ಕೋಲಾರ: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳನ್ನು ಗೋಡೆ ಮತ್ತು ಕಲ್ಲುಗಳ ತೆರವಿಗೆ ಬಳಸಿಕೊಂಡ ಪ್ರಕರಣವನ್ನು ಕೋಲಾರ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪ್ರಕರಣ ಮುಚ್ಚಿ ಹಾಕುವ ಉನ್ನಾರ ನಡೆಯುತಿದೆ ಎಂದು ಶಿಕ್ಷಣ ಇಲಾಖೆಯ ಆಯುಕ್ತರದ ಬಿ.ಬಿ. ಕಾವೇರಿ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಿತೇಶ್ ಕುಮಾರ್ ಸಿಂಗ್ರವರಿಗೆ ರೈತ ಸಂಘದ ಮುಖಂಡ ರಾದ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ನಾರಾಯಣಸ್ವಾಮಿ ದೂರು ನೀಡಿದರು.
ಕೋಲಾರ ನಗರದ ಸರ್ಕಾರಿಪ್ರೌಢಶಾಲಾ ಉಪ ಪ್ರಾಂಶುಪಾಲರಾದ ಬಿ.ಎಂ.ರಾಧಮ್ಮ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಪರೀಕ್ಷೆ ಸಮಯದಲ್ಲಿ ಸತತವಾಗಿ ಮೂರು ದಿನ ದೊಡ್ಡ ದೊಡ್ಡ ಕಲ್ಲು ಹೊಡೆಯುವ ಸುತಿಗೆಗಳಿಂದ ಕಲ್ಲು ಹೊಡೆಯುವ ಕೆಲಸಕ್ಕೆ, ಚಪ್ಪಡಿಗಳನ್ನು ಗಡಾರಿಯಿಂದ ಪಕ್ಕಕ್ಕೆ ಸರಿಸುವ ಕೆಲಸಕ್ಕೆ, ಗೋಡೆಗಳನ್ನು ಒಡೆಯುವ ಕೆಲಸಕ್ಕೆ ವಿದ್ಯಾರ್ಥಿಗಳನ್ನು ಕೆಲಸಕ್ಕೆ ಬಳಸಿಕೊಂಡಿರುವ ಪ್ರಕರಣವನ್ನು ಕೋಲಾರ ಜಿಲ್ಲಾ ಉಪ ನಿರ್ದೇಶಕರು ಹಾಗೂ ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕಾಣದ ಕೈಗಳು ಪ್ರಕರಣ ಮುಚ್ಚಿ ಹಾಕುವ ಉನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಶಿಕ್ಷಣ ಇಲಾಖೆಯ ಆಯುಕ್ತರಾದ ಬಿ.ಬಿ ಕಾವೇರಿ ರವರಿಗೆ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಿತೇಶ್ ಕುಮಾರ್ ಸಿಂಗ್ ರವರಿಗೆ ಗುರುವಾರ ಬೆಂಗಳೂರಿನಲ್ಲಿ ದೂರು ಸಲ್ಲಿಸಿ ಉಪ ಪ್ರಾಂಶುಪಾಲರಾದ ರಾಧಮ್ಮ ರವರನ್ನು ಸೇವೆಯಿಂದ ವಜಾ ಗೊಳಿಸಬೇಕೆಂದು ಒತ್ತಾಯಿಸಿದರು.
ದೂರು ಸಲ್ಲಿಸಿ ಆ ವಿಡಿಯೋ ಮತ್ತು ಫೋಟೋಗಳಲ್ಲಿ ಇರುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಮಕ್ಕಳು ಸಹ ಇದ್ದಾರೆ ಎಂಬುದು ದೃಢಪಡಿಸಲಾಯಿತು.