ ಹಬ್ಬವಲ್ಲ ಇದು ಅವರ ಕೊಡುಗೆಗಳು ನಮ್ಮ ಸಾಂಸ್ಕöÈತಿಕ ಮತ್ತು ಆದ್ಯಾತ್ಮಿಕ ಭೂ ದೃಶ್ಯದಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ ಆತ್ಮಕ್ಕೆ ನೀಡುವಂತಹ ಗೌರವವಾಗಿದೆ ಎಂದರು..
ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಮಾತನಾಡಿ ಸುಜ್ಞಾನದ ದಾರಿ ದೀಪವಾದ ಕನಕದಾಸರು ಕವಿ ಮತ್ತು ಸಂಗೀತಗಾರರಿಗಿAತ ಮಿಗಿಲಾದ ಅವರು ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೆರೂರಿದ ಜಾತಿ ಪದ್ಧತಿಯ ವಿರುದ್ಧ ಮತ್ತು ಸಮಾಜದಲ್ಲಿ ಶಾಂತಿ, ಸಮಾನತೆಯ ಸಂದೇಶಗಳನ್ನು ಹರಡಲು ತಮ್ಮ ಮಧುರ ಶಕ್ತಿಯನ್ನು ಬಳಸಿದರು. ಅವರ ರಚನೆಗಳು ಆತ್ಮವನ್ನು ಕಲಕುವ ಕೀರ್ತನೆಗಳಾಗಿ ಇವತ್ತಿಗೂ ಆದರ್ಶ ಮಯವಾಗಿದೆ ಎಂದರು..
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಸದಸ್ಯ ಕಾಶೀಮಸಾಬ ಮಚಲಿಬಂದರ, ಸಹ ಶಿಕ್ಷಕರಾದ ಆರ್.ಬಿ.ಹಳ್ಳಿಕೇರಿ,ಎಂ.ಸಿ.ಚನ್ನಪ್ಪಗೌಡ್ರ,ಶಿವಯೋಗಿ ಜಂಗಣ್ಣವರ, ಕೆ.ಕೆ.ಮಂಕಣಿ, ಕೆ.ಎಫ್
ಬಂತಿ, ಎಂ.ಎನ್.ವಗ್ಗರ, ಅತಿಥಿ ಶಿಕ್ಷಕಿ ಬಿಬಿಜಾನ ಸುಂಕದ ಉಪಸ್ಥಿತರಿದ್ದರು..



