ಬೆಂಗಳೂರು: ಆಚಾರ್ಯ ಶ್ರೀ ರಾಕುಮ್ ಆಶ್ರಮದದಲ್ಲಿ ನಢೆಸುತ್ತಿರುವ ಆಶ್ರಮದಲ್ಲಿ ಬೆಳದ ಮತ್ತು ಶಿಕ್ಷಕಿಯಾಗಿ ಸೇವೆ ಸಲ್ಲಿತ್ತಿರುವ ಕನ್ನಿಕಾ ಪರಮೇಶ್ವರಿ ಮತ್ತು ಇಂಜನಿಯರ್ ಎಂ.ವಿ.ನಾಗರಾಜ್ ರವರು ಅದ್ದೂರಿ ವಿವಾಹ ಮಹೋತ್ಸವ.
ಇಂದು ಸಂಜೆ ವಿವಾಹ ಕಾರ್ಯಕ್ರಮದಲ್ಲಿ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಮಹಾಸ್ವಾಮಿಗಳು, ಆಚಾರ್ಯ ಶ್ರೀ ರಾಕುಮ್ ರವರು, ಶಾಸಕರಾದ ಎಸ್.ಆರ್.ವಿಶ್ವನಾಥ್ ರವರು, ಇಂಟಕ್ ರಾಜ್ಯಾಧ್ಯಕ್ಷರಾದ ಲಕ್ಷ್ಮಿ ವೆಂಕಟೇಶ್ ರವರು ವಧು-ವರನಿಗೆ ಆಶೀರ್ವಾದ ಮಾಡಿದರು.
ಶ್ರೀ ನಂಜಾವಧೂತ ಸ್ವಾಮೀಜಿಗಳು ಮಾತನಾಡಿ ಮಕ್ಕಳು, ಹಿರಿಯರು ಮತ್ತು ಮಹಿಳೆಯರ ಜೀವನದಲ್ಲಿ ಗುರುಗಳ ಸಾನಿಧ್ಯ ಮತ್ತು ಆಶೀರ್ವಾದ ಲಭಿಸಬೇಕಾದರೆ ಪೂರ್ವ ಜನ್ಮದ ಪುಣ್ಯ ಇರಬೇಕು.ಸಮಾಜದಲ್ಲಿ ಅಶಕ್ತರ ಸಂಖ್ಯೆ ಹೆಚ್ಚಿದೆ, ಅವರನ್ನ ಸಶಕ್ತರಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು.
ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯದಂತೆ ಋಣವಿಲ್ಲದೆ ಯಾವ ಬಂಧಗಳು ಬೆಸೆಯಲಾರವು. ಋಣವಿದ್ದಾಗ ಗುರುಗಳ ಮಾರ್ಗದರ್ಶನ ಎಲ್ಲರಿಗೂ ಸಿಗುತ್ತದೆ.ಶ್ರೀಮಂತರ ಮಕ್ಕಳಿಗೆ ಸಿಗುವ ಎಲ್ಲ ಸೌಲಭ್ಯಗಳು ಬಡ ಮಕ್ಕಳಿಗೂ ಸಿಗಬೇಕು. ಎಲ್ಲರು ಮಕ್ಕಳನ್ನ ಸಮಾನವಾಗಿ ಕಾಣಬೇಕು.
ಹೆಂಡತಿಗೆ ಉತ್ತಮ ಗಂಡನಾಗಿ , ತಂದೆ, ತಾಯಿಗೆ ಉತ್ತಮ ಮಗನಾಗಿ, ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬದುಕುವುದೆ ಆದರ್ಶ ಜೀವನದ ಪರಿಕಲ್ಪನೆ ಎಂದು ಹೇಳಿದರು.ಆಚಾರ್ಯ ಶ್ರೀ ರಾಕುಮ್ ಗುರೂಜಿರವರು ಮಾತನಾಡಿ ಶ್ರೀ ರಾಕುಮ್ ಅಂಧರ ಶಾಲೆ ಕಳೆದ 25ವರ್ಷಗಳಿಂದ ಅಂಧರ ಮತ್ತು ಕಡುಬಡ ಮಕ್ಕಳಿಗೆ ಉಚಿತ ಶಿಕ್ಷಣ, ಆಶ್ರಯ ಮತ್ತು ಉದ್ಯೋಗ ನೀಡಿ ಅವರ ಜೀವನದ ಬೆಳಕಾಗಿ ಶ್ರಮಿಸುತ್ತಿದೆ.
ಶ್ರೀ ರಾಕುಮ್ ಅಂಧರ ಶಾಲೆ ಮತ್ತು ಶ್ರೀ ರಾಕುಮ್ ಆಶ್ರಮದ ಸಂಸ್ಥಾಪಕರಾದ ಶ್ರೀ ಆಚಾರ್ಯ ಶ್ರೀ ರಾಕುಮ್ ಗುರೂಜಿರವರು ಸಮಾಜದಲ್ಲಿ ಇರುವ ಶ್ರೀಮಂತ ಮತ್ತು ಬಡವ ಎಂಬ ತೊಡಕು ನಿವಾರಣೆ ಮಾಡಬೇಕು ಮಕ್ಕಳು ದೇವರ ಸಮಾನ ಅವರಿಗೆ ಎಲ್ಲ ಸೌಲಭ್ಯ, ಸೌವಲತ್ತು ಸಿಗಬೇಕು ಎಂಬುದು ಇವರ ನಮ್ಮ ಆಶಯಆಚಾರ್ಯ ಶ್ರೀ ರಾಕುಮ್ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ಮಕ್ಕಳಿಗೆ ವಿವಾಹ ವಯಸ್ಸರಾದವರಿಗೆ ಶ್ರೀ ರಾಕುಮ್ ಶಾಲೆಯಲ್ಲಿಯೆ ಉಚಿತ ವಿವಾಹ ನೇರವೆರಿಸಲಾಗುತ್ತಿದೆ.
ಈಗಾಗಲೆ 10ಕ್ಕೂ ಯುವತಿಯರಿಗೆ ವಿವಾಹಭಾಗ್ಯ ನೇರವೆರಿದೆ. ವಿವಾಹದ ಸಂಪೂರ್ಣ ವೆಚ್ಚವನ್ನು ಆಶ್ರಮವೆ ಭರಿಸುತ್ತಿದೆ, ಸಾರ್ವಜನಿಕರು ಸಹ ವಿವಾಹ ಸಂದರ್ಭದಲ್ಲಿ ಆಹಾರ ಪದಾರ್ಥಗಳು, ವಸ್ತುಗಳನ್ನು ದೇಣಿಗೆಯ ನೆರವು ನೀಡುತ್ತಿದ್ದಾರೆ.
ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಕುಮಾರಿ ಕನ್ನಿಕಾ ಪರಮೇಶ್ವರಿರವರು ಎಂ.ಎ ಮಾಸ್ಟರ್ ಪದವಿ ಹಾಗೂ ಬಿ.ಎಡ್ ಶಿಕ್ಷಣ ಪೊರೈಸಿ ಇಲ್ಲಿಯೆ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮದುವೆ ಜನ್ಮ, ಜನ್ಮದ ಅನುಬಂಧ ಎಂಬಂತೆ ಕನ್ನಿಕಾ ಪರಮೇಶ್ವರಿರವರನ್ನು ವರಿಸಲಿರುವ ವರ ಎಂ.ವಿ.ನಾಗರಾಜ್ ಬಿ.ಇ.ಶಿಕ್ಷಣ ಮುಗಿಸಿದ್ದು ಇಂದು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ಹೇಳಿದರು.