ಬೆಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಕ್ಕಳು ನೀರಿನ ಸಂಪ್ಗೆ ಬಿದ್ದು ಮೃತಪಟ್ಟಿರುವ ಘಟನೆ ಆವಲಹಳ್ಳಿ ಹಾಗೂ ಕೆ.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಎರಡುವರೆ ವರ್ಷದ ರಾಜ್ಕುಮಾರ್ ಎಂಬ ಗಂಡು ಮಗು ನೀರಿನ ಸಂಪ್ನಲ್ಲಿ ಬಿದ್ದು ನಿನ್ನೆ ಮಧ್ಯಾಹ್ನ ಮೃತಪಟ್ಟಿರುವ ಘಟನೆ ಅವಲಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಬಿಹಾರ್ ಮೂಲದ ದಂಪತಿಗಳ ಈ ಮಗು ಆಟವಾಡುತ್ತಿರುವ ಸಮಯದಲ್ಲಿ ಕುರುಡು ಸೊನ್ನೇನಹಳ್ಳಿಯ ಸಾಯಿ ಲೇಔಟ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸಂಪ್ನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಅಯ್ಯಪ್ಪ ನಗರದಲ್ಲಿ ನೇಪಾಳ ಮೂಲದ ದಂಪತಿಗಳ ಮಗು ಸುಬೇನ್ 5 ವರ್ಷ ನೀರಿನ ಸಂಪ್ನಲ್ಲಿ ಬಿದ್ದು ನಿನ್ನೆ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತ ಮಗುವಿನ ತಂದೆ ತಾಯಿಗಳು ವಾಸವಾಗಿದ್ದು ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದಾಗ ಮಗು ಸುಂಪ್ಗೆ ಬಿದ್ದು ಸಾವನ್ನಪ್ಪಿರುತ್ತದೆ.