ಬೆಂಗಳೂರು: ಆರ್ ಎ ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೂರನೇ ವರ್ಷದ ಡಿ ಪ್ಲೋ ಮೋ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರು ಇಂದು ಬೆಳಿಗ್ಗೆ ಪಲ್ಸರ್ ಮೋಟಾರ್ ಸೈಕಲ್ನಲ್ಲಿ ಹೋಗುತ್ತಿರುವಾಗ ಬಿದ್ದು ವಿನಾಯಕ್ (20)ಮೃತಪಟ್ಟಿರುತ್ತಾನೆ, ಹಿಂಬದಿ ಸವಾರ ಗಿರೀಶ್ ಗಾಯಗೊಂಡಿರುತ್ತಾನೆ.
ಇಂದು ಬೆಳಿಗ್ಗೆ ಪರೀಕ್ಷೆ ಇದ್ದ ಕಾರಣ ಜಿಗಣಿಯಿಂದ ಹೋಗುತ್ತಿದ್ದ ಇವರು ಗನಗಾನಹಳ್ಳಿ ಬಳಿ ಮೋಟರ್ ಸೈಕಲ್ ನಿಂದ ಬಿದ್ದು ಗಿರೀಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮತ್ತೊಬ್ಬ ವಿನಾಯಕ್ ಮೃತಪಟ್ಟಿರುತ್ತಾನೆ.ಪಟನಾ ಸ್ಥಳಕ್ಕೆ ಸಂಚಾರ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಭೇಟಿ ನೀಡಿರುತ್ತಾರೆ.