ಗುಂಡ್ಲುಪೇಟೆ: ಹೆಣ್ಣಾನೆಯೂಂದು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗದ ವ್ಯಾಪ್ತಿಯ ಮೊಳೆಯೂರು ವಲಯದ ಮೊಳೆಯೂರು ಶಾಖೆಯ ವದಲೀಪೂರ್ವ ಗಸ್ತಿನ ಹಿಡುಗಲ ಪಂಚೀ ಕೆರೆಯ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿಗಳು ಗಸ್ತು ಮಾಡುವಾಗ ಕಾಡಾನೆ ಸುಮಾರು 25 ರಿಂದ 30 ವಯಸ್ಸಿನ ಹೆಣ್ಣಾನೆ ಅನಾರೋಗ್ಯದಿಂದ ಬಳಲುತ್ತಿರುವುದು ಕಂಡುಬಂದಿದ್ದು ಇಲಾಖೆಯ ವೈದ್ಯರು ಚಿಕಿತ್ಸೆ ನೀಡಿದರು ಆದರೆ ಸೋಮವಾರ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ತಿಳಿಸಿದರು.
ನಂತರ ಸ್ಥಳಕ್ಕೆ ಭೇಟಿ ನೀಡಿದ ಶ್ರೀ ಎಸ್.ಪ್ರಭಾಕರನ್, ಭಾಅಸೇ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗು ನಿರ್ದೇಶಕರು, ಬಂಡೀಪುರ, ಶ್ರೀ ಜಿ.ರವೀಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಳು ಡಾ|| ವಾಸೀಂ ಮಿರ್ಜಾ, ಇಲಾಖಾ ಪಶು ವೈದ್ಯಾಧಿಕಾರಿಗಳು, ಬಂಡೀಪುರ, ಇವರ ಸಮಕ್ಷಮ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು.
ಕಾಡಾನೆಯ ಅಂಗಾಂಗಳನ್ನು ಸಂಗ್ರಹಿಸಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸ್ಯಾಂಪಲ್ಗಳನ್ನು ಕಳುಹಿಸಲು ತೀರ್ಮಾನಿಸಿ,ಬಳಿಕ ಮೃತ ಹೆಣ್ಣಾನೆಯನ್ನು ಅಲ್ಲಿಯೇ ಜೆ.ಸಿ.ಬಿ ಸಹಾಯದಿಂದ ಗುಂಡಿ ತೆಗೆದು ಹೂಳಲಾಯಿತು ಎಂದು ತಿಳಿಸಿದ್ದರು ಈ ಸಂದರ್ಭದಲ್ಲಿ ಹೆಡಿಯಾಲ ಉಪ ವಿಭಾಗ.ಹೆಡಿಯಾಲ ಕು. ಅಮೃತಾ ಮಾಯಪ್ಪನವರ್, ವಲಯ ಅರಣ್ಯಾಧಿಕಾರಿ.ಮೂಳೆಯೂರು ವಲಯ ಮತ್ತು ಶ್ರೀ ಪುನೀತ್ ಕುಮಾರ್ ಡಿ.ವಲಯ ಅರಣ್ಯಾಧಿಕಾರಿ ಐನೂರು ಮಾರಿ ಗುಡಿ ವಲಯ.ಶ್ರೀ ರಘುರಾಮ್, ಎನ್ಟಿಸಿಎ ಪ್ರತಿನಿಧಿ ಹಾಗೂ ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.