This is the title of the web page
This is the title of the web page

ಅನಧಿಕೃತ ಖಾಸಗಿ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ

ಮಾಲೂರು: ತಾಲ್ಲೂಕಿನಾದ್ಯಂತ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಿ ಅನಧಿಕೃತ ಖಾಸಗಿ ಶಾಲೆಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ಡೋನೇಷನ್ ಹಾವಳಿ ಕಡಿವಾಣ ಹಾಕಬೇಕೆಂದು ರೈತ ಸಂಘದಿಂದ ಕ್ಷೇತ್ರ ಶಿಕ್ಷಣಾದಿಕಾರಿಗಳಿಗೆ ಮನವಿ ನೀಡಿ, ಒತ್ತಾಯಿಸಲಾಯಿತು.

ಸಂತೆಗಳಲ್ಲಿ ರೈತರು ಕುರಿ ಹಾಗೂ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಿದಂತೆ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ದನದ ಮಂದಿಯಂತೆ ತುಂಬಿಕೊಂಡು ಪ್ರೀಕೆ.ಜಿ, ಯು.ಕೆ.ಜಿ., ಎಲ್.ಕೆ.ಜಿ. ನೆಪದಲ್ಲಿ ಲಕ್ಷ ಲಕ್ಷ ಮಕ್ಕಳ ಪೋಷಕರಿಂದ ಲೂಟಿ ಮಾಡುತ್ತಿದ್ದರೂ ಕ್ರಮಕೈಗೊಳ್ಳಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರದ ಸಂಬಳ ಪಡೆದು ಶಿಕ್ಷಣವನ್ನು ಮಾರಾಟಕ್ಕೆ ಇಟ್ಟಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.

ಭವಿಷ್ಯ ಜನಾಂಗವನ್ನು ರೂಪಿಸಬೇಕಾದ ಶಾಲೆಗಳೇ ಅನಧಿಕೃತವಾದರೆ ನಾಡಿನ ಪರಿಸ್ತಿತಿ ಹೇಗಿರಬಹುದು ನಮ್ಮ ಮಕ್ಕಳು ಓದುವ ಶಾಲೆಗಳು ಅಕ್ರಮ ಎಂದಾದರೆ ಅವರು ಪಡೆದ ಶಿಕ್ಷಣ ಪ್ರಮಾಣ ಪತ್ರಗಳು ಸಕ್ರಮವಾಗುವುದಾದರೂ ಹೇಗೆ  ಈ ಅನಧಿಕೃತ ಶಾಲೆಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವ ಹೊಣೆಗಾರಿಕೆ ಯಾರದ್ದು? ಶಿಕ್ಷಣ ಇಲಾಖೆ ಕೇವಲ ಸುತ್ತೋಲೆ ಹೊರಡಿಸಿ ಮೌನವಾಗಿ ಕಛೇರಿಯಲ್ಲಿ ಕುಳಿತರೆ ಮಕ್ಕಳ ಶಿಕ್ಷಣರ ಭವಿಷ್ಯವೇನು ಜೊತೆಗೆ ಅನಧಿಕೃತ ಶಾಲೆಗಳ ಪಟ್ಟಿಇದ್ದರೂ ಅದನ್ನು ಸಾರ್ವಜನಿಕವಾಗಿ ಪತ್ರಿಕಾ ಹಾಗೂ ಕರ ಪತ್ರದ ಮುಖಾಂತರ ಜಾಗೃತಿ ಮೂಡಿಸಲು ಹಿಂದೇಟೇಕೆ ಎಂಬುದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ಶಿಕ್ಷಣಾಧಿಕಾರಿಗಳು ಅನಧಿಕೃತ ಶಾಲೆಗಳ ವಾರಸುದಾರರಾಗಿದ್ದಾರೆಯೇ ಇಲ್ಲವಾದರೆ ಸಿ.ಬಿ.ಎಸ್.ಸಿ, ಐ.ಸಿ.ಎಸ್.ಸಿ, ಆಂಗ್ಲ ಮಾದ್ಯಮ ಹೆಸರಿನಲ್ಲಿ ಪೋಷಕರನ್ನು ಯಾಮಾರಿಸಿ ಮಕ್ಕಳನ್ನು ಹಾಜರಾತಿ ಮಾಡಿಸಿಕೊಂಡು ಇನ್ನೇನು ಪರೀಕ್ಷೆ ಸಮೀಪ ಬರುತ್ತಿದ್ದಂತೆ ರಾಜ್ಯ ಪಠ್ಯ ಪುಸ್ತಕದ ಬೋದನೆ ಮಾಡುವ ಮೂಲಕ ಮಕ್ಕಳ ಮನಸ್ಸಿನ ಮೇಲೆ ಪ್ರಬಾವ ಬೀರುತ್ತಿಲ್ಲವೆ, ಬಡವರ ಮಕ್ಕಳೆಂದರೆ ಅಷ್ಟು ನಿರ್ಲಕ್ಷವೆ, ಸರ್ಕಾರಿ ಹುದ್ದೆಯಲ್ಲಿದ್ದು, ನಿಮ್ಮ ಮಕ್ಕಳನ್ನು ಅನಧಿಕೃತ ಶಾಲೆಗೆ ಸೇರಿಸುವಿರ.

