ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಬಾರಿಸಿದಧ್ರುವ್ ಜ್ಯುರೆಲ್ ಅವರು ಇದೀಗ ಇದೀಗಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ಗಳಾದ ಮಹೇಂದ್ರ ಸಿಂಗ್ ಧೋನಿ ಮತ್ತುಫಾರೂಕ್ ಇಂಜನಿಯರ್ ಅವರ ಸಾಲಿಗೆಸೇರಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧತವರು ನೆಲದಲ್ಲಿ ಶತಕ ಬಾರಿಸಿದ ಮೂರನೇವಿಕೆಟ್ ಕೀಪರ್ ಬ್ಯಾಟರ್ ಎಂಬ ಹೆಗ್ಗಳಿಕೆಗೆಪಾತ್ರರಾಗಿದ್ದಾರೆ.ಅಹಮದಾಬಾದ್ ನ ನರೇಂದ್ರ ಮೋದಿಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮಟೆಸ್ಟ್ ಪಂದ್ಯದಲ್ಲಿ ೧೨೫ ರನ್ ಬಾರಿಸಿದಅವರು ೧೨೫ ನನ್ ಗಳಿಸಿ ಔಟಾಗುವಹೊತ್ತಿಗೆ ಭಾರತತಂಡವನ್ನು ಸುಭದ್ರಸ್ಥಿತಿಗೆ ತಲುಪಿಸಿದರು.
ರವೀಂದ್ರ ಜಡೇಜಾಅವರೊಂದಿಗೆ ೫ನೇ ವಿಕೆಟ್ಗೆ ಅಮೋಘ ೨೦೪ ರನ್ಗಳ ಜೊತೆಯಾಟವಾಡಿದರು.ಅಂತಿಮವಾಗಿ ೨೧೦ ಎಸೆತಗಳನ್ನುಎದುರಿಸಿದ ಧ್ರುವ್ ೧೫ಬೌಂಡರಿ ಮತ್ತು ೩ಸಿಕ್ಸರ್ ಗಳನ್ನು ಒಳಗೊಂಡ ೧೨೫ ರನ್ ಗಳಿಸಿಪಿಯರ್ ಬೌಲಿಂಗ್ ನಲ್ಲಿ ಕೀಪರ್ ಹೋಪ್ಗೆ ಕ್ಯಾಚಿತ್ತು ಔಟಾದರು. ಅವರು ಔಟಾದಬಳಿಕ ರವೀಂದ್ರ ಜಡೇಜಾ (ಅಜೇಯ ೧೦೪)ಅವರು ಸಹ ಶತಕ ಪೂರೈಸಿದರು.ವೃತ್ತಿಪರ ಜೀವನದ ಮೊದಲ ಶತಕನಾಯಕ ಶುಭಮನ್ ಗಿಲ್ ಅವರು ೧೮೮ರನ್ ಗಳಿಸಿದ್ದ ವೇಳೆ ಔಟಾದರು. ಈ ವೇಳೆಕ್ರೀಸಿಗೆ ಆಗಮಿಸಿದ ಧ್ರುವ ಜ್ಯುರೆಲ್ ಅವರುಕೆಎಲ್ ರಾಹುಲ್ ಅವರ ಜೊತೆ ತಾಳ್ಮೆಯಆಟವಾಡಿದರು. ಭರ್ತಿ ೧೦೦ ರನ್ ಗಳಿಸಿದಬಳಿಕ ಕೆಎಲ್ ರಾಹುಲ್ಅವರು ವಾರಿಕನ್ಬೌಲಿಂಗ್ ನಲ್ಲಿಗ್ರೀವ್ಸ್ ಗೆಕ್ಯಾಚ್ ನೀಡಿಔಟಾದರು. ಈ ಬಳಿಕಧ್ರುವ್ ಜ್ಯುರೆಲ್ ಮತ್ತುರವೀಂದ್ರ ಜಡೇಜಾ ಅವರುತಂಡವನ್ನು ಬೃಹತ್ ಮೊತ್ತದತ್ತಕೊಂಡೊಯ್ದರು.
ಯಾವಾಗಲೂ ಪಂತ್ ಬದಲಿಯಾಗಿ ಆಡುತ್ತಿದ್ದ ಅವರು ಇದೀಗ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಶತಕವನ್ನು ೧೯೦ ಎಸೆತಗಳಲ್ಲಿ ಪೂರೈಸಿದರು. ಇದು ಅವರ ವೃತ್ತಿಜೀವನದ ಮೊದಲ ಅಂತರರಾಷ್ಟ್ರೀಯ ಶತಕವಾಗಿದೆ.
ಮಾಜಿ ಭಾರತ ನಾಯಕ ಧೋನಿಅವರು ೨೦೧೧ ರಲ್ಲಿ ಕೋಲ್ಕತ್ತಾ ಟೆಸ್ಟ್ನಲ್ಲಿ೧೪೪ ರನ್ ಗಳಿಸಿದ್ದರು. ಅದೇ ರೀತಿ ಮಾಜಿವಿಕೆಟ್ಕೀಪರ್ ಫಾರೂಕ್ ಇಂಜಿನಿಯರ್ಅವರು ಅವರು ೧೯೬೭ ರಲ್ಲಿ ಚೆನ್ನೈ ಟೆಸ್ಟ್ನಲ್ಲಿವೆಸ್ಟ್ ಇಂಡೀಸ್ ವಿರುದ್ಧ ೧೦೯ ರನ್ಗಳಿಸಿದ್ದರು. ಈಗ ಧ್ರುವ್ ಜುರೆಲ್ ಈ ಇಬ್ಬರು ಶ್ರೇಷ್ಠ ಆಟಗಾರರ ಸಾಲಿಗೆ ಸೇರಿಕೊಂಡಿದ್ದಾರೆ.ಶತಕ ಗಳಿಸಿದ ೧೨ನೇ ಕೀಪರ್ಉತ್ತರ ಪ್ರದೇಶ ಮೂಲದ ಜುರೆಲ್ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಗಳಿಸಿದಭಾರತದ ೧೨ನೇ ವಿಕೆಟ್ಕೀಪರ್ ಬ್ಯಾಟರ್ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೆ,ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲಟೆಸ್ಟ್ ಶತಕವನ್ನು ಗಳಿಸಿದ ಐದನೇ
ಆಟಗಾರರೆನ್ನಿಸಿಕೊಂಡಿದ್ದಾರೆ.