ಚಳ್ಳಕೆರೆ: ಕರ್ನಾಟಕ ಕಾಡುಗೊಲ್ಲರ ಸಂಘ ಹಾಗೂ ಚಳ್ಳಕೆರೆ ತಾಲ್ಲೂಕು ಕಾಡುಗೊಲ್ಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾಡುಗೊಲ್ಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಿ.
ಕಾಡುಗೊಲ್ಲ ಸಮಾಜದ ನೂರಾರು ಜನರು ತಾಲೂಕ ಕಚೇರಿಯ ಮುಂಭಾಗ ಶಾಮಿಯಾನದ ಕೆಳಗೆ ಮಹಾತ್ಮ ಗಾಂಧಿ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರ ಇಟ್ಟು. ಧರಣಿ ಸತ್ಯಾಗ್ರಹ ನೆಡೆಸಿದರು.ಪ್ರತಿಭಟನೆನಿರತ ಕಾಡು ಗೊಲ್ಲ ಸಮಾಜದ ಜನರನ್ನುಉದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಂಗಸ್ವಾಮಿ. ಡಾ.ಕಾಂತರಾಜ್ ವರದಿಯನ್ನು ಕೂಡಲೇ ಜಾರಿ ಮಾಡಬೇಕು.
ರಾಜ್ಯದಲ್ಲಿ 12 ಜಿಲ್ಲೆಗಳಲ್ಲಿ 40 ತಾಲೂಕುಗಳಲ್ಲಿ 1250ಕ್ಕೂ ಹೆಚ್ಚು ಕಾಡುಗೊಲ್ಲರ ಹಟ್ಟಿಗಳು ಇದ್ದು.ಸುಮಾರು ಗ್ರಾಮೀಣ ಹಾಗೂನಗರ ಪ್ರದೇಶಗಳಲ್ಲಿ 6 ರಿಂದ 8 ಲಕ್ಷ ಜನ ಕಾಡುಗೊಲ್ಲ ಸಮಾಜವಿದ್ದು. ನಮ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ,ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜ ವಾಗಿದ್ದು.
ಕಾಡುಗೊಲ್ಲ ಸಮಾಜವನ್ನು ಎಸ್ಟಿ ಮೀಸಲಾತಿ ಕೊಡಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು.ಕೇಂದ್ರ ಸರ್ಕಾರ ಎಸ್ಟಿ ಮೀಸಲಾತಿ ಕೊಡಲು ಮೀನಾ ಮೇಷ ಎಣಿಸುತ್ತ ಸಮಾಜವನ್ನು ಕಡೆಗಣಿಸುತ್ತಿದೆ ಎಂದು ಹೇಳಿದರು.
ಇನ್ನು ರಾಜ್ಯಮಟ್ಟದ ಕಾಡುಗೊಲ್ಲ ಸಮಾಜದ ಅಧಿಕಾರಿಗಳು,ಜನಪ್ರತಿನಿಧಿಗಳು ಸೇರಿ ಕಾಡುಗೊಲ್ಲ ಎಂದು ಜಾತಿ ಪ್ರಮಾಣ ಪತ್ರವನ್ನು ರಾಜ್ಯದ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಈ ಕೂಡಲೇ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಬೇಕು ಎಂದರು.
ಈ ಪ್ರತಿಭಟನೆಯಲ್ಲಿ ಕಾಡುಗೊಲ್ಲ ಸಮಾಜದ ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಪರಶಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ್, ನಗರಸಭಾ ಸದಸ್ಯ ವೈ.ಪ್ರಕಾಶ್,ಮಾಜಿ ನಗರಸಭಾ ಸದಸ್ಯ ಕಾಟಪ್ಪನಹಟ್ಟಿ ವೀರೇಶ್, ಮುಖಂಡರಾದ ಬಿ.ವಿ.ಸಿರಿಯಣ್ಣ, ಗೆಜ್ಜಪ್ಪ, ಕ್ಯಾತಣ್ಣ, ಶಿವಣ್ಣ, ಹಾಗೂ ಕಾಡುಗೊಲ್ಲ ಸಮಾಜದ ಜನಪ್ರತಿನಿಧಿಗಳು, ಮುಖಂಡರು, ಸೇರಿದಂತೆ ನೂರಾರು ಸಮಾಜದ ನೂರಾರು ಜನರು ಭಾಗವಹಿಸಿದ್ದರು.