ಚನ್ನರಾಯಪಟ್ಟಣ: ನಮ್ಮ ಕರ್ನಾಟಕದ ರಾಜ್ಯ ನದಿಗಳ ಬೀಡು ಕವಿಗಳ ನಾಡು ಎಲ್ಲಕ್ಕೂ ಹೆಸರು ಇರುವ ನಮ್ಮ ಭಾಷೆ ಉಳಿಸಿ ಬೆಳೆಸುವಂತಾಗಬೇಕು ಎಂದು ಗ್ರಾಪಂ ಸದಸ್ಯ ದೇವರಾಜ್ ಹೇಳಿದರು.
ದೇವನಹಳ್ಳಿ ತಾಲೂಕು ಚನ್ನಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ನಟ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ ಭುವನೇಶ್ವರಿ ಹಾಗೂ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜ್ಯ ಸಲ್ಲಿಸಿ ಮಾತನಾಡಿ ರಾಜ್ಯೋತ್ಸವ ನಿತ್ಯೋತ್ಸವ ವಾಗಬೇಕು ಎಲ್ಲಾ ಭಾಷೆಗಳನ್ನು ಪ್ರೀತಿಸಿದರೆ ಕನ್ನಡವನ್ನು ಬೆಳೆಸಬೇಕು ಯುವಕರು ನಾಡು ನುಡಿಯ ಬಗ್ಗೆ ಹೆಚ್ಚು ಆಸಕ್ತಿ ತೋರಬೇಕು ಎಂದರು.
ಗ್ರಾಮದ ಮುಖಂಡ ನಂದೀಶ್ ಮಾತನಾಡಿ ಮನುಷ್ಯನ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು ಪುನೀತ್ ರಾಜಕುಮಾರ್ ಅವರ ಕೊಡುಗೆ ನಾಡಿಗೆ ಅಪಾರವಾಗಿದೆ ಅವರು ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದರು ಯುವ ಪೀಳಿಗೆ ವಿದ್ಯಾಭ್ಯಾಸ ಹಾಗೂ ಗುರು ಹಿರಿಯರ ಗೌರವ ನೀಡುವ ಬಗ್ಗೆ ಅವರು ಅಭಿನಯಿಸಿರುವ ಚಿತ್ರಗಳಲ್ಲಿ ಎದ್ದು ಕಾಣುತ್ತಿತ್ತು.
ಅವರ ಚಿತ್ರಗಳು ಒಳ್ಳೆಯ ಸಾಮಾಜಿಕ ಕಳಕಳಿ ಇರುವಂತಹ ಚಿತ್ರಗಳನ್ನು ನಾಡಿಗೆ ನೀಡುತ್ತಿದ್ದರು ಕನ್ನಡ ರಾಜ್ಯೋತ್ಸವ ಜೊತೆಗೆ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ ಮಾಡಿರುವುದು ಯುವಕರಿಗೆ ಆದರ್ಶ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಸತೀಶ್ ರಾಮೇಗೌಡ ಮದನ್ ಪ್ರಮೋದ್ ಹಾಗೂ ಗ್ರಾಮಸ್ಥರು ಹಾಜರಿದ್ದರು.