This is the title of the web page
This is the title of the web page

ದೌಪದಿ ಮುರ್ಮು ಅವರಿಗೆ ದ.ಅಮೆರಿಕದ ಅತ್ಯುನ್ನತ ನಾಗರಿಕ ಗೌರವ

ಪರಮಾರಿಬೊ (ಸುರಿನಾಮ್): ದಕ್ಷಿಣ ಅಮೆರಿಕದ ಸುರಿನಾಮ್ ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ದಿ ಚೈನ್ ಆಫ್ ಯೆಲ್ಲೋ ಸ್ಟಾರ್’ ಎಂಬ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರದಾನ ಮಾಡಿ ಗೌರವಿಸಿದೆ.
ದ್ರೌಪದಿ ಮುರ್ಮು ಈ ಪ್ರಶಸ್ತಿಯನ್ನು ಪಡೆದಕೊಂಡ ಮೊದಲ ಭಾರತೀಯರಾಗಿದ್ದಾರೆ.

ಮುರ್ಮು ಅವರು ಸುರಿನಾಮ್ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪರ್ಸಾದ್ ಸಂತೋಖಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಸುರಿನಾಮ್‍ನ ಅತ್ಯುನ್ನತ ಪ್ರಶಸ್ತಿಯಾದ ‘ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್’ ಅನ್ನು ಸ್ವೀಕರಿಸಲು ನನಗೆ ಬಹಳ ಗೌರವವಿದೆ’ ಈ ಮನ್ನಣೆಯು ನನಗೆ ಮಾತ್ರವಲ್ಲದೆ ನಾನು ಪ್ರತಿನಿಧಿಸುವ ಭಾರತದ ಎಲ್ಲಾ ಜನರಿಗೂ ಸಹ ಮಹತ್ತರವಾದ ಮಹತ್ವವನ್ನು ಹೊಂದಿದೆ’ ಎಂದು ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.

ಎರಡು ದೇಶಗಳ ನಡುವಿನ ಭ್ರಾತೃತ್ವ ಸಂಬಂಧವನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಭಾರತೀಯ-ಸುರಿನಾಮಿಸ್ ಸಮುದಾಯದ ಸತತ ಪೀಳಿಗೆಗೆ ನಾನು ಈ ಗೌರವವನ್ನು ಅರ್ಪಿಸುತ್ತೇನೆ’ ಎಂದು ಮುರ್ಮು ಹೇಳಿದರು.
ವಿದೇಶಿ ಪ್ರವಾಸದಲ್ಲಿರುವ ಮುರ್ಮು, ಜೂನ್ 4 ರಂದು ಸುರಿನಾಮ್‍ನ ಪರಮಾರಿಬೊಗೆ ಭೇಟಿ ನೀಡಿದ್ದರು.

‘ಸುರಿನಾಮ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದುಕೊಂಡ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳು. ಸುರಿನಾಮ್ ಸರ್ಕಾರ ಮತ್ತು ಜನರು ನೀಡಿರುವ ‘ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್’ ಗೌರವವು ಎರಡು ದೇಶಗಳ ನಡುವಿನ ಸ್ನೇಹದ ಸಂಕೇತವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.