ಚಿಕ್ಕಬಳ್ಳಾಪುರ: ಎಸ್.ಜೆ.ಸಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಪದವಿ ಪ್ರದಾನ-2024 ಸಮಾರಂಭವನ್ನು ದಿನಾಂಕ: 09.05.2024 ರಂದು ಗುರುವಾರ ಬೆಳಿಗ್ಗೆ 10.00 ಗಂಟೆಗೆ ಬಿ.ಜಿ.ಎಸ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭಕ್ಕೆ ಡಾ|| ನಿರ್ಮಲಾನಂದ ನಾಥ ಮಹಾ ಸ್ವಾಮೀಜಿ ಅಧ್ಯಕ್ಷತೆಯನ್ನು ವಹಿಸಿ, ಆಶೀರ್ವಚನ ನೀಡಿದರು ಹಾಗೂ ಮಂಗಳನಾಥ ಸ್ವಾಮೀಜಿ ದಿವ್ಯ ಸಾನಿಧ್ಯವನ್ನು ವಹಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಶಾಂತ್ ಎ ತಿಮ್ಮಯ್ಯ, ಚೇರ್ಮೆನ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆ.ಎಸ್.ಪಿ.ಸಿ.ಬಿ), ಬೆಂಗಳೂರು ಆಗಮಿಸಿದ್ದರು.
ಡಾ.ಎನ್.ಶಿವರಾಮರೆಡ್ಡಿ, ಮುಖ್ಯ ಆಡಳಿತಾಧಿಕಾರಿಗಳು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಚಿಕ್ಕಬಳ್ಳಾಪುರ ರವರು, ಹಾಗೂ ಎಸ್.ಜೆ.ಸಿ.ಐ.ಟಿ ಆಡಳಿತ ಮಂಡಳಿಯ ಸದಸ್ಯರಾದ ಡಾ. ಕೆ.ಪಿ.ಶ್ರೀನಿವಾಸ ಮೂರ್ತಿ, ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು, ಡಾ|| ಜಿ.ಟಿ ರಾಜು, ಪ್ರಾಂಶುಪಾಲರು ಮತ್ತು ಶ್ರೀ ಸುರೇಶ.ಜೆ, ರಿಜಿಸ್ಟ್ರಾರ್ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನೆರವೇರಿತು.
ಪ್ರಾಂಶುಪಾಲ ಡಾ.ಜಿ.ಟಿ ರಾಜು ರವರು ಸ್ವಾಗತ ಭಾಷಣದಲ್ಲಿ ಈ ಶೈಕ್ಷಣಿಕ ಪದವಿಧರ ವಿದ್ಯಾರ್ಥಿಗಳು ಪ್ಲೇಸ್ಮೆಂಟ್, ಹೆಚ್ಚಿನ ಸಂಖ್ಯೆಯಲ್ಲಿ ಗೇಟ್ ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಯಶಸ್ಸಿನ ಹಾದಿಯಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ವೃತ್ತಿ ಜೀವನದಲ್ಲಿ ಯಶಸ್ವಿಯಾಗುವುದರ ಜೊತೆಗೆ ಮಾನವೀಯ ಮೌಲ್ಯಗಳುಳ್ಳ ವ್ಯಕ್ತಿಯಾಗಬೇಕೆಂದು ಹಾಗೂ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸೇವಾ ಮನೋಭಾವವನ್ನು ರೂಢಿಸಿಕೊಂಡು ಸಂಸ್ಥೆಯ ಮೌಲ್ಯಗಳನ್ನು ಉಳಿಸಿ ಎಂದು ಹೇಳಿ ಅವರ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಕೋರಿದರು.
ಈ ಕಾರ್ಯಕ್ರಮದಲ್ಲಿ ಡಾ|| ಶಾಂತ್ ಎ ತಿಮ್ಮಯ್ಯರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ನೈಜ ಪ್ರಪಂಚಕ್ಕೆ ಅಗತ್ಯವಿರುವಂತಹ ಉತ್ಪನ್ನಗಳು ಸಂಕೀರ್ಣ ಪರಿಸರ ಅಗತ್ಯತೆಗಳು ನವೀನ ಸಂಶೋಧನಾ ಆಲೋಚನೆಗಳನ್ನು ಬಳಸಿ ದೇಶದ ಉನ್ನತಿಗೆ ವಿದ್ಯಾರ್ಥಿಗಳು ಸಹಕಾರಿಯಾಗಬೇಕು, ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ಉತ್ತಮ ಜವಾಬ್ದಾರಿಯುತ ವ್ಯಕ್ತಿಗಳಾಗಿ ಉನ್ನತ ಮಟ್ಟಕ್ಕೆ ಬೆಳಿಯಿರಿ ಹಾಗೂ ನಮ್ಮ ಮಾತೃ ಭೂಮಿಯನ್ನು ನಮ್ಮ ತಾಯಿಯಂತೆ ಸುರಕ್ಷತೆಯಿಂದ ನೋಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಪದವೀಧರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರ ಮುಂದಿನ ಭವಿಷ್ಯದ ರೂಪು ರೇಷೆಗಳನ್ನು ರಚಿಸಿಕೊಂಡು ಹಾಗೂ ಸಮಾಜದ ಏಳಿಗೆಗೆ ಹೇಗೆ ಕ್ಷಮಿಸಬೇಕೆಂದು, ಪೋಷಕರು ನಿರ್ವಹಿಸಿದ ಜವಾಬ್ದಾರಿಯನ್ನು ಮರೆಯದೆ ಹೇಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಮೊದಲು ನೀವು ನಿಮ್ಮನ್ನು, ಸಾಧನೆಯನ್ನು ನೀವು ಗೌರವಿಸಿ. ಪೋಷಿಸಿ ಬೆಳೆಸಿದ ತಂದೆ ತಾಯಿ, ಗುರು ಹಿರಿಯರಿಗೆ ವಂದಿಸಿ. ವಿದ್ಯಾರ್ಥಿಗಳು ವಿವಿದ ಕ್ಷೇತ್ರಗಳಲ್ಲಿ ಅಭಿವೃದ್ದಿಯನ್ನು ಹೊಂದಬೇಕು, ಉನ್ನತ ಸ್ಥಾನಕ್ಕೆ ಬೆಳೆದು ಸಮಾಜಕ್ಕೆ ಸೇವೆಯನ್ನು ಕೊಡುಗೆಯಾಗಿಸಿ ಎಂದು ಆಶೀರ್ವಚನ ನೀಡಿದರು.
ಈ ಸಮಾರಂಭದಲ್ಲಿ ಎಲ್ಲಾ ವಿಭಾಗದ ಅಂತಿಮ ವರ್ಷದ ಬಿ.ಇ, ಎಂ.ಟೆಕ್, ಎಂ.ಬಿ.ಎ ಮತ್ತು ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ, ವಿವಿದ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.