ಬೆಂಗಳೂರು: ಟಿವಿಎಸ್ ಮೊಬಿಲಿಟಿ (ಟಿವಿ ಸುಂದರಮ್ ಅಯ್ಯಂಗಾರ್ ಮತ್ತು ಸನ್ಸ್ ಪ್ರೈವೇಟ್ ಲಿಮಿಟೆಡ್ನಿಂದ ಬೇರ್ಪಡಿಸಲಾದ ಕಂಪನಿ), ಭಾರತೀಯ ಆಟೋಮೋಟಿವ್ ಡಿಸ್ಟ್ರಿಬ್ಯೂಷನ್ ಮತ್ತು ಆಫ್ಟರ್ಮಾರ್ಕೆಟ್ ಇಂಡಸ್ಟ್ರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕಂಪನಿ ಭಾರತದಲ್ಲಿ ಉತ್ಪಾದನಾ ಘಟಕಗಳನ್ನು (ಕಾಂಪೊನೆಂಟ್ ಗಳನ್ನು) ಸ್ಥಾಪಿಸಿದೆ ಮತ್ತು ಆಫ್ಟರ್ ಮಾರ್ಕೆಟ್ ಪ್ಲಾಟ್ ಫಾರ್ಮ್ ಅನ್ನು ಸಂಯೋಜಿಸಿದೆ.
ಇಂದು, ಟಿವಿಎಸ್ ಮೊಬಿಲಿಟಿ ಭಾರತದಲ್ಲಿ ಸಮಗ್ರ ವೆಹಿಕಲ್ ಮೊಬಿಲಿಟಿ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಸುಮಾರು 1,700 ಸಮೂಹ ಕಂಪನಿಗಳ ಜಾಲವನ್ನು ಹೊಂದಿರುವ ಜಾಗತಿಕ ಸಮಗ್ರ ವ್ಯಾಪಾರೋದ್ಯಮವಾದ ಜಪಾನಿನ ಮಿತ್ಸುಬಿಷಿ ಕಾರ್ಪೋರೇಷನ್ (ಎಂಸಿ)ನೊಂದಿಗೆ ಜಂಟಿ ಪಾಲುದಾರಿಕೆಯನ್ನು ಘೋಷಿಸಿತು.
ಇದರೊಂದಿಗೆ, ಟಿವಿಎಸ್ ಮೊಬಿಲಿಟಿಯ ಡೀಲರ್ಶಿಪ್ ವ್ಯವಹಾರವು ಟಿವಿಎಸ್ ವೆಹಿಕಲ್ ಮೊಬಿಲಿಟಿ ಸೊಲ್ಯೂಷನ್ (ಟಿವಿಎಶ್ ವಿಎಂಎಸ್) ಆಗಿ ರೂಪಾಂತರಗೊಳ್ಳಲಿದೆ. ಆ ಮೂಲಕ ಭಾರತೀಯ ಆಟೋಮೋಟಿವ್ ಕ್ಷೇತ್ರದಲ್ಲಿ ಬದಲಾವಣೆಯನ್ನು ತರಲಿದೆ. ಈ ಒಪ್ಪಂದವು ಸಂಬಂಧಿತ ನಿಯಂತ್ರಣ ಪ್ರಾಧಿಕಾರಗಳ ಅನುಮೋದನೆಗೆ ಒಳಪಟ್ಟಿರುತ್ತದೆ.
ಟಿವಿಎಸ್ ಮೊಬಿಲಿಟಿ, ಭಾರತದಲ್ಲಿ ತನ್ನ ಡೀಲರ್ಶಿಪ್ ವ್ಯವಹಾರದ ಮೂಲಕ ಯಶಸ್ವಿ ವಾಹನಗಳ ಮಾರಾಟ, ಸರ್ವೀಸ್ ಮತ್ತು ವಿತರಣೆಯನ್ನು ಸಾಧಿಸಿದೆ. ಎಂಸಿಯೊಂದಿಗಿನ ಈ ಸಹಯೋಗವು ಸಂಪೂರ್ಣ ವೆಹಿಕಲ್ ಮೊಬಿಲಿಟಿಯ ಪರಿಸರ ವ್ಯವಸ್ಥೆಗೆ ಪರಿಹಾರೊತ್ಪನ್ನಗಳ ಶ್ರೇಣಿಯನ್ನು ಒದಗಿಸಲು ಟಿವಿಎಸ್ಗೆ ಬಲ ತುಂಬಲಿದೆ ಎಂದು ಟಿವಿಎಸ್ ಮೊಬಿಲಿಟಿಯ ನಿರ್ದೇಶಕರಾದ ಆರ್.ದಿನೇಶ್ ತಿಳಿಸಿದ್ದಾರೆ.
ಭಾರತವು 2023ರಲ್ಲಿ ಐದು ಮಿಲಿಯನ್ ವಾಹನಗಳ ಮಾರಾಟದೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ 6-7%ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಮಿತ್ಸುಬಿಷಿ ಕಾರ್ಪೋರೇಷನ್ನ ಆಟೋಮೋಟಿವ್ ಮತ್ತು ಮೊಬಿಲಿಟಿ ಗ್ರೂಪ್ನ ಸಿಇಓ ಶ್ರೀ ಶಿಗೆರು ವಕಬಯಾಶಿ ಹೇಳಿದರು.