ದೇವನಹಳ್ಳಿ :ಸಾಹಿತ್ಯವು ಸಮಾನತೆ, ಸ್ವಾತಂತ್ರ್ಯದ ಮೌಲ್ಯ ಮತ್ತು ಮಹತ್ವವನ್ನು ಪ್ರತಿಪಾದಿಸಿದ್ದು, ಸಾಹಿತ್ಯ ನಮಗೆ ಸಮಾನತೆ ಮತ್ತು ಸ್ವಾತಂತ್ರ್ಯದ ಮಹತ್ವವನ್ನು ಕಲಿಸಿದೆ,ಭಾಷೆ ಎಲ್ಲದಕ್ಕೂ ಮೂಲ. ಆದುದರಿಂದ ಭಾಷೆ, ಸಾಹಿತ್ಯ, ಸಂಸ್ಕೃತಿಯ ಮಧ್ಯೆ ಅವಿನಾಭಾವ ಸಂಬಂಧ ಇದೆ ಎಂದು ಸಮ್ಮೇಳನಾಧ್ಯಕ್ಷ ನಿವೃತ್ತ ಕನ್ನಡ ಉಪನ್ಯಾಸಕರು ಮತ್ತು ಸಾಹಿತಿಗಳು ಅರದೇಶನಹಳ್ಳಿಯ ಎನ್.ಮುನಿಕೆಂಪಣ್ಣಅವರು ಹೇಳಿದರು.
ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಚಪ್ಪರದಕಲ್ಲು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ “ದೇವನಹಳ್ಳಿ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ”ವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮುನ್ನ ಸಮ್ಮೇಳನಾ ಧ್ಯಕ್ಷರನ್ನು ಅರವನಹಳ್ಳಿಯಿಂದ ಜಿಲ್ಲಾಡಳಿತಭವನದವರೆಗೆ ಬೆಳ್ಳಿರಥದ ಮೆರವಣಿಗೆ ನಡೆಸಲಾಯಿತು. ಸಮ್ಮೇಳನದ ಅಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಶಿವಶಂಕರ್ ರಾಷ್ಟ್ರ ಧ್ವಜಾರೋಹಣ ಮತ್ತು ಕಸಾಪ ತಾ.ಅಧ್ಯಕ್ಷ ಆರ್.ಕೆ.ನಂಜೇಗೌಡ ಪರಿಷತ್ ಧ್ವಜಾರೋಹಣ ನೆರವೇರಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಪ್ರೊ . ಬಿ.ಎನ್.ಕೃಷ್ಣಪ್ಪ ಮಾತನಾಡಿ ಸಮ್ಮೇಳನವೆಂಬುದು ನುಡಿಜಾತ್ರೆ ಮಾತ್ರವಲ್ಲ ಜನರ ಸಮಾಗಮಕ್ಕೆ ಸೇತುವಾಗಿದೆ. ಪರಸ್ಪರ ಸಂವಹನಕ್ಕೆ ಒಂದು ಕೇಂದ್ರವಾಗಿದ್ದು, ಕಟ್ಟುನಿಟ್ಟಿನ ಶಿಷ್ಟಾಚಾರವಿಲ್ಲದೆ ಭಾಷೆ ಬಲ್ಲವರೂ, ಬಾರದವರೂ ಸೌಹಾರ್ದದಿಂದ ಸೇರುವಂತಾಗಬೇಕು. ನಾನು ನಿರಾಶಾವಾದಿಯಲ್ಲ. ಕನ್ನಡಿಗರಾದ ನೀವೂ ನಿರಾಶಾವಾದಿಗಳಾಗಬಾರದು. ಕನ್ನಡ ನಾಡು, ನುಡಿ, ನೆಲ, ಜಲ, ಗಾಳಿ, ಕಾಪಾಡುವಲ್ಲಿ ಸಂಕಲ್ಪ ಮಾಡೋಣ ಎಂದರು.
ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿ ದೇವನಹಳ್ಳಿ ತಾಲೂಕಿನ ಇತಿಹಾಸದ ವೈಶಿಷ್ಟ್ಯವನ್ನು ತಿಳಿಸಿದರು. ಸಮ್ಮೇಳನದಲ್ಲಿ ಕವಿಗಳ ವಿಚಾರಗೋಷ್ಠಿ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕಸಾಪ ಕೋಶಾಧ್ಯಕ್ಷ ಮುನಿರಾಜ್ಅಪ್ಪಯ್ಯ, ಕಸಾಪ ತಾ. ಗೌ. ಅಧ್ಯಕ್ಷ ಎನ್. ಚಂದ್ರಶೇಖರ್, ತಾ. ಪ್ರಧಾನ ಕಾರ್ಯದರ್ಶಿ ದೇವರಾಜ್, ಗೌರವ ಕಾರ್ಯದರ್ಶಿ ಪರಮೇಶ್, ಆಲೂರುದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷ ಮುನಿರಾಜು .ಪಿ,ಕೊಯಿರಾ ಗ್ರಾ.ಪಂ. ಅಧ್ಯಕ್ಷೆ ಸುಧಾ, ಶ್ರೀ ರಾಮಯ್ಯ, ಲಕ್ಷ್ಮೀಕಾಂತ್, ಪದಾಧಿಕಾರಿಗಳಾದ ಜೆ. ಎನ್ ರಾಮಾಂಜಿನಪ್ಪ, ಎ .ಎಸ್ ಅಶ್ವತ್ ಗೌಡ ,ಆರ್. ವೆಂಕಟರಾಜು, ರಂಗಸ್ವಾಮಿ, ಅಶ್ವತ್ಗೌಡ, ಶಿವಾಜಿಗೌಡ, ಮುನಿರಾಜು, ಭೈರೇಗೌಡ ವೇಣು, ರಮೇಶ್, ರಾಧಾಕೃಷ್ಣರೆಡ್ಡಿ, ಮಾಧವಿ, ರಾಮಣ್ಣ, ಮಂಜುನಾಥ್, ರಮೇಶ್ ಕುಮಾರ್ ರವಿಕುಮಾರ್ ಸೇರಿದಂತೆ ತಾಲ್ಲೂಕು ಜಿಲ್ಲಾ ಮತ್ತು ತಾಲ್ಲೂಕು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಶಾಲಾ ಮಕ್ಕಳು ಮತ್ತಿತರರು ಇದ್ದರು.