ದಾಸರಹಳ್ಳಿ: ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ. ಧನಂಜಯ ಅಧಿಕೃತವಾಗಿ ಘೋಷಣೆಯಾಗಿದ್ದನ್ನು ಖಂಡಿಸಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಪಿ.ಎನ್. ಕೃಷ್ಣ ಮೂರ್ತಿ ತಿಳಿಸಿದ್ದಾರೆ. ಸುಮಾರು ಐದು ವರ್ಷ ಗಳಿಂದ ಪಕ್ಷದ ವರಿಷ್ಟರು ಹೇಳಿದ ಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಾ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಂಘಟನೆ ಮಾಡಿ ಕಾಂಗ್ರೆಸ್ ಪಕ್ಷದ ವಿವಿಧ ಘಟಕದ ಎಲ್ಲಾ ಮುಖಂಡರು, ಕಾರ್ಯಕರ್ತರುಗಳನ್ನು ಒಟ್ಟಿಗೆ ಕರೆದುಕೊಂಡು ಕೆಲಸ ಮಾಡಿದ್ದೇನೆ.
ಈಗ ಬಿಜೆಪಿ ಯಿಂದ ಬಂದ ವೆಕ್ತಿಯನ್ನು ಕಾಂಗ್ರೆಸ್ ಅಭ್ಯರ್ಥಿ ಅಂತ ವರಿಷ್ಟರು ತಿಳಿಸಿದ್ದನ್ನು ಖಂಡಿಸಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರುಗಳ ಅಭಿಪ್ರಾಯಪಡೆದು ಅವರ ಬೆಂಬಲದಿಂದ ನಾನು ಬಂಡಾಯ ಅಭ್ಯರ್ಥಿ ಅಂದರೆ ಪಕ್ಷೇತರ ನಾಗಿ ಚುನಾವಣೆಯಲ್ಲಿ ಇರುತ್ತೇನೆ ಎಂದು ಕೃಷ್ಣ ಮೂರ್ತಿ ತಿಳಿಸಿದ್ದಾರೆ.
ದಾಸರಹಳ್ಳಿಯಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದವರು ತುಂಬಾ ಜನರಿದ್ದಾರೆ. ಈಗ ಅಭ್ಯರ್ಥಿಯಾಗಿರುವ ಧನಂಜಯ ಯಾರು ಅಂತ ನಮಗೆ ಯಾರಿಗೂ ಗೊತ್ತಿಲ್ಲ. ಅವರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಯಾರೂ ಇಲ್ಲ. ಅವರು ಹೇಗೆ ಗೆಲ್ಲುತ್ತಾರೆ. ಸೋಲು ಶತ ಸಿದ್ದ. ಇಂಥ ಅಭ್ಯರ್ಥಿಯಿಂದ ಹಣ ಪಡೆದುಕೊಂಡು ಟಿಕೆಟ್ ಕೊಡಲಾಗಿದೆ.
ಕೆ ಪಿ ಸಿ ಸಿ ಅಂದರೆ ಕೇವಲ ಡಿ. ಕೆ ಶಿವಕುಮಾರ್ ಹಾಗೂ ಡಿ. ಕೆ ಸುರೇಶ್ ಅಲ್ಲ. ಅವರ ನೆಂಟರು ಅನ್ನೂ ಕಾರಣಕ್ಕೆ ಟಿಕೆಟ್ ಕೊಟ್ಟಿದ್ದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.ನಮ್ಮನ್ನು ಹುರಿ ದುಂಬಿಸಿ ಐದು ವರ್ಷ ಪಕ್ಷದ ಕೆಲಸ ಮಾಡಿಸಿ ಕೊಂಡು ನಮ್ಮ ಹಣ ಖರ್ಚು ಮಾಡಿಸಿ ಈಗ ಬೇರೆಯವರಿಗೆ ಟಿಕೆಟ್ ಕೊಡುತ್ತೇವೆಂದು ಸೌಜನ್ಯಕಾದರು ನಮ್ಮ ಜೊತೆಗೆ ಮಾತನಾಡಲಿಲ್ಲ ಎಂದು ಬೇಸರದಿಂದಲೇ ಹೇಳಿದ ಕೃಷ್ಣ ಮೂರ್ತಿ ಇದಕ್ಕೆಲ್ಲಾ ಕಾರಣ ಡಿ. ಕೆ ಸುರೇಶ್ ಎಂದು ನೇರವಾಗಿ ಆರೋಪ ಮಾಡುತ್ತಾ ಇವರು ಯಾರೂ ದಾಸರಹಳ್ಳಿಯಲ್ಲಿ ಕೊರೊನ ಬಂದಾಗ ಎಲ್ಲಿ ಇದ್ದರು.
ನೊಂದವರಿಗೆ ಏನಾದರೂ ಸಹಾಯ ಮಾಡಿದ್ದಾರಾ. ನಾವೆಲ್ಲರೂ ಸೇರಿ ಮಾಡಿದ ಕೆಲಸಕ್ಕೆ ಬೆಲೆ ಇಲ್ಲವಾ ಅಂತ ಡಿ. ಕೆ ಅಣ್ಣ ತಮ್ಮ ಇಬ್ಬರ ವಿರುದ್ಧ ಆಕ್ರೋಶ ವೆಕ್ತಪಡಿಸಿದರು. ನಾಮ ಪತ್ರ ಸಲ್ಲಿಸುವಾಗ ದಾಸರಹಳ್ಳಿಯ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ ಕಾದು ನೋಡಿ ಎಂದು ಕೃಷ್ಣ ಮೂರ್ತಿ ಹೇಳಿದ್ದಾರೆ.
Leave a Review