ಅವರು ಟೀಕೆಗಳಿಗೆ ಬೇಸತ್ತು ಬೇಸರದಿಂದ ಕುಳಿತಿದ್ದಾಗ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಿಳಿಸಿದ್ದ ಮಾತುಗಳು. ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು ಈ ಮಾತನ್ನು ನೆನಪಿಸಿಕೊಂಡರು. ವಿAಡೀಸ್ ವಿರುದ್ಧ ಪ್ರಥಮ ಟೆಸ್ಟ್ ಗೆಲುವಿನಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಕ್ರಿಕೆಟಿಗರ ಬಗ್ಗೆ ಬರುವ ಹೊಗಳುವಿಕೆ ಮತ್ತು ತೆಗಳುವಿಕೆಯ ವಿಚಾರವಾಗಿ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, “ನೀವು ಚೆನ್ನಾಗಿ ಆಡಿದಾಗ, ಅಭಿಮಾನಿಗಳು ಮತ್ತು ಕ್ರಿಕೆಟ್ ಜಗತ್ತು ನಿಮ್ಮೊಂದಿಗೆ ಇರುತ್ತದೆ. ‘ಮೊಹಮ್ಮದ್ ಸಿರಾಜ್ನಂತಹ ಬೌಲರ್ ಇಲ್ಲ’ ಎಂದೇ ಹೇಳುತ್ತಾರೆ. ಅದೇ ಮುಂದಿನ ಪAದ್ಯದಲ್ಲಿ ನೀವು ಚೆನ್ನಾಗಿ ಆಡದಿದ್ದರೆ, ಅವರು ‘ಅಯ್ಯೋ, ಈತ ಎಂತಹ ಬೌಲರ್. ಹೋಗಿ ನಿಮ್ಮ ಅಪ್ಪನ ಜೊತೆ ಆಟೋ
ಓಡಿಸಿ’ ಎಂದು ಹೇಳುತ್ತಾರೆ. ಇದರಲ್ಲಿ ಏನು ಅರ್ಥವಿದೆ ನೀವು ಒಂದು ಪಂದ್ಯದಲ್ಲಿ ಹೀರೋ, ಇನ್ನೊಂದರಲ್ಲಿ ಜೀರೋ. ಜನರು ಅಷ್ಟು ಬೇಗ ಬದಲಾಗುತ್ತಾರೆಯೇ?” ಎಂದು ಸಿರಾಜ್ ಪ್ರಶ್ನಿಸಿದರು.
“ಮೊದಲು ಬಹಳ ಚಿಂತಿಸುತ್ತಿದ್ದೆ. ನಾನು ಹೊರಗಿನ ಅಭಿಪ್ರಾಯ ಮತ್ತು ಪ್ರಾಮುಖ್ಯತೆ ನೀಡಬೇಕಿಲ್ಲ ಎಂದು ನಿರ್ಧರಿಸಿದೆ. ನನ್ನ ತಂಡದ ಸದಸ್ಯರು ಮತ್ತು
ಕುಟುಂಬದವರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದಷ್ಟೇ ನನಗೆ ಮುಖ್ಯ. ನನಗೆ ಇತರರು ಏನು ಯೋಚಿಸುತ್ತಾರೆ ಎಂಬುದೆಲ್ಲಾ ನಗಣ್ಯ” ಎಂದು
ಸಿರಾಜ್ ಸ್ಪಷ್ಟಪಡಿಸಿದರು. ಇದೇ ವೇಳೆ ಅವರು ಎಂಎಸ್ ಧೋನಿ ಅವರ ಸಲಹೆಯನ್ನು ನೆನಪಿಸಿಕೊಂಡರು. “ನಾನು ಭಾರತ ತಂಡಕ್ಕೆ ಸೇರಿದಾಗ, ಎಂಎಸ್
ಧೋನಿ ಅವರು ನನಗೆ ಹೀಗೆ ಹೇಳಿದ್ದರು: ‘ಯಾರ ಮಾತನ್ನೂ ಕೇಳಬೇಡ. ನೀನು ಚೆನ್ನಾಗಿ ಆಡಿದಾಗ, ಇಡೀ ಜಗತ್ತು ನಿನ್ನ ಜೊತೆ ಇರುತ್ತದೆ. ನೀನು ಕೆಟ್ಟದಾಗಿ ಆಡಿದಾಗ, ಇದೇ ಜಗತ್ತು ನಿನ್ನನ್ನು ನಿಂದಿಸುತ್ತದೆ.'” ಎAದು ತಿಳಿಸಿದರು.
ಸಿರಾಜ್ ಅವರು ಬಡ ಕುಟುಂಬದಿAದ ಬAದವರ. ಆಟೋ ಚಾಲಕರಾಗಿ ಜೀವನ ನಡೆಸುತ್ತಿದ್ದ ಅವರ ತಂದೆ ೨೦೨೦-೨೧ರ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ನಿಧನರಾದರ. ಇದು ಸಿರಾಜ್ಗೆ ಬಹಳ ನೋವು ತಂದಿತ್ತು. ಆದರೆ ಅವರು ಅವರು ಧೈರ್ಯದಿಂದ ಆಡಿದರು. ಅದೇ ಸರಣಿಯಲ್ಲಿ ಟೆಸ್ಟ್ ಪದಾರ್ಪಣೆಯನ್ನೂ ಮಾಡಿದರು. ಆ ಸಮಯದಲ್ಲಿ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ದುರ್ಬಲಗೊಂಡಿತ್ತು. ಮೊಹಮ್ಮದ್ ಸಿರಾಜ್ ಆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.