ಭಾರತದ ಕ್ರಿಕೆಟ್ ಪ್ರೇಮಿಗಳು ಯಾರು ಇಬ್ಬರು ಹಿರಿಯ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳಲು ಕಾತರದಿAದ ಕಾಯುತ್ತಿತ್ತೋ ಅವರು ಇಬ್ಬರೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಹೌದು ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಅವರು ಆತಿಥೇಯ ಆಸ್ಟೆçÃಲಿಯಾ ವಿರುದ್ದ ಪ್ರಾರಂಭ ಆಗಿರುವ ಏಕದಿನ ಸರಣಿಯ ಪ್ರಥಮ ಪಂದ್ಯದಲ್ಲಿ ೮ ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಅವರು ೮ ಎಸೆತ ಮಾತ್ರ ಆಡಿ ಒಂದು ಖಾತೆ ತೆರೆಯುವಲ್ಲೂ ಸಫಲರಾಗಲಿಲ್ಲ.
ರೋಹಿತ್ ಶರ್ಮಾ ಅವರು ತಮ್ಮ ೫೦೦ನೇ ಅಂತಾರಾಷ್ಟಿçÃಯ ಪಂದ್ಯವನ್ನು ಆಡುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ದಾಟಿದ್ದಾರೆ. ಇದೀಗ ೩೮ ವರ್ಷದ ಅವರು, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜರ ಸಾಲಿಗೆ ಐದನೇ ಭಾರತೀಯರಾಗಿ ಸೇರಿಕೊಂಡಿದ್ದಾರೆ.
ಇನ್ನು ವಿಶ್ವ ಮಟ್ಟದಲ್ಲಿ, ರೋಹಿತ್ ೫೦೦ ಅಂತರಾಷ್ಟಿçÃಯ ಪಂದ್ಯಗಳನ್ನು ಆಡಿದ ೧೧ನೇ ಆಟಗಾರ ಎನಿಸಿಕೊಂಡಿದ್ದಾರೆ. ಪರ್ತ್ ಕ್ರೀಡಾಂಗಣದಲ್ಲಿ ಭಾನುವಾರದಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟೆçÃಲಿಯಾ ತಂಡ ಫೀಲ್ಡಿAಗ್ ಆಯ್ದುಕೊಂಡಿತು. ವೇಗ ಮತ್ತು ಬೌನ್ಸ್ ನಿಂದ ಕೂಡಿದ ಪಿಚ್ ನಲ್ಲಿ ಭಾರತ ತಂಡದ ಆರಂಭಿ ಕರಾದ ರೋಹಿತ್ ಶರ್ಮಾ ಮತ್ತು ನಾಯಕ ಶುಭಮನ್ ಗಿಲ್ ಅವರು ಬಹಳ ಎಚ್ಚರಿಕೆಯಿಂದ ಆಡುತ್ತಿದ್ದರು. ಆದರೆ ಜೋಶ್ ಹ್ಯಾಜಲ್ವುಡ್
ಅವರು ಎಸೆದ ಪಂದ್ಯದ ೪ನೇ ಓವರ್ ನ ೪ನೇ ಎಸೆತದಲ್ಲಿ ರೋಹಿತ್ ಶರ್ಮಾ ಔಟಾದರು. ಆಫ್ ಸ್ಟಂಪ್ ನಾಚೆಗೆ ಹೋಗುತ್ತಿದ್ದ ಚೆಂಡನ್ನು ಕೆಣಕಲು
ಹೋದ ಅವರು ಮೂರನೇ ಸ್ಲಿಪ್ ನಲ್ಲಿದ್ದ ರೆನ್ ಶೋ ಅವರಿಗೆ ಕ್ಯಾಚ್ ನೀಡಿದರು. ಒಟ್ಟು ೧೪ ಎಸೆತಗಳನ್ನು ಆಡಿದ ಅವರು ೧ ಬೌಂಡರಿಯಿದ್ದ
೮ ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
ರೋಹಿತ್ ಶರ್ಮಾ ಔಟಾದರೂ ಮತ್ತೊಬ್ಬ ಅನುಭವಿ ವಿರಾಟ್ ಕೊಹ್ಲಿ ಅವರಾದರೂ ಕ್ರೀಸಿನಲ್ಲಿ ತಳವೂರಬಹುದೆಂಬ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ಈ ನಿಟ್ಟಿನಲ್ಲಿ ಅವರು ಮಾಡಿದ್ದ ಟ್ವೀಟ್ ಸಹ ವೈರಲ್ ಆಗಿತ್ತು. ಆಸ್ಟೆçÃಲಿಯಾದ ಮೊನಚಾದ ಬೌಲಿಂಗ್ ಮುಂದೆ ಆತುರ ತೋರದ ಅವರು ರನ್ ಗಳಿಸಲು
ಪರದಾಡಿದರು. ಸ್ಟಾರ್ಕ್ ಎಸೆದ ಪಂದ್ಯದ ೭ನೇ ಓವರ್ ನ ಮೊದಲ ಎಸೆತವನ್ನು ಆಫ್ ಸೈಡಿನಲ್ಲಿ ಡ್ರೆöÊವ್ ಮಾಡಲು ಯತ್ನಿಸಿದರು. ಆದರೆ ಕಾನಲಿ
ಹಿಡಿದ ಅದ್ಭುತ ಕ್ಯಾಚಿಗೆ ವಿರಾಟ್ ಕೊಹ್ಲಿ ಅವರು ವಿಕೆಟ್ ಕಳೆದುಕೊಳ್ಳಬೇಕಾಯಿತು. ಅಲ್ಲಿಗೆ ೮ ಎಸೆತ ಆಡಿದರೂ ಯಾವುದೇ ಗಳಿಕೆ ಇಲ್ಲದೆ ವಿರಾಟ್
ಕೊಹ್ಲಿ ಅವರು ವಿಕೆಟ್ ಕಳೆದುಕೊಳ್ಳಬೇಕಾಯಿತು.
ರೋಹಿತ್ ಶರ್ಮಾ ೫೦೦ನೇ ಪಂದ್ಯ! ರೋಹಿತ್ ಅವರ ಅದ್ಭುತ ಕ್ರಿಕೆಟ್ ಪಯಣ ಮೂರೂ ಮಾದರಿಗಳಲ್ಲಿಯೂ ವಿಸ್ತರಿಸಿದ್ದು ಅವರು ಭಾನುವಾರ ತಮ್ಮ ಅಂತಾರಾಷ್ಟಿçÃಯ ಜೀವನದ ೫೦೦ನೇ ಪಂದ್ಯವನ್ನು ಆಡಿದರು. ಇದು ಅವರ ೨೭೪ನೇ ಏಕದಿನ ಪಂದ್ಯವಾಗಿದೆ. ಉಳಿದAತೆ ೬೭ ಟೆಸ್ಟ್ ಪಂದ್ಯಗಳು ಮತ್ತು ೧೫೯mಟಿ೨೦ಐ ಪಂದ್ಯಗಳನ್ನು ಅವರು ಆಡಿದ್ದಾರೆ. ಭಾರತದ ಪರ ಅತಿ ಹೆಚ್ಚು ಟಿ೨೦ಐ ಪಂದ್ಯಗಳನ್ನು ಆಡಿದ ದಾಖಲೆಯೂ ಅವರ ಹೆಸರಲ್ಲಿದೆ ಎಂಬುದು ಅವರ ಹೆಗ್ಗಳಿಕೆಯಾಗಿದೆ.