ಬೆAಗಳೂರು: ಲಾಲ್ ಬಾಗ್ ಹಾಳು ಮಾಡುವಷ್ಟು ಮೂರ್ಖ ನಾನಲ್ಲ. ಟನಲ್ ವಿರೋಧಿಸಿ ಬಿಜೆಪಿ ಅಭಿಯಾನ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಸಂಬAಧ ಮಾಧ್ಯಮಕ್ಕೆ ಉತ್ತರಿಸಿದ ಅವರು, ಸಹಿ ಸಂಗ್ರಹ ಮಾಡಲಿ ಅದಕ್ಕೆ ನಮ್ಮ ಅಭ್ಯಂತರ ಇಲ್ಲ.ಅಶೋಕ್ ಅಧ್ಯಕ್ಷತೆಯಲ್ಲೇ ಸಮಿತಿ ರಚನೆ ಮಾಡಲು ಸಿದ್ದ ಟನಲ್ನಿಂದಲೇ ತಾನೇ ಮೇಟ್ರೋ ಬಂದಿದ್ದು ಎಂದಿದ್ದಾರೆ.
ನಾನು ಎಲ್ಲವನ್ನು ಅಧ್ಯಯನ ಮಾಡಿದ್ದೇನೆ. ವಿಪಕ್ಷ ನಾಯಕ ಅಶೋಕ್ ತೇಜಸ್ವಿ ಸುರ್ಯ ಹೇಳುತ್ತೇನೆ’ ರಸ್ತೆ ಯೋಜನೆ ಬಗ್ಗೆ ಬೇಕಿದ್ದರೆ ಪರಿಹಾರ ನೀಡಲಿ. ತಾಂತ್ರಿಕವಾಗಿ ಸಮಸ್ಯೆ ಇದ್ದರೆ ಸಲಹೆ ನೀಡಿದರೆ ಸ್ವೀಕರಿಸುತ್ತೇವೆ. ಬೇಕಿದ್ದರೇ ಅವರೇ ಒಳ್ಳೆಯ ತಂತ್ರಜ್ಞರನ್ನು ಶಿಫಾರಸು ಮಾಡಲಿ ಎಂದು ಸಲಹೆ ನೀಡಿದ್ದಾರೆ. ಸತೀಶ್ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಅವರು, ಅವರವರ ವೈಯಕ್ತಿಕ ವಿಚಾರಕ್ಕೆ ಭೇಟಿ ನೀಡುತ್ತಾರೆ. ಅವರವರ ಕೆಲಸಗಳಿಗೆ ದೆಹಲಿಗೆ ಹೋಗುತ್ತಾರೆ. ಎಐಸಿಸಿ ಕಚೇರಿ ನಮಗೆಲ್ಲಾ ದೇವಾಲಯ ಇದ್ದಂತೆ. ಅವರು ಹೋಗಿ ಬರಲಿ ಬಿಡಿ. ನಾನು ೫-೬ಕ್ಕೆ ಬಿಹಾರಕ್ಕೆ ಹೋಗುತ್ತೇನೆ ಎಂದರು.



