ದೇವನಹಳ್ಳಿ: ರೈತರು ಯಾವುದೇ ಬೆಳೆದಾಗ ಅದಕ್ಕೆ ಸಂಸ್ಕರಣೆ ವ್ಯಾಪಾರಕರಣ ಆದಾಗ ಹೆಚ್ಚಿನ ಬೆಲೆ ಸಿಕ್ಕಾಗ ರೈತರಿಗೆ ಅನುಕೂಲವಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಖಾತೆ ಸಚಿವ ಕೆಎಚ್ ಮುನಿಯಪ್ಪ ಹೇಳಿದರುದೇವನಹಳ್ಳಿ ತಾಲೂಕು, ಐಬಸಾಪುರ ಗ್ರಾಮದಲ್ಲಿ ಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಬಿ ಎಸ್ ಸಿ ಹಾನರ್ಸ್ ವಿದ್ಯಾರ್ಥಿಗಳ ಮೂರು ತಿಂಗಳ ಗ್ರಾಮೀಣ ಅನುಭವದ ಕೃಷಿ ವೈಸಿರಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ.
ಬೆಂಗಳೂರು ಗ್ರಾಮಾಂತರ ಕೋಲಾರ ಬೈಲು ಸೀಮೆ ಪ್ರದೇಶಗಳಲ್ಲಿ ನೀರಿನ ಬಾವ ಹೆಚ್ಚಾಗಿದ್ದರೂ ಉತ್ತಮವಾಗಿ ಬೆಳೆ ಬೆಳೆಯುತ್ತಾರೆ ರೈತರು ಆದರೂ ನಾವು ಲೋಕಸಭಾ ಸದಸ್ಯರಾಗಿದ್ದಾಗ ನೀರಿನ ಬವಣೆ ನಗಿಸುವುದಕ್ಕೆ ಕೆ ಸಿ ವ್ಯಾಲಿ ಹೆಚ್ ಏನ್ ಯಲ್ಲಿ ಮುಖಾಂತರ ಕರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇವೆ ರೈತರು ಉತ್ತಮ ತಳಿಗಳನ್ನು ಬಳಸಿಕೊಂಡು ಒಳ್ಳೆಯ ಇಳುವರಿಯನ್ನು ಪಡೆಯಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಮಾಜಿ ಸಂಸದ ವೀರಪ್ಪ ಮೊಯ್ಲಿ ಮಾತನಾಡಿ ರೈತರು ಬೆಳೆ ಬೆಳೆದರೆ ಎಲ್ಲರಿಗೂ ಆಹಾರ ಸಿಗುತ್ತದೆ ರೈತರ ಪ್ರತಿಭಟನೆಗೆ ಹೇಳಿದರೆ ಹಾರ ಸಿಗುವುದೇ ಕಷ್ಟಕರವಾಗುತ್ತದೆ ಇದರ ಪರಿಣಾಮವನ್ನು ದೆಹಲಿಯಲ್ಲಿ ನೋಡಿದ್ದೇವೆ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೀರಿನ ಅಭಾವ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು ಅದನ್ನು ಗಮನಿಸಿ ಕಳೆದ ಬಾರಿ ಸಿದ್ದರಾಮಯ್ಯನ ತತ್ವ ಸರ್ಕಾರದಲ್ಲಿ ಕೆ ಸಿ ವ್ಯಾಲ್ಯು ಎಚ್ ಎನ್ ವ್ಯಾಲ್ಯೂ ಹಾಗೂ ವೃಷಭಾವತಿ ವ್ಯಾಲ್ಯೂ ಎತ್ತಿನಹೊಳೆ ಮುಖಾಂತರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ.
