ಬೆಂಗಳೂರು: ನ್ಯಾಯಾಲಯದಿಂದ ಹೊರಡಿಸಿರುವ ಜಾಮೀನುರಹಿತ ವಾರೆಂಟ್ಗಳನ್ನು ಆದ್ಯತೆ ಮೇರೆಗೆ ಜಾರಿ ಮಾಡಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಆದೇಶ ನೀಡಿರುತ್ತಾರೆ.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಾಕಿ ಇರುವ ಜಾಮೀನು ರಹಿತ ವಾರಂಟ್ ಗಳನ್ನು ಜಾರಿ ಮಾಡಿ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.ಅಪರಾಧ ಪ್ರಕರಣಗಳಲ್ಲಿ ಕಾಲಕಾಲಕ್ಕೆ ಕೋರ್ಟ್ ವಿಚಾರಣೆಗೆ ಹಾಜರಾಗದೆ ಇರುವ ಅಥವಾ ಕೋರ್ಟ್ ನಿಂದ ಜಾರಿಯಾಗಿ ಬಾಕಿ ಇರುವ ಎನ್ ಬಿ ಡಬ್ಲ್ಯೂಗಳನ್ನು ವಿಲೇವಾರಿ ಮಾಡುವಂತೆ ಮತ್ತು ಆರೋಪಿಗಳನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಎಸ್ ಪಿ ಗಳಿಗೆ ಮತ್ತು ಪೊಲೀಸ್ ಆಯುಕ್ತರುಗಳಿಗೆ ಆದೇಶ ನೀಡಿರುತ್ತಾರೆ.
ಈ ಬಗ್ಗೆ ಪ್ರತಿವಾರ ವಿಲೇವಾರಿ ಆಗಿರುವ ನೋಟಿಸ್ ಗಳ ಮಾಹಿತಿ ಡಿ ಜಿ ಪಿ ಕಚೇರಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಕೊಳ್ಳಬೇಕಗುತದೆ ಎಂದು ಎಚ್ಚರಿಕೆ ನೀಡಿರುತ್ತಾರೆ.



