ಬೆಂಗಳೂರು: ಸುಮಾರು ಒಂದು ವರ್ಷದ ಸಮಯದಲ್ಲಿ 130 ಕೋಟಿ ರೂಪಾಯಿ ಬೆಲೆ ಬಾಳುವ ಮಾದಕ ವಸ್ತುಗಳನು ಅಮಾಯಕ ಯುವಕರುಗಳಿಗೆ ಮಾರಾಟ ಮಾಡುವ ಸಮಯದಲ್ಲಿ ಸಮಾಜ ಘಾತುಕ ಶಕ್ತಿಗಳಿಂದ ವಶಪಡಿಸಿಕೊಂಡಿದ ಗಾಂಜಾ, ಹೆರಾಯಿನ್, ಬ್ರೌನ್ ಶುಗರ್, ಎಂಡಿಎಂಎ ಸೇರಿದಂತೆ ಇನ್ನೂ ಇತರೆ ವಸ್ತುಗಳನ್ನು / ಪದಾರ್ಥಗಳನ್ನು ಇಂದು ನಾಶ ಮಾಡಲಾಗಿದೆ.
ರಾಜ್ಯದ್ಯಂತ ದಾಳಿ ನಡೆಸಿ 7403 ಜನರುಗಳನ್ನು ಬಂಧಿಸಿ, 9645 ಕೆ ಜಿ ಗಾಂಜಾ, 233 ಕೆ ಜಿ ಸಿಂಥೆಟಿಕ್ಸ್ ಡ್ರಗ್ಸ್, ವಶಪಡಿಸಿ ಕೊಂಡಿರುತ್ತಾರೆ ಡ್ರಗ್ಸ್ ಹಾವಳಿ ತಡೆಗಟ್ಟಲು ಸಿಐಡಿ ಕಚೇರಿಯಲ್ಲಿ ಎಡಿಜಿಪಿ ಹೊಸ ಹುದ್ದೆಯನ್ನು ಪತ್ತೆ, ತನಿಖೆ ಮತ್ತು ಇತರೆ ಸಹಾಯಕ್ಕಾಗಿ ಸ್ಥಾಪಿಸಲಾಗಿದೆ.
ಇದಲ್ಲದೆ 5000 ಶಾಲಾ ಮಕ್ಕಳಿಗೆ ಮತ್ತು ನಾಲ್ಕು ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮತ್ತು ವಾಕಥಾನ್ ಮತ್ತು ಮ್ಯಾರಥಾನ್ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಇದಲ್ಲದೆ 17 ಕೆಜಿ ಅಫೀಮನನ್ನು ನಾಶಪಡಿಸಲು ಉತ್ತರ ಪ್ರದೇಶದ ಗಾಜಿಯಾಬಾದ್ಗೆ ಕಳಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ನೆಲಮಂಗಲದ ದಾಬಸ್ಪೇಟೆ ಬಳಿ ಇರುವ ಕೆ ಐ ಕೆ ಡಿ ಬಿ ಕೈಗಾರಿಕಾ ಪ್ರದೇಶದಲ್ಲಿ “ರೀಸಸ್ಟೈನಬಲಿಟಿ ಲಿಮಿಟೆಡ್” ಫ್ಯಾಕ್ಟರಿಯಲ್ಲಿ ನಾಶಪಡಿಸುವ ಕಾರ್ಯಕ್ರಮವನ್ನು ನ್ಯಾಯಾಲಯದ ಅನುಮತಿ ಪಡೆದು ಇಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯದ ಗೃಹ ಮಂತ್ರಿ ಡಾ. ಜಿ ಪರಮೇಶ್ವರ್ ಪಾಲ್ಗೊಂಡಿದ್ದರು.
ಅವರ ಸಮ್ಮುಖದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್ ಹಾಗೂ ಇತರೆ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಈ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನ ಪಡುತ್ತಿದ್ದಾಗ ಸಿಕ್ಕಿಬಿದ್ದ ಮತ್ತು ಮಾರಾಟ ಮಾಡುವಾಗ ಸಿಕ್ಕಿಬಿದ್ದ ಸುಮಾರು ವಿದೇಶಿಪ್ರಜೆಗಳು ಸೇರಿದಂತೆ ನೂರಾರು ಆರೋಪಿಗಳು ಜೈಲು ವಾಸ ಅನುಭವಿಸುತ್ತಿದ್ದಾರೆ.