ಡಾ.ಜಿ.ವೈ.ಪದ್ಮನಾಗರಾಜು
ಬೆಂಗಳೂರು: ರಾಜ್ಯಪಾಲರು ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ವಾಪಸ್ ತೆರಳುವ ವೇಳೆ ಅವರನ್ನು ಅಡ್ಡಗಟ್ಟಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧಾನಪರಿಷತ್ನಲ್ಲಿಂದು ಒತ್ತಾಯಿಸಿದ ಘಟನೆ ನಡೆಯಿತು.
ಪರಿಷತ್ ಕಲಾಪ ಆರಂಭವಾಗುತ್ತಿ ದ್ದಂತೆ ಹರಿಪ್ರಸಾದ್ ಅವರ ನಡವಳಿಕೆ ಯನ್ನು ಖಂಡಿಸಿ ಮಾತನಾಡಿದ ಬಿಜೆಪಿ ಸದಸ್ಯರು, ಅವರ ನಡವಳಿಕೆ ವಿರುದ್ಧ ಹರಿಹಾಯ್ದು ಕದನ ಕಲಾಪದಿಂದ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಪಡಿಸಿದರು. ಈ ಸಂದರ್ಭ ದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ತೀವ್ರವಾಗಿ ಆಕ್ಷೇಪಿಸಿದರು.
ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರೆ, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ನವರು ಸಹ ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಒಂದು ಹಂತದಲ್ಲಿ ಎರಡು ಪಕ್ಷಗಳ ನಡುವೆ ವಾಗ್ವಾದ ಜೋರಾಗಿ ಆರೋಪ ಪ್ರತ್ಯಾರೋಪ ಕೇಳಿಬಂದವು. ಪರಿಸ್ಥಿತಿಯನ್ನು ಅವಲೋಕಿಸಿದ ಸಭಾಪತಿ ಬಸವರಾಜ್ ಹೊರಟ್ಟಿ ಸದನ ಕಲಾಪವನ್ನು ೧೦ನಿಮಿಷಗಳ ಕಾಲ ಮುಂದೂಡಿದರು.
ಸದನದಲ್ಲಿ ಗದ್ದಲ ಪರಿಷತ್ನಲ್ಲಿ ಹರಿಪ್ರಸಾದ್ ಅಮಾನತಿಗೆ ಒತ್ತಾಯ



