ಚೆನ್ನೈ: ತಮಿಳ್ ತಲೈವಾಸ್ ಚೆನ್ನೈ ಚರಣದ ತನ್ನ ಕೊನೆಯ ಪಂದ್ಯದಲ್ಲಿ ಬುಧವಾರ ಗುಜರಾತ್ ಟೈಟಾನ್ಸ್ ವಿರುದ್ಧ 30-33 ಅಂಕಗಳಿಂದ ಸೋಲನ್ನು ಕಂಡು ನಿರಾಶೆ ಅನುಭವಿಸಿತು. ತವರಿನಲ್ಲಿ ಗೆಲುವಿನೊಂದಿಗೆ ಸ್ಪರ್ಧೆ ಮುಗಿಸುವ ವಿಶ್ವಾಸದಲ್ಲಿದ್ದ ತಮಿಳ್ ತಲೈವಾಸ್ ದ್ವಿತೀಯ ಅವಧಿಯಲ್ಲಿ ಅಮೋಘವಾಗಿ ಆಡಿದರೂ ಗುಜರಾತ್ ತನ್ನ ಮುನ್ನಡೆಯನ್ನು ಎದುರಾಳಿಗೆ ಬಿಟ್ಟುಕೊಡಲಿಲ್ಲ.
ಈ ಮೊದಲು ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ ತಂಡವು ದಬಾಂಗ್ ಡೆಲ್ಲಿ ವಿರುದ್ಧ 32-32 ಅಂಕಗಳಿಂದ ಡ್ರಾ ಸಾಧಿಸಿತು. ಡೆಲ್ಲಿ ತಂಡವು ಪಂದ್ಯದ ಹೆಚ್ಚಿನ ಅವಧಿಯಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದರೂ ಜೈಪುರ ಉತ್ತಮ ರೈಡ್ ಮೂಲಕ ಅಂಕ ಗಳಿಸುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಪರ ಅಶು ಮಲಿಕ್ ರೈಡಿಂಗ್ನಲ್ಲಿ ಮಿಂಚಿ ಏಳಂಕ ಪಡೆದರು.
ಪೆÇ್ರ ಕಬಡ್ಡಿಗೆ ಗುರುವಾರ ವಿಶ್ರಾಂತಿ. ಶುಕ್ರವಾರದಿಂದ ಪಂದ್ಯಗಳು ನೋಯ್ಡಾದಲ್ಲಿ ನಡೆಯಲಿವೆ. ಶುಕ್ರವಾರ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವು ಹರಿಯಾಣ ಸ್ಟೀಲರ್ ತಂಡವನ್ನು ಎದುರಿಸಲಿದ್ದರೆ ದ್ವಿತೀಯ ಪಂದ್ಯವು ಯುಪಿ ಯೋಧಾಸ್ ಮತ್ತು ಬೆಂಗಳೂರು ಬುಲ್ಸ್ ನಡುವೆ ನಡೆಯಲಿದೆ.