ರಣಜಿ ಟ್ರೋಫಿಯಲ್ಲಿ ಅಬ್ಬರದ ದ್ವಿಶತಕದ ಹೊಡೆದಿದ್ದ ಪ್ರಥ್ವಿ ಶಾ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಗಲಿಲ್ಲ. ಪಂದ್ಯದ ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಅಚ್ಚರಿಯೆಂಬಂತೆ ಪ್ರಶಸ್ತಿಯನ್ನು ರುತುರಾಜ್ ಗಾಯಕ್ವಾಡ್ ಅವರಿಗೆ ಘೋಷಿಸಲಾಗಿತ್ತು. ಆದರೆ ಗಾಯಕ್ವಾಡ್ ಅವರು ತಮ್ಮ ಪ್ರಶಸ್ತಿಯನ್ನು ಪೃಥ್ವಿ ಶಾ ಅವರೊಂದಿಗೆ ಹಂಚಿಕೊಂಡು ಎಲ್ಲರ ಮನ ಗೆದ್ದಿದ್ದಾರೆ.
ಮುಂಬಯಿ ತಂಡದಿAದ ಗೇಟ್ ಪಾಸ್ ಸಿಕ್ಕ ಬಳಿಕ ಮಹಾರಾಷ್ಟç ಪರ ಆಡುತ್ತಿರುವ ಯುವ ಕ್ರಿಕೆಟಿಗ ಪ್ರಥ್ವಿ ಶಾ ಅವರು ಚಂಡೀಗಢ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಕೇವಲ ೧೪೧ ಎಸೆತಗಳಲ್ಲಿ ೨೨೨ ರನ್ ಗಳಿಸಿ ಅಬ್ಬರಿಸಿದರು. ಇದು ರಣಜಿ ಟ್ರೋಫಿ ಇತಿಹಾಸದಲ್ಲಿ ಎರಡನೇ ಅತಿ ವೇಗದ ದ್ವಿಶತಕವಾಗಿ ದಾಖಲಾಗಿತ್ತು. ಹೀಗಾಗಿ ಅವರಿಗೇ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಗಬಹುದೆಂದು ಎಲ್ಲರೂ ಎಣಿಸಿದ್ದರು. ಆದರೆ ಪ್ರಶಸ್ತಿ ಘೋಷಣೆ ಮಾಡಿದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಗಳಿಸಿದ್ದ ರುತುರಾಜ್ ಗಾಯಕ್ವಾಡ್ ಅವರಿಗೆ ಈ ಗೌರವ ಸಂದಿತು. ಆದರೆ ಪೃಥ್ವಿ ಶಾ ಅವರನ್ನೂ ವೇದಿಕೆಗೆ ಆಹ್ವಾನಿಸಿದ ಋತುರಾಜ್ ಗಾಯಕ್ವಾಡ್ ಅವರು ತಮ್ಮ ಪ್ರಶಸ್ತಿಯನ್ನು ಶಾ ಅವರೊಂದಿಗೆ ಹಂಚಿಕೊಂಡು ಅವರ ಸಾಧನೆಗೆ ಬೆಲೆ ನೀಡಿದರು.
ಇದರ ವಿಡಿಯೋವನ್ನು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ತನ್ನ ಎಕ್ಸ್ ಖಾತೆರಯಲ್ಲಿ ಪೋಸ್ಟ್ ಮಾಡಿದ್ದು ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಮಹತ್ವದ ಶತಕ ಗಳಿಸಿದ್ದ ರುತುರಾಜ್ ರುತುರಾಜ್ ಗಾಯಕ್ವಾಡ್ ಅವರು ಮೊದಲ ಇನ್ನಿಂಗ್ಸ್ನಲ್ಲಿ ೧೧೬ ರನ್ ಗಳಿಸಿ ಮಹಾರಾಷ್ಟ್ರತಂಡಕ್ಕೆ ಮುನ್ನಡೆ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ನಂತರದ ಇನ್ನಿಂಗ್ಸ್ನಲ್ಲಿ ಪ್ರಥ್ವಿ ಶಾ ಅವರು ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಕೇವಲ ೧೫೬ ಎಸೆತಗಳಲ್ಲಿ ೨೨೨ ರನ್ ಗಳಿಸಿ ಅಸಾಧಾರಣ ಪ್ರದರ್ಶನ ನೀಡಿದರು.
