ಕೆ.ಆರ್.ನಗರ: ಏಪ್ರಿಲ್ 5 ರಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ರವರ 119ನೇ ಜನ್ಮ ಜಯಂತಿಯನ್ನು ಸರಳ ಮತ್ತು ಅರ್ಥಪೂರ್ಣವಾಗಿ ಬಾಬೂಜಿಯವರ ಪುತ್ಥಳಿ ಬಳಿ ಆಚರಿಸಲು ತೀರ್ಮಾನಿಸಲಾಯಿತು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನ ರಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಶಾಸಕ ಡಿ.ರವಿಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಪುರಸಭೆಯ ಆವರಣದಲ್ಲಿ ಇರುವ ಪುತ್ಥಳಿ ಬಳಿ ಜಯಂತಿ ಆಚರಣೆ ಮಾಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಹಾಜರಿದ್ದ ತಾ.ಪಂ. ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್ ಆದಿಜಾಂಭವ ಸಂಘದ ಎಂ.ಲೋಕೇಶ್, ದಸಂಸ ತಾಲ್ಲೂಕು ಸಂಚಾಲಕ ಎಂ.ಎಸ್.ಮಲ್ಲೇಶ್, ಮುಖಂಡರಾದ ಕಂಟ್ರಾಕ್ಟರ್ ಕುಮಾರ್, ಸೇವಾದಳದ ತಾಲ್ಲೂಕು ಅಧ್ಯಕ್ಷ ಬಿ.ಹೆಚ್.ಕುಮಾರ್,ಗ್ರಾ.ಪಂ. ಮಾಜಿ ಸದಸ್ಯ ಹೆಚ್.ಎಂ.ಮAಜು, ಸಿದ್ದಾಪುರ ಕಾಳಯ್ಯ, ರಮೇಶ್, ಸೇರಿದಂತೆ ಹಲವು ಮುಖಂಡರು ಮಾತನಾಡಿ ಇಬ್ಬರ ಜಯಂತಿಯನ್ನು ತಾರತಮ್ಯ ಮಾಡದೇ ಏ.5 ರಂದು ಡಾ.ಬಾಬು ಜಗಜೀವನ ರಾಂ ಮತ್ತು ಏ.14 ರಂದು ಡಾ.ಬಿ.ಆರ್.ಅಂಬೇಡ್ಕರ್ ತಾಲ್ಲೂಕು ಆಡಳಿತ ವತಿಯಿಂದ ಆಚರಣೆ ಮಾಡಬೇಕೆಂದು ಸಲಹೆ ನೀಡಿದರು.
ಅನಂತರ ಶಾಸಕ ಡಿ.ರವಿಶಂಕರ್ ಮಾತನಾಡಿ ಎಲ್ಲಾ ಸಮಾಜದ ಮುಖಂಡರುಗಳನ್ನು ಆಹ್ವಾನಿಸಿ ಏಪ್ರಿಲ್ 5ರಂದು ಬಾಬಜಗಜೀವನ ರಾಂ ಜಯಂತಿ ಆಚರಣೆ ಮಾಡಲಾಗುತ್ತದೆ, ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಂಬಂಧ ಮತ್ತೊಂದು ಸಭೆ ನಡೆಸಲಾಗುತ್ತದೆ ಅದರಲ್ಲಿ ತಾವುಗಳೆಲ್ಲರು ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಸಾಲಿಗ್ರಾಮ ತಾಲೂಕಿನ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಏ.5 ರಂದು ಬಾಬುಜಗಜೀವನ್ ರಾಂ ಜಯಂತಿಯನ್ನು ಆ ಭಾಗದ ಮುಖಂಡ ರರನ್ನು ಕರೆದು ತಾಲ್ಲೂಕು ಕಛೇರಿ ಆವರಣದಲ್ಲಿ ಆಚರಿಸುವಂತೆ ತಹಸೀಲ್ದಾರ್ರವರಿಗೆ ಸೂಚಿಸಿದರು. ಸಭೆಯಲ್ಲಿ ತಹಸೀಲ್ದಾರ್ರುಗಳಾದ ಜಿ.ಸುರೇಂದ್ರಮೂರ್ತಿ, ರುಕೀಯ ಬೇಗಂ, ತಾ.ಪಂ ಇಓಗಳಾದ ಕುಲದೀಪ್, ಎಸ್.ರವಿ ಸಮಾಜಕಲ್ಯಾಣಾಧಿಕಾರಿ ಶಂಕರಮೂರ್ತಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ದೇರ್ಶಕ ಸೈಯದ್ ಜಾಬೀರ್, ಎಂಎಸ್ಎಸ್ ತಾಲೂಕು ಅಧ್ಯಕ್ಷ ಎಂ.ಎಸ್.ರವಿಕುಮಾರ್, ದಸಂಸ ಸಾಲಿಗ್ರಾಮ ತಾಲ್ಲೂಕು ಅಧ್ಯಕ್ಷ ದೊಡ್ಡಕೊಪ್ಪಲು ಶಿವು, ಮಾದಿಗದಂಡೋರ ತಾಲ್ಲೂಕು ಅಧ್ಯಕ್ಷ ನಂಜುAಡಸ್ವಾಮಿ, ಕೃಷ್ಣನಾಯಕ, ಪರುಶುರಾಮ್, ಮರಿಯಯ್ಯ, ಸಿ.ಶಂಕರ್, ರೈತ ಮುಖಂಡ ಎಂ.ಜೆ.ಕುಮಾರ್, ರಾಜೇಶ್, ಈರಯ್ಯ, ಎಂ.ಎ.ನಾಗೇAದ್ರ, ಕುಮಾರ್, ಪೂಜಾರಿರವಿ ಮತ್ತೀತರರು ಹಾಜರಿದ್ದರು.
ಏಪ್ರಿಲ್ 5ರಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಜಯಂತಿ ಆಚರಣೆಗೆ ತೀರ್ಮಾನ



