ದೇವನಹಳ್ಳಿ: ತಾಲೂಕು ಪೋಟೋ ಮತ್ತು ವಿಡಿಯೋಗ್ರಾಫರ್ಗಳ ಸಂಘದ ಮುಂದಿನ ಅವಧಿಗೆ ಗೊಬ್ಬರಗುಂಟೆ ಶಿವಕುಮಾರ್ ತಂಡ ಅಧಿಕಾರ ವಹಿಸಿಕೊಂಡಿತು.ಪಟ್ಟಣದ ಡಾ|| ಶಿವಕುಮಾರಸ್ವಾಮೀಜಿ ವೃತ್ತದ ಬಳಿ ಇರುವ ಸಂಘದ ಕಚೇರಿಯಲ್ಲಿ ಸಂಘದ ನಿರ್ಗಮಿತ ಅಧ್ಯಕ್ಷ ಬಿ.ಎಂ.ರವಿ ನೂತನ ತಂಡಕ್ಕೆ ಲೆಕ್ಕಪತ್ರಗಳನ್ನು ಹಸ್ತಾಂತರ ಮಾಡುವ ಮೂಲಕ ಶುಭ ಹಾರೈಸಿ ಅಧಿಕಾರ ಬಿಟ್ಟುಕೊಟ್ಟರು.
ಸಂಘದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಶಿವಕುಮಾರ್ ಮಾತನಾಡಿ ಹಿಂದೆ ಸಂಘದ ಸ್ಥಾಪಕರಾದ ಎಂ.ಎನ್.ಶಂಕರರಾಜು, ಶಾಂತಮೂರ್ತಿ, ವಿಜಯಕುಮಾರ್, ನಾಗರಾಜ್ ಇದುವರೆವಿಗೂ ಅಧ್ಯಕ್ಷರಾಗಿದ್ದ ಬಿ.ಎಂ. ರವಿ ಸೇರಿದಂತೆ ಎಲ್ಲಾ ಹಿರಿಯರ ಅನುಭವದ ಮಾರ್ಗದಶರ್Àನ ಪಡೆದು ಸಂಘದ ಅಭಿವೃದ್ದಿಗೆ ಶ್ರಮಿಸುವೆ ಎಲ್ಲರ ಪರಿಶ್ರಮದಿಂದ ಸಂಘದಲ್ಲಿ 11 ಲಕ್ಷಕ್ಕೂ ಮಿಗಿಲಾದ ಹಣ ಉಳಿತಾಯ ಮಾಡಿದ್ದು ಇದನ್ನು ಇನ್ನೂ ಹೆಚ್ಚಾಗಿ ಉಳಿತಾಯ ಮಾಡಿ ಛಾಯಾಗ್ರಾಹಕರ ಕಷ್ಟಸುಖಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಆಗಸ್ಟ ತಿಂಗಳಲ್ಲಿ ಅದ್ದೂರಿಯಾಗಿ ವಿಶ್ವ ಛಾಯಾಗ್ರಾಹಣ ದಿನಾಚರಣೆ ಆಚರಿಸಲಾಗುವುದು ಸಂಘದಿಂದ ಹೊರಗುಳಿದವರನ್ನು ಒಳತರಲು ಪ್ರಯತ್ನಿಸಲಾಗುವುದು ಎಂದರು.ಸಂಘ ನಡೆದು ಬಂದ ಹಾದಿಯ ಬಗ್ಗೆ ಮಾಜಿ ಅಧ್ಯಕ್ಷ ಶಾಂತಮೂರ್ತಿ, ಬಿ.ಎಂ. ರವಿ ಮಾತನಾಡಿದರು.
ಸಂದ ಮುಂದಿನ ಅವಧಿಯ ನೂತನ ತಂಡ: ಗೌರವಧ್ಯಕ್ಷರು: ರವಿ ಬಿ.ಎಂ. ಅಧ್ಯಕ್ಷರು ಶಿವಕುಮಾರ್ ಪಿ, ಉಪಾಧ್ಯಕ್ಷರು: ವಿಜಯಕುಮಾರ್ ದೇವನಹಳ್ಳಿ, ಪ್ರಧಾನ ಕಾರ್ಯದರ್ಶಿ : ಗಿರೀಶ್ ವಿದ್ಯಾನಗರ ಕ್ರಾಸ್, ಖಜಾಂಚಿ :ಮಂಜುನಾಥ ಸಿ.ವಿ,ಕಾರ್ಯದರ್ಶಿ :ನಾರಾಯಣಸ್ವಾಮಿ ಕೆಂಪತಿಮ್ಮನಹಳ್ಳಿ
ಸಂ|| ಕಾರ್ಯದರ್ಶಿ : ನವೀನ್ ವಿಜಯಪುರ, ನಿರ್ದೇಶಕರುಗಳು: ನಾರಾಯಾಣಸ್ವಾಮಿ ಡಿ. ಎನ್,ಸೂರ್ಯಪ್ರಕಾಶ್, ವಿಜಯಪುರ, ನಾರಾಯಣಸ್ವಾಮಿ ಪಿ. ಎಂ, ರವಿ ವಿಜಯಪುರ, ಲಕ್ಷ್ಮೀನಾರಾಯಣ ವೆಂಕಟಗಿರಿಕೋಟೆ, ಗೋಪಾಲ್, ವಿಜಯಪುರ, ರಾಜು ಚನ್ನಹಳ್ಳಿ ಮೂರ್ತಿ ಬೂದಿಗೆರೆ, ಮಂಜು ಬಿ. ಎಂ. ಎಸ್. ಹಿರಿಯ ಸಲಹೆಗರಾರು ಶಾಂತಮೂರ್ತಿ ಎಸ್. ಎಂ ಸ್ಟುಡಿಯೋ, ವಿಜಯಕುಮಾರ್ ವಿ ವಿಜಯ್ ಸ್ಟುಡಿಯೋ, ನಾಗರಾಜ್ ಶ್ರೀರಾಮ ಸ್ಟುಡಿಯೋ