ಗುಣಾತ್ಮಕ ಶಿಕ್ಷಣಕ್ಕೆ ನಮ್ಮೆಲ್ಲರ ಪ್ರಾಮಾಣಿಕ ಜವಾಬ್ದಾರಿ ಹರಿಯಬೇಕು. ಹಿಂದಿನಕಾಲದಲ್ಲಿ ಮರದ ಕೆಳಗೆ ಕುಳಿತು ಬೆರಳುನಿಂದ ಮರಳಿನ ಮೇಲೆ ಅಕ್ಷರ ಕಲಿಯುತ್ತಿದ್ದ ಗುರುಕುಲದ ಶಿಕ್ಷಣ ಇಂದು ಕಾರ್ಪೋರೇಟ್ ಕಪಿ ಮುಷ್ಟಿಯಲ್ಲಿ ಸಿಲುಕಿ ದೇಶದ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಭವಿಷ್ಯ ರೂಪಿಸಬೇಕಾದ ಮಕ್ಕಳು ಅನಕ್ಷರಸ್ಥರಾಗಿ ರಾಜಕಾರಣಿಗಳ ಹಿಂದೆ ಭಾವುಟ ಹಿಡಿದು ಜೈಕಾರಗಳಾಗಿ ಜಾತಿ ವ್ಯವಸ್ತೆ ಹೆಸರಿನಲ್ಲಿ ತಮ್ಮ ಭವಿಷ್ಯದ ಬದುಕನ್ನು ಹಾಳು ಮಾಡಿಕೊಳ್ಳಲು ಹದಗೆಟ್ಟಿರುವ ಸರ್ಕಾರಿ ಶಾಲೆಗಳ ಅವ್ಯವಸ್ಥೆಯೇ ಮೂಲ ಕಾರಣವೆಂದು ಆರೋಪ ಮಾಡಿದರು.

ತಾಲ್ಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಕಡಿವಾಣ ವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳ ಡೊಣೆಷನ್ ಹಾವಳಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸದ ಪರಿಸ್ತಿತಿಯಲ್ಲಿ ಜನ್ಮ ಕೊಟ್ಟ ಪೋಷಕರಿದ್ದಾರೆ.

ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಸರ್ಕರ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅವಶ್ಯಕತೆ ಇರುವ ಪಠ್ಯ ಪುಸ್ತಕ ಸಮವಸ್ತ್ರ ಕೂಡಲೇ ಸರ್ಕಾರಿ ಶಾಲೆಗಳಿಗೆ ಸರಬರಾಜು ಮಾಡುವ ಜೊತೆಗೆ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಆಟದ ಮೈದಾನ ಶೌಚಾಲಯ ವ್ಯವಸ್ಥೆಯನ್ನು ಮಾಡುವ ಜೊತೆಗೆ ಸರ್ಕಾರಿಶಾಲೆಗಳ ಗುಣಮಟ್ಟದ ಶಿಕ್ಷಣ ಬಗ್ಗೆ ಗ್ರಾಮೀಣ ನಗರ ಪ್ರದೇಶಗಳಲ್ಲಿ ಕರ ಪತ್ರದ ಮೂಲಕ ಪೋಷಕರಲ್ಲಿ ಜಾಗೃತಿ ಮೂಡಿಸುವಂತೆ ಶಿಕ್ಷಣ ಕ್ಷೇತ್ರದ ಅಧಿಕಾರಿಗಳಿಗೆ ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಿದರು.

24 ಗಂಟೆಯಲ್ಲಿ ಜಿಲ್ಲಾದ್ಯಂತ ನಾಯಿ ಕೊಡೆಗಳಂತೆ ಅನಧಿಕೃತ ಶಾಲೆಗಳು ಹಾಗೂ ಖಾಸಗಿ ಶಾಲೆಗಳ ಡೊಣೇಷನ್ ಹಾವಳಿ ಬಗ್ಗೆ ಪೋಷಕರ ಕರ ಪತ್ರದ ಮುಖಾಂತರ ಜಾಗೃತಿ ಮೂಡಿಸಿ ಸರ್ಕಾರಿ ಶಾಲೆಗಳ ಹಾಜರಾತಿಯನ್ನು ಹೆಚ್ಚಳ ಮಾಡಲು ಮನೆ ಮನೆಗೆ ಶಿಕ್ಷಕರು ತೆರಳಿ ಹಾಜರಾತಿ ಹೆಚ್ಚಳ ಮಾಡಿ ಶಿಥಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಬೇಕೆಂದು ಮನವಿ ನೀಡಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನಧಿಕೃತ ಶಾಲೆಗಳ ಹಾಗೂ ಡೊಣೇಷನ್ ಹಾವಳಿ ವಿರುದ್ದ ಕ್ರಮ ಕೈಗೊಳ್ಳಲು ರಾಜಕಾರಣಿಗಳ ಒತ್ತಡ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಕಾರ್ಯದರ್ಶಿ ಮಾಸ್ತಿ ವೆಂಕಟೇಶ್ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಹರೀಶ್ ಮುನಿರಾಜು, ಆಂಜಿನಪ್ಪ, ಗಿರೀಶ್, ಮಂಗಸಂದ್ರ ತಿಮ್ಮಣ್ಣ, ರಾಮಸಾಗರ ವೇಣು, ಸುರೇಶ್‍ಬಾಬು, ಸಂದೀಪ್‍ಗೌಡ, ಕಿರಣ್, ಕದರಿನತ್ತ ಅಪ್ಪೋಜಿರಾವ್ ಸೇರಿದಂತೆ ಇತರರಿದ್ದರು.