ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಘಟನೆಗೆ ಸಂಬAಧಪಟ್ಟAತೆ ಕರ್ತವ್ಯದ ನಿರ್ಲಕ್ಷö್ಯದ ಆರೋಪದ ಮೇಲೆ ಅಮಾನತಾಗಿರುವ ಎಸ್ಪಿ ನಿಜ್ಜೂರು ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕರೆಸಿದ್ದಾರೆ ಎನ್ನಲಾಗಿದೆ.
ಈ ವಿಷಯವನ್ನು ಸ್ವತಃ ಗೃಹ ಸಚಿವ ಪರಮೇಶ್ವರ್ ಅವರೇ ತಿಳಿಸಿದ್ದಾರೆ.
ಘಟನೆಗೆ ಸಂಬAಧಪಟ್ಟAತೆ ಅಮಾನತುಗೊಂಡ ಎಸ್ಪಿ ನಿಜ್ಜೂರು ಅವರು ಆತ್ಮಹತ್ಯೆಗೆ ಯತ್ನಿಸಿದರು ಎಂದು ಟೀಕಾಪ್ರಹಾರಗಳು ಬಿಜೆಪಿಯಿಂದ ಕೇಳಿಬಂದಿದ್ದು, ಬಿಜೆಪಿ ಮಾಡುತ್ತಿರುವ ಟೀಕೆಗಳ ವಿರುದ್ಧ ಪರಮೇಶ್ವರ್ ಹರಿಹಾಯ್ದಿದ್ದಾರೆ.
ಟೀಕೆ ಮಾಡುವುದೊಂದೆ ಬಿಜೆಪಿ ಅವರ ಕೆಲಸ, ಎಲ್ಲದಕ್ಕೂ ಅವರು ಮುಂದಿರುತ್ತಾರೆ. ಎಸ್.ಪಿಯವರನ್ನು ಡಿಜಿ ಅವರು ಕರೆಸಿರುವ ಹಿನ್ನೆಲೆಯಲ್ಲಿ ಇಂದು ಎಸ್ಪಿ ಡಿಜಿ ಅವರನ್ನು ಭೇಟಿಯಾಗಲಿದ್ದಾರೆ.



