ಕೊಚ್ಚಿನ್: ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಖಿನ್ನತೆಗೆ ಜಾರಿದ್ದ ವ್ಯಕ್ತಿಯೊಬ್ಬರು ಮಗಳನ್ನೇ ಹತ್ಯೆ ಮಾಡಿರುವ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ.
ನಾಲ್ಕು ವರ್ಷಗಳ ಹಿಂದೆ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು, ಬಳಿಕ ಆತ ಖಿನ್ನತೆಗೆ ಜಾರಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.
ಆಲಪ್ಪುಳದ ಪುನ್ನಮೂಡು, ಮಾವೇಲಿಕ್ಕರ ಮೂಲದ…
ಶ್ರೀಮಹೇಶ್ ಎಂಬಾತ ತನ್ನ ಮಗಳು ನಕ್ಷತ್ರಾಳನ್ನು ಕೈ ಕೊಡಲಿಯಿಂದ ಕಡಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅವರ ಮನೆಯಲ್ಲಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ನಕ್ಷತ್ರಳ ಕಿರುಚಾಟವನ್ನು ಕೇಳಿ ಮನೆಗೆ ಧಾವಿಸಿದ ತಾಯಿ ಮೇಲೆ ಸಹ ಹಲ್ಲೆ ಮಡಿದ್ದಾರೆ ಎನ್ನಲಾಗಿದೆ.
ಪಕ್ಕದ ಮನೆಯಲ್ಲಿ ಮಗಳೊಂದಿಗೆ ವಾಸವಿದ್ದ ಶ್ರೀಮಹೇಶ್ ಅವರ ತಾಯಿ ಸುನಂದಾ (62) ಅವರ ತಲೆ ಮತ್ತು ಕುತ್ತಿಗೆಗೆ ಗಾಯಗಳಾಗಿವೆ. ಘೋರ ಕೃತ್ಯಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
Leave a Review