ಬೆಂಗಳೂರು :ರಾಜ್ಯದಲ್ಲಿ ಇನ್ಮುಂದೆ ೧೦ ಕೆಜಿಯ ಅಕ್ಕಿ ಬದಲು ೫ ಕೆಜಿ ಅಕ್ಕಿ ಕೊಟ್ಟು, ಇನ್ನುಳಿದ ೫ ಕೆಜಿಯ ಲೆಕ್ಕದಲ್ಲಿ ದಿನಸಿ ಪದಾರ್ಥಗಳನ್ನು ವಿತರಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಹಸಿವುಮುಕ್ತ ಕರ್ನಾಟಕ ನಿರ್ಮಾಣವೇ ನಮ್ಮ ಮುಖ್ಯಉದ್ದೇಶವಾಗಿರುವುದರಿಂದ ಅನ್ನಭಾಗ್ಯದ ಅಕ್ಕಿಯ ಜೊತೆಗೆ ಇಂದಿರಾಕಿಟ್ ವಿತರಿಸಲು ನಮ್ಮ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅನ್ನಭಾಗ್ಯದ ೧೦ ಕೆಜಿಯಅಕ್ಕಿಯ ಬದಲು ಇನ್ಮುಂದೆ ೫ ಕೆಜಿ ಅಕ್ಕಿ ಕೊಟ್ಟು, ಇನ್ನುಳಿದ ೫ ಕೆಜಿಯ ಲೆಕ್ಕದಲ್ಲಿ ದಿನಸಿ ಪದಾರ್ಥಗಳನ್ನು ವಿತರಿಸಲಿದ್ದೇವೆ. ಯಾರೊಬ್ಬರೂ ಹಸಿವಿನಿಂದ ಇರಬಾರದುಎಂಬುದೇ ನಮ್ಮ ಸರ್ಕಾರದ ಕಾಳಜಿಯಾಗಿದೆ ಎಂದು ಹೇಳಿದ್ದಾರೆ.
ಇಂದಿರಾ ಆಹಾರದ ಕಿಟ್ನಲ್ಲಿ ಏನಿರಲಿದೆ?
ತೊಗರಿ ಬೇಳೆ – ೧ ಕೆಜಿ
ಹೆಸರುಕಾಳು- ೧ ಕೆಜಿ
ಅಡುಗೆಎಣ್ಣೆ – ೧ ಲೀಟರ್
ಸಕ್ಕರೆ – ೧ ಕೆಜಿ
ಉಪ್ಪು – ೧ ಕೆಜಿ
ಅನ್ನಭಾಗ್ಯಯೋಜನೆಯಡಿ ೫ ಕೆಜಿ ಹೆಚ್ಚುವರಿ ಅಕ್ಕಿ ನೀಡಲುಅಯವ್ಯಯದಲ್ಲಿ ಹಂಚಿಕೆ ಮಾಡಿರುವ ರೂ.೬,೪೨೬ಕೋಟಿಅನುದಾನದಲ್ಲಿ ರೂ.೬,೧೧೯.೫೨ ಕೋಟಿ ವೆಚ್ಚದಲ್ಲಿಇಂದಿರಾಆಹಾರಕಿಟ್ಒದಗಿಸಲು ಬಜೆಟ್ ಮರು ಹಂಚಿಕೆ ಮಾಡಲು ನುಮೋದನೆ ನೀಡಿದೆ.