ಬೆಂಗಳೂರು: ರಾಜ್ಯ ಸರ್ಕಾರ ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಮತ್ತು ಮೋಸವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇ-ಖಾತಾ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಆದರೆ, ಇದೀಗ ಇದೇ ಇ-ಖಾತಾ ಮಾಡಿಕೊಡಲು ಅಧಿಕಾರಿಗಳು ಹಣ ಕೇಳುತ್ತಿದ್ದಾರೆಂದು ಸಾರ್ವಜನಿಕರು ಡಿಸಿಎಂ ಡಿಕೆ ಶಿವಕುಮಾರ್ಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಕೆ ಆರ್ ಪುರಂನ ಟಿ ಸಿ ಪಾಳ್ಯದ ವೆಂಗಯ್ಯ ಪಾರ್ಕ್ ನಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ “ಬೆಂಗಳೂರು ನಡಿಗೆ” ಅಭಿಯಾನದ
ಅಂಗವಾಗಿ “ನಾಗರಿಕರೊಂದಿಗೆ ಸಂವಾದ” ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು. ಈ ವೇಳೆ ಓರ್ವ ವ್ಯಕ್ತಿ ಇ-ಖಾತಾ ಮಾಡಿಕೊಡಲು ಅಧಿಕಾರಿಗಳು
೧೫ ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ದೂರು ನೀಡಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಯಾರು ಯಾರು ಅಧಿಕಾರಿಗಳಿದ್ದಾರೆ ಹೆಸರು ಹೇಳಿ ಎಂದರು. ARO ಬಸವರಾಜ ಮತ್ತು ಆಐ ವಿಜನಪುರ ಎಂದು ವ್ಯಕ್ತಿ ಹೇಳಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಡಿಸಿಎಂ ಡಿಕೆ ಶಿವಕುಮಾರ್
ಸೂಚನೆ ನೀಡಿದ್ದಾರೆ.
ಇನ್ನು ಈ ವೇಳೆ ಪಾರ್ಕ್ನಲ್ಲಿ ನಡೆಯುತ್ತಿರುವ ಅಸಭ್ಯ ವರ್ತನೆ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದರು. ಶರ್ಟ್ ಬಿಚ್ಚಿಕೊಂಡು ಮಲಗಿರುತ್ತಾರೆ. ಹೀಗಾಗಿ ಸಂಜೆ ವೇಳೆ ಪಾರ್ಕ್ನಲ್ಲಿ ಹೆಣ್ಮಕ್ಕಳು ಓಡಾಡೋದು, ವಾಕಿಂಗ್ ಮಾಡುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಈ ವೇಳೆ ಹಣ ಕಟ್ಟಿದರೂ ನೀರು
ಬರುತ್ತಿಲ್ಲ ಅಂತಾ ಮತ್ತೊಬ್ಬರು ದೂರು ನೀಡಿದ್ದಾರೆ. BWSSB ಅಧಿಕಾರಿಯಾರಿದ್ದೀರಯ್ಯ ಎಂದ ಡಿಸಿಎಂ, ಅವರು ಕಂಪ್ಲೇAಟ್ ಮಾಡುತ್ತಿದ್ದಾರೆ ಬರಕೊಳ್ಳಿ
ಎಂದರು. ಸ್ಥಳೀಯ ನಿವಾಸಿ ರಮೇಶ್ ಬಾಬು ರೆಡ್ಡಿ ಎಂಬುವವರು ರಸ್ತೆಗಳು ಕಿತ್ತು ಹಾಳಾಗಿ ಹೋಗಿದೆ. ರಸ್ತೆಯಿಲ್ಲ, ಡ್ರೆöÊನೇಜ್ ಇಲ್ಲ. ಮುಖ್ಯ ರಸ್ತೆಗೆ ಕಾಮಗಾರಿ ಮಾಡಲು ಮನವಿ ಮಾಡಿದರು. ಈ ಕೆಆರ್ ಪುರಂ ಸುತ್ತಮುತ್ತ ದೇಹ ದಹನಕ್ಕೆ ವ್ಯವಸ್ಥೆ ಇಲ್ಲ. ಹೃದಯದ ಸಮಸ್ಯೆ ಆದಾಗ ಜಯದೇವ ಆಸ್ಪತ್ರೆ ಹೋಗಲು ಟ್ರಾಫಿಕ್ ಜಾಮ್ ಆಗುತ್ತೆ. ಏಖ ಪುರ ಭಾಗದಲ್ಲಿ ಒಂದು ಜಯದೇವ ಆಸ್ಪತ್ರೆ ನಿರ್ಮಾಣಕ್ಕೆ ಕೆಲ ಸಾರ್ವಜನಿಕರುಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಬೈರತಿ ಸವರಾಜ್, ಎಂಎಲ್ಸಿ ಶ್ರೀನಿವಾಸ್, ಮಾಜಿ ಸಂಸದ ಪ್ರೊ. ರಾಜೀವ್ ಗೌಡ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಬಿಎ
ಮುಖ್ಯ ಆಯುಕ್ತ ಡಾ ಮಹೇಶ್ವರರಾವ್ ಮತ್ತಿತರರು ಉಪಸ್ಥಿತರಿದ್ದರು.