ಬೆಂಗಳೂರು: ನಗರದಲ್ಲಿ ನಡೆಯುತ್ತಿದ್ದ ಹಸುಗೂಸುಗಳ ಮಾರಾಟ ದಂಧೆ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿ ನಡೆಸಿದ ವಿಚಾರಣೆಯಲ್ಲಿ ಮಹತ್ವದ ವಿಚಾರಗಳು ಬೆಳಕಿಗೆ ಬಂದಿದೆ. ಕುಡುಕನೋರ್ವ ನೀಡಿದ ಮಾಹಿತಿಯಿಂದ ದೊಡ್ಡ ಜಾಲ ಸಿಕ್ಕಿಬಿದ್ದಿದೆ. ಕರ್ನಾಟಕ-ತಮಿಳುನಾಡು ರಾಜ್ಯಗಳಲ್ಲಿ ಅವ್ಯಾಹತವಾಗಿ ಮಗು ಮಾರಾಟ ದಂಧೆ ನಡೆಯುತ್ತಿದೆ. ಬಂಧಿತ ಆರೋಪಿಗಳ ಪೈಕಿ ಓರ್ವರು ಬೆಂಗಳೂರು ಮೂಲದವರಾಗಿದ್ದು ಉಳಿದವರು ತಮಿಳುನಾಡಿನವರು.
ನೆರೆಯ ತಮಿಳು ನಾಡು ಮತ್ತು ಕರ್ನಾಟಕದಲ್ಲಿ ಸಕ್ರಿಯಾವಾಗಿದ್ದ ನವಜಾತಶಿಶು ಅಕ್ರಮಮಾರಾಟ ಜಾಲವನ್ನು ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ಭೇದಿಸಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಸಿಸಿಬಿ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದೆ. ಹಾಲುಗಲ್ಲದ ಕಂದಮ್ಮಗಳನ್ನ ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡ್ತಿದ್ದ ಜಾಲ ಇದಾಗಿದ್ದು…,
ಕಳೆದ ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ 20 ದಿನದ ಗಂಡು ಹಸುಗೂಸನ್ನ ಕಾರಿನಲ್ಲಿ ಮಾರಾಟ ಮಾಡಲು ತಂದಿದ್ದ ವೇಳೆ, ಮಗು ಮಾರಾಟ ಮಾಡುವ ವೇಳೆ ಸಿಸಿಬಿಗೆ ರೆಡ್ ಹ್ಯಾಂಡಾಗಿ ಈ ಗ್ಯಾಂಗ್ ಸಿಕ್ಕಿಬಿದ್ದಿದೆ. ಸದ್ಯ ತನಿಖೆ ನಡೆಸಲಾಗುತ್ತಿದ್ದು ಅನೇಕ ವಿಚಾರಗಳು ಬಹಿರಂಗವಾಗಿವೆ.
ಪ್ರಕರಣ ಭೇದಿಸಲು ಸಿಸಿಬಿ ಅಧಿಕಾರಿಗಳು ಮಕ್ಕಳು ಕೊಳ್ಳುವ ಪೋಷಕರ ಸೋಗಿನಲ್ಲಿ ಥೇಟ್ ಫೀಲ್ಮ್ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಕುಡುಕನೋರ್ವ ನೀಡಿದ್ದ ಮಹತ್ವದ ಕ್ಲ್ಯೂ ಆಧರಿಸಿ ಸಿಸಿಬಿ ಬೇಟೆಗಿಳಿದಿತ್ತು. ಸುಳಿವು ಆಧರಿಸಿ ಫೀಲ್ಡ್ ಗಿಳಿದ ಸಿಸಿಬಿ ತನಿಖೆ ವೇಳೆ ಪೊಲೀಸರೇ ಶಾಕ್ ಆಗಿದ್ರು.
ಅಸಹಾಯಕ ಬಡ ಮಹಿಳೆಯರಿಂದ ಡಾಕ್ಟರ್ ಸರ್ಕಾರಿ ಅಧಿಕಾರಿ ವರೆಗೂ ಲಿಂಕ್ ಇರುವುದು ಪತ್ತೆಯಾಗಿದೆ. ಅವ್ಯಾಹತವಾಗಿ ಪಸರಿಸಿಕೊಂಡಿರುವ ಬೃಹತ್ ಜಾಲದಲ್ಲಿ ವೈದ್ಯರೇ ಕಿಂಗ್ ಪಿನ್ಗಳಾಗಿದ್ದಾರೆ.ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಕ್ಕಳ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಸರ್ಕಾರಿ ಅಧಿಕಾರಿ ಕೂಡ ಶಾಮೀಲಾಗಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಮಾರಾಟವಾಗುವ ಮಕ್ಕಳ ನಕಲಿ ದಾಖಲೆ ಸೃಷ್ಟಿಸಿ ಕರಾಳ ದಂಧೆ ನಡೆಯುತ್ತಿರುವ ಬಗ್ಗೆ ಒಂದೊಂದೆ ಮುಖ ಅನಾವರಣಗೊಂಡಿದೆ. ಸದ್ಯ ಹಲವು ಆಯಾಮಗಳಲ್ಲಿ ಸಿಸಿಬಿ ತನಿಖೆ ಚುರುಕುಗೊಳಿಸಿದೆ.ಬಂಧಿತ ಗ್ಯಾಂಗ್ ಬರೋಬ್ಬರಿ 50-60ಕ್ಕೂ ಹೆಚ್ಚು ಶಿಶುಗಳನ್ನು ಅಕ್ರಮವಾಗಿ ಮಾರಾಟ ಮಾಡಿದೆ.
ರಾಜ್ಯದ ಹಲವು ಜಿಲ್ಲೆಗಳ ದಂಪತಿಗೆ ಮಾರಾಟ ಮಾಡಿದ್ದಾರೆ. ಬಡ ಮಹಿಳೆಯರಿಗೆ ಸ್ವಲ್ಪ ಹಣ ನೀಡಿ ಈ ಗ್ಯಾಂಗ್ ಲಕ್ಷ-ಲಕ್ಷ ಹಣ ಮಾಡ್ತಿತ್ತು. ನಕಲಿ ದಾಖಲೆಗಳ ಸೃಷ್ಟಿಸಿ ನವಜಾತ ಶಿಶುಗಳ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.
ಇನ್ನು ನವಜಾತ ಶಿಶು ಮಾರಾಟ ದಂಧೆಯಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಎಂಬುವರ ಪಾತ್ರ ರಿವೀಲ್ ಆಗಿದೆ. ಬಂಧಿತ ನಾಲ್ವರು ಆರೋಪಿಗಳಲ್ಲಿ ಮೂವರು ತಮಿಳು ನಾಡು ಮೂಲದವರು. ಮುರುಗೇಶ್ವರಿ, ಹೇಮಲತಾ, ಶರಣ್ಯ ತಮಿಳುನಾಡು ಮೂಲದವರು. ಮಹಾಲಕ್ಷ್ಮಿ ಬೆಂಗಳೂರಿನವರಾಗಿದ್ದು, ಆರ್ ಆರ್ ನಗರದಲ್ಲಿ ಮಹಾಲಕ್ಷ್ಮಿ ಮೂಲಕ ನವಜಾತ ಶಿಶು ಮಾರಾಟಕ್ಕೆ ಯತ್ನ ನಡೆದಿತ್ತು