ಬೆಂಗಳೂರು: ಪಾಯದಿಂದ ಕಟ್ಟಡ ನಿರ್ಮಾಣದವರೆಗೂ ಹಂತಹAತವಾಗಿ ೫ ಲಕ್ಷದವರೆಗೂ ಹಣ ಬಿಡುಗಡೆ ಮಾಡಬೇಕು ಆದರೆ ಫಲಾನುಭವಿಗಳಿಗೆ ಹಣ ನೀಡಿಲ್ಲ, ಹಣ ಇಟ್ಟಿದ್ದಾರೋ ಇಲ್ಲವೋ ತಿಳಿಸುವಂತೆ ಬಿಜೆಪಿ ಶಾಸಕ ಮುನಿರಾಜು ಆಗ್ರಹಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂಟಿ ಮನೆ ನಿರ್ಮಾಣಕ್ಕೆ ಪಾಲಿಕೆಯಿಂದ ಹಣ ಬಿಡುಗಡೆ ಮಾಡದ ವಿಚಾರವಾಗಿ ಸದನದಲ್ಲಿ ಪ್ರಶ್ನಿಸಿದ ಸಂದರ್ಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿ, ೫ ಲಕ್ಷ ಮನೆ ನಿರ್ಮಾಣ ಮಾಡಲು ಕೊಡಲಾಗುತ್ತದೆ, ವರ್ಷಕ್ಕೆ ೩ ಲಕ್ಷ ಇನ್ ಕಮ್ ಇರಬೇಕು. ಬೆಂಗಳೂರಿನಲ್ಲಿ ಕನಿಷ್ಠ ಮೂರು ವರ್ಷಗಳು ವಾಸವಾಗಿರಬೇಕು. ಸ್ವಂತ ಮನೆ ಇರಬಾರದು,೧,೨೨೯ ಮನೆಗಳು ಪಾಸ್ ಆಗಿದೆ. ಇದಕ್ಕಾಗಿ ಮೊಬೈಲ್ ಆಪ್ ಮಾಡಲಾಗಿದೆ. ಕೆಲವರಿಗೆ ಮೊಬೈಲ್ ಆಪ್ ಬಳಸಲು ಬರಲ್ಲ, ಇಇಗಳಿಗೆ ಸೂಚನೆ ನೀಡಿದ್ದೇನೆ. ನೀವು ಗಮನ ಸೆಳೆದಿದ್ದೀರಿ. ಹಳೆಯ ಮಾದರಿಯಲ್ಲೇ ಸ್ಕೀಮ್ ಪಾಸ್ ಮಾಡಲು ಸೂಚನೆ ನೀಡಿದ್ದೇನೆ ಎಂದು ಸದನಕ್ಕೆ ಉತ್ತರಿಸಿದರು.
ಆಗ ಮನೆಗಳ ನಿರ್ಮಾಣ ವಿಚಾರವಾಗಿ ಪರಿಶೀಲನೆ ಮಾಡಲು ೧೧ ಜನ ಸಿಬ್ಬಂದಿ ಬೇಕು. ಯಾರೂ ಕೂಡ ಸಿಬ್ಬಂದಿಗಳೇ ಇಲ್ಲ ಎಂದು ಮುನಿರಾಜು ಆಕ್ರೋಶ
ಕೂಡಲೇ ಎಲ್ಲವನ್ನ ಪರಿಶೀಲನೆ ಮಾಡೋದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.



