ಹೊಸಕೋಟೆ: ವೈಕುಂಠ ಏಕಾದಶಿ ಮತ್ತು ಹನುಮಜಯಂತಿ ಆಚರಣೆಯಲ್ಲಿ ವಿತರಿಸಿದ ಪ್ರಸಾದ ಸೇವನೆ ಮಾಡಿ ಭಕ್ತಾಧಿಗಳು ಅಸ್ವಸ್ಥಗೊಂಡ ಹಿನ್ನೆಲೆ ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ತಾಲೂಕು ಕಚೇರಿ ಆವರಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ಶಾಸಕ ಶರತ್ ಬಚ್ಚೇಗೌಡ, ಸಹಾಯಕ ಜಿಲ್ಲಾಧಿಕಾರಿ ಅಮರೇಶ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜುನ ಬಾಲದಂಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ಸುನಿಲ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ: ವೀಣಾ, ತಹಶೀಲ್ದಾರ್ ವಿಜಯ್ ಕುಮಾರ್ ಸ್ಭೆರಿದಂತೆ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಬಳಿಕ ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆ, ಎಂವಿಜೆ ಆಸ್ಪತ್ರೆಗೆ ತೆರಳಿ ಅಸ್ವಸ್ಥರಾದವರ ಜೊತೆ ಆರೋಗ್ಯ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ ಹನುಮ ಜಯಂತಿ ಪ್ರಸಾದ ಸ್ವೀಕಾರ ಮಾಡಿದ ನಂತರ ಈ ರೀತಿ ಘಟನೆ ಜರುಗಿದ್ದು ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರ ಘಟನೆಗೆ ಕಾರಣ ತಿಳಿಯಲಿದೆ. ಸಕಾಲಕ್ಕೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಚಿಕಿತ್ಸೆಯನ್ನು ಅಸ್ವಸ್ಥರಿಗೆ ನೀಡಿದ್ಧಾರೆ. ಇದರಿಂದ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದೆ ಎಂದರು.
ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿರುವ ಎಲ್ಲಾ ರೋಗಿಗಳ ವೈದ್ಯಕೀಯ ವೆಚ್ಚವನ್ನು ¸ರಕಾರ ಭರಿಸಲಿದೆ. ಈ ವಿಚಾರವಾಗಿ ಶಾಸಕ ಶರತ್ ಬಚ್ಚೇಗೌಡ ಹಾಗು ನಾನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಬಳಿ ಚರ್ಚಿಸಿದ್ದೇವೆ. ರೋಗಿಗಳು ಕೂಡ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ಅಸ್ವಸ್ಥರ ಸಂಖ್ಯೆ 241ಕ್ಕೆ ಏರಿಕೆ ಆಗಿದ್ದರು ಸಹ ಐಸಿಯುನಲ್ಲಿರುವವರು ಚೇತರಿಕೆ ಕಂಡು ಸಾಮಾನ್ಯ ವಾರ್ಡ್ಗೆ ಸ್ಥಳಾಂತರಗೊಂಡಿದ್ದಾರೆ. ಇನ್ನು ಸಾಮಾನ್ಯ ವಾರ್ಡ್ನಲ್ಲಿದ್ದವರು ಕೂಡ 30ಕ್ಕೂ ಹೆಚ್ಚಿನ ಅಸ್ವಸ್ಥರು ಡಿಸ್ಚಾರ್ಚ್ ಆಗಿ ಮನೆಗೆ ತೆರಳಿದ್ದಾರೆ. ಇದರಿಂದ ಒಚಿದು ರೀತಿಯಲ್ಲಿ ಸಮಾಧಾನ ತಂದಿದೆ. ಪ್ರಮುಖವಾಗಿ ಬೇರೆ ಯಾರಿಗಾದರೂ ಕೂಡ ಆರೋಗ್ಯದಲ್ಲಿ ಏರುಪೇರಾದರೆ ಅಂಬೇಡ್ಕರ್ ಭವನದಲ್ಲಿ ಕ್ಲಿನಿಕ್ ಪ್ರಾರಂಭ ಮಾಡಿದ್ದು ಅಲ್ಲಿ ತೆರಳಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.