ಬೆಂಗಳೂರು: ರಾಜರಾಜೇಶ್ವರಿ ನಗರದ ಪಟ್ಟಣಗೆರೆಯಲ್ಲಿರುವ ಜಯಣ್ಣ ಶೆಡ್ನಲ್ಲಿ ಇರುವ ಜಪ್ತಿ ವಾಹನಗಳ ಬಿಡುಗಡೆ ವಿಚಾರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಧ್ಯಪ್ರವೇಶಿಸಿ ಚಾಲಕರು ಹಾಗೂ ಮಾಲೀಕರಿಗೆ ಆಗಿರುವ ತೊಂದರೆ ಸರಿಪಡಿಸಬೇಕು ಎಂದು ಇಂಡಿಯನ್ ವೆಹಿಕಲ್ಸ ಡ್ರೈವಸರ್ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಒತ್ತಾಯಿಸಿದ್ದಾರೆ.
ದರ್ಶನ್ ಪ್ರಕರಣದ ನಂತರ ಪಟ್ಟಣಗೆರೆ ಜಯಣ್ಣ ಶೆಡ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದರಿಂದ ಚಾಲಕರು ಹಾಗೂ ಮಾಲೀಕರಿಗೆ ತಮ ವಾಹನಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇರುವುದರಿಂದ ಚಾಲಕರು ಸಂಕಷ್ಟಕ್ಕೆ ಈಡಾಗಿದ್ದಾರೆ ಹೀಗಾಗಿ ಕೂಡಲೆ ಸಚಿವರುಗಳು ಮಧ್ಯಪ್ರವೇಶಿಸಿ ಆಗಿರುವ ತೊಂದರೆ ತಪ್ಪಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಫೈನಾನ್ಸ್ ಹಾಗೂ ಇಎಂಐ ಕಟ್ಟಲು ಸಾಧ್ಯವಾಗದ ಬಸಗಳು, ಲಾರಿಗಳು, ಕಾರುಗಳು ಹಾಗೂ ಹಳದಿ ಬೋರ್ಡ್ನ ಕ್ಯಾಬ್ಗಳು ಸೇರಿದಂತೆ ಸಾವಿರಾರು ವಾಹನಗಳನ್ನು ಬ್ಯಾಂಕ್ ನವರು ಜಫ್ತಿ ಮಾಡಿ ಜಯಣ್ಣ ಶೆಡ್ನಲ್ಲಿ ನಿಲ್ಲಿಸಿದ್ದಾರೆ.ಬ್ಯಾಂಕ್ಗೆ ಹಣ ಪಾವತಿಸಿ ಚಾಲಕರು ಹಾಗೂ ಮಾಲೀಕರು ತಮ ವಾಹನಗಳನ್ನು ಬಿಡಿಸಿಕೊಂಡು ಹೋಗುವುದು ವಾಡಿಕೆಯಾಗಿತ್ತು. ಆದರೆ, ದರ್ಶನ್ ಪ್ರಕರಣದ ನಂತರ ಶೆಡ್ ಬಳಿಗೆ ಹೋಗಿ ವಾಹನ ಬಿಡಿಸಿಕೊಳ್ಳಲು ಮುಂದಾಗಿರುವ ಚಾಲಕರು ಹಾಗೂ ಮಾಲೀಕರುಗಳಿಗೆ ಪೊಲೀಸರು ಅವಕಾಶ ನೀಡುತ್ತಿಲ್ಲ.
ಈಗಾಗಲೇ ಸಾಲ ಸೋಲ ಮಾಡಿ ತಮ ವಾಹನಗಳ ಮೇಲಿನ ಫೈನಾನ್ಸ್ ಪಾವತಿಸಿ ವಾಹನ ಬಿಡಿಸಿಕೊಂಡು ತಮ ಕಾಯಕ ಮುಂದುವರೆಸುವ ಮೂಲಕ ಜೀವನ ಸಾಗಿಸೋಣ ಎಂದು ನಂಬಿಕೊಂಡಿರುವ ಚಾಲಕರಿಗೆ ಪೊಲೀಸರ ವರ್ತನೆಯಿಂದ ತೀವ್ರ ತೊಂದರೆಯಾಗಿದೆ ಹಾಗಾಗಿ ಗೃಹ ಮಂತ್ರಿ ಹಾಗೂ ಸಾರಿಗೆ ಸಚಿವ ಮದ್ಯ ಪ್ರವೇಶ ಮಾಡಿ ಚಾಲಕರ ಮತ್ತು ಮಾಲೀಕರ ಸಂಕಷ್ಟ ಪರಿಹರಿಸ ಬೇಕು.
ಇನ್ನು ಕೆಲವು ದಿನಗಳ ಕಾಲ ಶೆಡ್ನಲ್ಲಿರುವ ವಾಹನಗಳನ್ನು ಬಿಡುಗಡೆ ಮಾಡದಿದ್ದರೆ ನೂರಾರು ಚಾಲಕರು ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬರುವ ಸಾಧ್ಯತೆ ಇದೆ . ಹೀಗಾಗಿ ಸಚಿವರುಗಳು ಚಾಲಕರಿಗೆ ಆಗುತ್ತಿರುವ ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗಂಡಸಿ ಸದಾನಂದಸ್ವಾಮಿ ಆಗ್ರಹಿಸಿದ್ದಾರೆ.