ಬೆಂಗಳೂರು : ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆ ಐ ಡಿ ಎ ಬಿ ಏರಿಯಾದ ರಸ್ತೆಯಲ್ಲಿ ಅತಿ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿ ಆಯಾ ತಪ್ಪಿ ಕೆಳಗೆ ಬಿದ್ದು ತಲೆಗೆ ತೀವ್ರತರವಾದ ಗಾಯ ಸಂಭವಿಸಿ ಸವಾರ ಮೃತಪಟ್ಟಿರುತ್ತಾನೆ.
ಅಪಘಾತ ಪ್ರಕಾರಣ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಸಂಭವಿಸಿದೆ. ಸವಾರ ಸೂರ್ಯ ಕುಮಾರ್ ೨೯ ವರ್ಷ ಮೃತನಾಗಿದ್ದು, ಸೆಕ್ಯೂರಿಟಿ ಕಂಪನಿಯಲ್ಲಿ ಹೆಡ್ ಗಾರ್ಡಾಗಿ ಕೆಲಸ ನಿರ್ವಹಿಸುತ್ತಿದ್ದನು. ಚಿಕ್ಕಜಾಲ ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.
ಮತ್ತೊಂದು ಅಪಘಾತ ಪ್ರಕರಣ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್ ನಲ್ಲಿರುವ ಚಿಕ್ಕಬಸ್ತಿ ಬಳಿ ಜರುಗಿದೆ.
ದ್ವಿಚಕ್ರ ಸವಾರನು ಅತಿ ವೇಗವಾಗಿ ವಾಹನ ಚಲಾಯಿಸಿ ಆಯಾ ತಪ್ಪಿ ಚಿಕ್ಕಬಸ್ತಿ ಕೆರೆ ಗೇಟ್ ಗೆ ಡಿಕ್ಕಿ ಹೊಡೆದುಕೊಂಡು ಕೆರೆಯಲ್ಲಿ ಬಿದ್ದು ಮೃತಪಟ್ಟಿರುತ್ತಾನೆ.