ಮುಳಬಾಗಿಲು: ಗ್ರಾಮೀಣ ಕನ್ನಡ ಖಾಸಗಿ ಶಾಲಾ ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ ಕಾಲೇಜುಗಳು ಆಡಳಿತ ಮಂಡಳಿಗಳ ಮತ್ತು ನೌಕರರು ಒಕ್ಕೂಟ ಮುಳಬಾಗಿಲು ತಾಲೂಕು ಶಾಖೆ ವತಿಯಿಂದ ಭಾರತೀಯ ಕಿಸಾನ್ ಸಂಘ ಮತ್ತು ಕನ್ನಡಪರ ಸಂಘಟನೆಗಳು ಸಹಕಾರದೊಂದಿಗೆ ಸೋಮವಾರ ತಾಲೂಕ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿ ಉಪ ತಹಸೀಲ್ದಾರ್ ಎ. ಶ್ರೀಕುಮಾರ್ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಶಿಕ್ಷಣ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನ ಕುರುಡುಮಲೆ ಕ್ರಾಸ್ ನ ಕುವೆಂಪು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ. ಎನ್. ಗಣೇಶನ್ ಮಾತನಾಡಿ ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ 1995 ರಿಂದ 2012ರ ತನಕ ಆರಂಭವಾಗಿರುವ ಖಾಸಗಿ ಶಾಲೆಗಳನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ವೇತನಾನುದಾನಕ್ಕೆ ಒಳಪಡಿಸಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದ ಆಗಿನ ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕರು ಜೊತೆಗೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿಲ್ಲ ಆದುದರಿಂದ ಏಪ್ರಿಲ್ 27ಕ್ಕೆ ಅನುಮೋದನೆ ನೀಡುವ ಪೂರಕ ಬಜೆಟ್ ನಲ್ಲಿ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.ಭಾರತೀಯ ಕಿಸಾನ್ ಸಂಘದ ಜಿಲ್ಲಾ ಖಜಾಂಚಿ ವಕೀಲ ವಿ. ಜಯಪ್ಪ ಮಾತನಾಡಿ ರಾಜಕೀಯ ಪಕ್ಷಗಳು ರಾಜಕಾರಣಿಗಳು ಅಧಿಕಾರಕ್ಕೆ ಬರುವಾಗ ಭರವಸೆಗಳನ್ನು ನೀಡುತ್ತಾರೆ ಅಧಿಕಾರಿಕ ಬಂದ ತಕ್ಷಣ ಅದನ್ನು ಮರೆತು ಬರಿ ಮೂಗಿಗೆ ತುಪ್ಪ ಸವರಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಗ್ರಾಮೀಣ ಪ್ರದೇಶಗಳ ಕನ್ನಡ ಮಾಧ್ಯಮಗಳ ಖಾಸಗಿ ಶಾಲೆಗಳಲ್ಲಿ ರೈತರು ಕೃಷಿ ಕಾರ್ಮಿಕರ ಕುಟುಂಬಗಳ ಮಕ್ಕಳು ಓದುತ್ತಾರೆ ಜೊತೆಗೆ ಈ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಮತ್ತು ಸಿಬ್ಬಂದಿ ಈ ವರ್ಗದಿಂದಲೇ ಬಂದಿರುತ್ತಾರೆ ಆದುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಈ ಬಗ್ಗೆ ಗಮನಹರಿಸಿ ಸರ್ಕಾರಿ ಅನುದಾನಕ್ಕೆ ಈ ಶಾಲೆಗಳನ್ನು ಒಳಪಡಿಸುವ ಮೂಲಕ 29 ವರ್ಷಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದ್ದರು. ಕರವೇ ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷ ಹುಸೇನ್ ಮಾತನಾಡಿ ರಾಜಕೀಯ ಪಕ್ಷಗಳು ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಹಲವಾರು ವರ್ಷಗಳ ಬೇಡಿಕೆಯನ್ನು ಮೊದಲ ಆದ್ಯತೆಯಲ್ಲಿ ಈಗಾಗಲೇ ಈಡೇರಿಸಬೇಕಾಗಿತ್ತು ಬಾಯಿ ಮಾತಿನಲ್ಲಿ ಕನ್ನಡ ಶಾಲೆಗಳ ಬಗ್ಗೆ ಕಾಳಜಿ ತೋರಿಸಿ ಅನುದಾನಕ್ಕೆ ಒಡಪಡಿಸಲು ಇಲ್ಲಸಲ್ಲದ ನೆಪವೊಡ್ಡಿ ತಡ ಮಾಡುತ್ತಿರುವುದು ಸರಿಯಲ್ಲ ಈ ಬಗ್ಗೆ ಕರವೇ ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಖಾಸಗಿ ಕನ್ನಡ ಶಾಲೆಗಳ ಉಳಿವಿಗೆ ಬಗ್ಗೆ ರಾಜ್ಯದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳೊದಾಗಿ ಹೇಳಿದರು.ಡಿವಿಜಿ ಕನ್ನಡ ಸಂಘದ ಅಧ್ಯಕ್ಷ ಕೆ. ಮಧುಸೂದನ್, ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಉಗನಿ ಆರ್. ನಾರಾಯಣಗೌಡ, ಮಾಜಿ ಅಧ್ಯಕ್ಷ ಹೊನ್ನಿಕೆರೆ ಟಿ. ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಪಿ. ಗಂಗಾಪುರ ಮುನಿರಾಮಯ್ಯ, ಮಹಿಳಾ ಪ್ರಮುಖ್ ಮುಡಿಯೂರು ಜಯಲಕ್ಷ್ಮಮಮ್ಮ, ರಂಗಭೂಮಿ ಕಲಾವಿದ ಚೇತನ್ ಪ್ರಸಾದ್, ಕುರುಡುಮಲೆ ಕ್ರಾಸ್ ನ ಕುವೆಂಪು ವಿದ್ಯಾ ಸಂಸ್ಥೆಯ ಸಿಬ್ಬಂದಿಯಾದ ನವೀನ್ ಪ್ರಸಾದ್ ಬಾಬು, ಮಾಲತಿ, ವರಲಕ್ಷ್ಮೀ, ವನಜಾಕ್ಷಿ, ನಾಗಮಣಿ, ಎನ್.ಯಲುವಹಳ್ಳಿ ಸುಭಾಷ್ ಚಂದ್ರ ಬೋಸ್ ಗ್ರಾಮೀಣ ಪ್ರೌಢಶಾಲೆಯ ಶಿಕ್ಷಕರಾದ ಎಸ್. ಕವಿತ, ಸುಬ್ರಮಣಿ, ಆನಂದ್, ಬೈರಕೂರು ಶ್ರೀ ವೆಂಕಟೇಶ್ವರ ಬಾಲಕಿರ ಪ್ರೌಢಶಾಲೆಯ ಮುರಳಿ, ವೆಂಕಟೇಶ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.