ರೈತರು ಮಣ್ಣಿನ ಫಲವತ್ತತೆ ಬಗ್ಗೆ ತಿಳಿದುಕೊಂಡು ಒಳ್ಳೆಯ ಬೆಳೆದರೆ ಅದು ದೇಶಕ್ಕೆ ಆಹಾರ ಸಿಗುತ್ತದೆ ಇಂತಹ ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ರಮಗಳಿಂದ ರೈತರಿಗೆ ಅನುಕೂಲವಾಗುತ್ತದೆ ಅದರಲ್ಲೂ ಕಾಲೇಜು ವಿದ್ಯಾರ್ಥಿನಿಯರು ಕೃಷಿ ಪದವಿಗಳನ್ನು ಪಡೆದರೆ ಇಲಾಖೆ ಅಭಿವೃದ್ಧಿಯಾಗುತ್ತದೆ ಎಂದರು.
ಜಿಕೆವಿಕೆ ಕಾಲೇಜು ಕುಲಪತಿಯಾದ ಡಾಕ್ಟರ್ ಸುರೇಶ್ ಮಾತನಾಡಿ ನಮ್ಮ ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಗ್ರಾಮೀಣ ಅನುಭವದಲ್ಲಿ ಸುಮಾರು 20 ಕುಂಟೆ ಜಾಗದಲ್ಲಿ ಹಲವಾರು ಬೆಳೆಗಳನ್ನು ಬೆಳೆದು ತೋರಿಸಿದ್ದಾರೆ ಬೆಂಗಳೂರು ಗ್ರಾಮಾಂತರ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತರು ಹೆಚ್ಚಿನ ಬೆಳೆಗಳು ಬೆಳೆಯುತ್ತಾರೆ ಇಸ್ರೇಲ್ ದೇಶದ ಪದ್ಧತಿಗಿಂತಲೂ ಈ ಜಿಲ್ಲೆಗಳಲ್ಲಿ ಉತ್ತಮವಾಗಿ ಬೆಳೆ ಬೆಳೆಯುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷ ನಾಗಮಣಿ ಮಂಜು ನಾಥ್ ಮಾತನಾಡಿ ನಮ್ಮ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ನಮ್ಮ ಗ್ರಾಮದ ರೈತರೊಂದಿಗೆ ಹಲವಾರು ವಿಷಯಗಳನ್ನು ತಿಳಿದುಕೊಂಡು ರೈತರಿಗೂ ಹಲವಾರು ರೀತಿಯ ವಿಷಯಗಳು ತಿಳಿಸಿಕೊಟ್ಟಿದ್ದಾರೆ ಇಂತಹ ಕಾರ್ಯಕ್ರಮಗಳಿಂದ ಗ್ರಾಮದ ಜನರಿಗೆ ಬಾಳಷ್ಟು ಅನುಕೂಲವಾಗಿದೆ ಎಂದರು.
ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ಆನಂದ್ ರಾಮೇಗೌಡ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ಜೀಪಂ ಮಾಜಿ ಸದಸ್ಯ ಕೆ ಸಿ ಮಂಜುನಾಥ್ ಜಿಲ್ಲಾ ಎಸ್ ಸಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಅಕಾಯಮ್ಮ ಚನ್ನರಾಯಪಟ್ಟಣ ಗ್ರಾಪಂ ಅಧ್ಯಕ್ಷ ಮಾರೇಗೌಡ ಮಾಜಿ ಅಧ್ಯಕ್ಷ ಶಿವಕುಮಾರ್ ಜಿಕೆವಿಕೆ ಕಾಲೇಜು ಪ್ರಾಧ್ಯಾಪಕರಾದ ಸಿ ನಾರಾಯಣಸ್ವಾಮಿ ಸವಿತಾ ಗಣೇಶ್ ಗ್ರಾಪಂ ಉಪಾಧ್ಯಕ್ಷರಾದ ನರಸಮ್ಮ ಎಂಪಿಸಿಎಸ್ ಮಾಜಿ ಅಧ್ಯಕ್ಷ ಬಿ ರಾಜಣ್ಣ ಕುರುಬರಹಳ್ಳಿ ರಂಗಣ್ಣ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಗ್ರಾಮಸ್ಥರು ಹಾಜರಿದ್ದರು.