ಪಂದ್ಯದ ಮೂರನೇ ದಿನದ ಬೆಳಗ್ಗಿನ ಅವಧಿಯಲ್ಲಿ ಅವರು ಕೇವಲ ೭೨ ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಅದರಲ್ಲಿ ೧೩ ಬೌಂಡರಿಗಳಿದ್ದವು.
ಇದು ರಣಜಿ ಟ್ರೋಫಿ ಇತಿಹಾಸದಲ್ಲಿ ಆರನೇ ಅತಿ ವೇಗದ ಶತಕವಾಗಿದೆ. ಬಳಿಕ ೫೪ ಎಸೆತಗಳಲ್ಲಿ ೮೦ ರನ್ ಸೇರಿಸಿ, ೧೨೬ ಎಸೆತಗಳಲ್ಲಿ ೧೮೦ ರನ್
ತಲುಪಿದರು. ಅಂತಿಮವಾಗಿ ೧೪೧ ಎಸೆತಗಳಲ್ಲಿ ದ್ವಿಶತಕವನ್ನೂ ಪೂರೈಸಿದರು. ಅಗಸ್ಟ್ ನಲ್ಲಿ ನಡೆದ ಬುಚಿಬಾಬು ಟ್ರೋಫಿ ಪಂದ್ಯದಲ್ಲೂ ಅವರು
ಶತಕ ಬಾರಿಸಿದ್ದರು. ಪ್ರಥ್ವಿ ಶಾ ೨ನೇ ಅತಿ ವೇಗದ ದ್ವಿಶತಕ ಪ್ರಥ್ವಿ ಶಾ ಅವರ ಈ ದ್ವಿಶತಕವು ರಣಜಿ ಟ್ರೋಫಿಯ ಎಲೈಟ್ ಅಥವಾ ವಲಯ ಮಟ್ಟದಲ್ಲಿ ಎರಡನೇ ಅತಿ ವೇಗದ ದ್ವಿಶತಕ ಎನಿಸಿಕೊಂಡಿತು. ೧೯೮೪-೮೫ ರ ಋತುವಿನಲ್ಲಿ ಬಾಂಬೆ ಪರ ಬರೋಡ ವಿರುದ್ಧ ರವಿಶಾಸ್ತ್ರಿಅವರು ೧೨೩ ಎಸೆತಗಳಲ್ಲಿ ಗಳಿಸಿದ್ದ ದ್ವಿಶತಕ ರಣಜಿಯಲ್ಲಿ ದಾಖಲಾಗಿರುವ ಅತ್ಯಂತ ವೇಗದ ದ್ವಿಶತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನು, ಭಾರತೀಯ ಕ್ರಿಕೆಟಿಗನೊಬ್ಬನಿಂದ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಗಳಿಸಿರುವ ಅತಿ ವೇಗದ ದ್ವಿಶತಕದ ದಾಖಲೆ ಹೈದರಾಬಾದ್ನ ಆರಂಭಿಕ ಆಟಗಾರ
ತನ್ಮಯ್ ಅಗರ್ವಾಲ್ ಅವರ ಹೆಸರಲ್ಲಿದೆ. ಅವರು ೨೦೨೪ ರಲ್ಲಿ ನಡೆದ ರಣಜಿ ಟ್ರೋಫಿ ಪ್ಲೇಟ್ ಪಂದ್ಯದಲ್ಲಿ ಕೇವಲ ೧೧೯ ಎಸೆತಗಳಲ್ಲಿ ಈ ಸಾಧನೆ ಮೆರೆದಿದ್ದರು.



