ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಸಿಂಗಾಪುರ್ ಮಹಾ ದೇಶದಲ್ಲಿ ನಡೆಯುವ ಎರಡನೇ ವಿಶ್ವಕನ್ನಡ ಹಬ್ಬದ ಸಹ ನಿರ್ದೇಶಕರಾಗಿ ಸನ್ಮಾನ್ಯ ಶ್ರೀ ದೇವರಾಜ್ ವರನ್ನು ಆಯ್ಕೆ ಮಾಡಲಾಗಿದೆ.
ಅನೇಕ ವರ್ಷಗಳಿಂದ ಸಾಂಸ್ಕೃತಿಕ ರಂಗದಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಾ ಇವೆಂಟ್ಸ್ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಅನೇಕ ದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿರುವ ಹಾಗೂ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಯ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶ್ರೀಯುತ ದೇವರಾಜ್ ರವರು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಎಲ್ಲಾ ಆಶಯಗಳನ್ನು ಮನಗಂಡು ಸ್ವತಃ ತಾವಾಗಿಯೇ ಬಂದು ಸಂಸ್ಥೆಯ ಕಾರ್ಯಗಳಲ್ಲಿ ಭಾಗಿಯಾಗುತ್ತಿರುವುದು ಶ್ಲಾಘನೀಯ.
ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಸಿ. ಸೋಮಶೇಖರ್ ಅವರ ಅಮೃತ ಹಸ್ತದಿಂದ ಆದೇಶ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಡಾ. ಶಿವಕುಮಾರ್ ನಾಗರ ನವಿಲೆ, ಕಾರ್ಯದರ್ಶಿ ಶ್ರೀಮತಿ ರಂಜಿತಾ, ಸಂಯೋಜನಾಧಿಕಾರಿ ಡಾ. ಗುಣವಂತ ಮಂಜು, ಸ್ನೇಹ ಬುಕ್ ಹೌಸ್ ಮಾಲೀಕರಾದ ಶ್ರೀ ಕೆ.ಬಿ ಪರಶಿವಪ್ಪ, ಶ್ರೀ ನಾರಾಯಣ್, ಶ್ರೀ ಗುರು ಮಹೇಶ್ ಮುಂತಾದವರು ಭಾಗಿಯಾಗಿದ್ದರು.