ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ನಿರ್ಮಾಣದ `ಧುರಂದರ್ ಪ್ರತೀಕಾರ’ ಚಿತ್ರದ 3.25 ನಿಮಿಷದ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಟ್ರೇಲರ್ ಮೊನ್ನೆಯಷ್ಟೇ ಹೊರಬಂದಿದೆ. ಬಿಡುಗಡೆಯಾದ ಕೇವಲ 48 ಗಂಟೆಗಳಲ್ಲಿ 312 ಮಿಲಿಯನ್ ವೀಕ್ಷಣೆ ಕಂಡುಬAದಿದೆ. ರಣವೀರ್ ಸಿಂಗ್ ಅಭಿನಯ, ನಿರ್ದೇಶಕ ಆದಿತ್ಯ ಧರ್ ಅವರ ಸ್ಟಂಟ್ಸ್ ಥ್ರಿಲ್ಲರ್ ಸೀಕ್ವೇಲ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪವರ್ಫುಲ್ ಹಿನ್ನಲೆ ಶಬ್ದ, ಚೂಪಾದ ಸಂಭಾಷಣೆಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ತುಣುಕುಗಳಲ್ಲಿ ಜಸ್ಕಿರತ್ಸಿಂಗ್ ರಂಗಿ ಮತ್ತು ಹಮ್ಮಾ ಎಂಬ ಎರಡು ಅವತಾರಗಳು ಉಗ್ರ ತೀವ್ರತೆಯೊಂದಿಗೆ ಮರಳುತ್ತದೆ. ಹಾಗೂ ನಿರೂಪಣೆಯು ಶಕ್ತಿಶಾಲಿ ಪಾತ್ರಧಾರಿಗಳಿಂದ ಆಳವಾಗಿ ಹೊರ ಹೊಮ್ಮಿದೆ. ಆರ್.ಮಾಧವನ್ ಕಾರ್ಯತಂತ್ರದ ಮಾಸ್ಟರ್ ಮೈಂಡ್, ಅರ್ಜುನ್ರಾಂಪಾಲ್ ಐಎಎಸ್ ಮೇಜರ್ ಇಕ್ಬಾಲ್ ಪಾತ್ರಗಳು ಉತ್ಸಾಹಭರಿತ ತಿರುವು ನೀಡುತ್ತದೆ. ಸಂಜಯ್ದತ್ ಅವರು ಎಸ್ಪಿ ಚೌಧರಿ ಅಸ್ಲಂ ಆಗಿ ಕಚ್ಚಾ ಕಮಾಂಡಿAಗ್ ಪಡೆಯನ್ನು ನಿರ್ವಹಿಸಿದ್ದಾರೆ. ಉನ್ನತವಾದ ಸಾಹಸ, ವಿನ್ಯಾಸಗೊಳಿಸಲಾದ ಕ್ಷಣಗಳೊಂದಿಗೆ ಟ್ರೇಲರ್ ಅಭೂತಪೂರ್ವ ಪ್ರಮಾಣದಲ್ಲಿ ಏರಿಸಲಾದ ಸೇಡಿನ ಕಥೆಯೊಂದಿಗೆ ಧ್ವನಿಯನ್ನು ಹೊಂದಿಸಿದೆ.
ಜಿಯೋ ಸ್ಟುಡಿಯೋಸ್ ಪ್ರಸ್ತುತಪಡಿಸುವ ಬಿ62 ಸ್ಟುಡಿಯೋಸ್ ನಿರ್ಮಾಣದ, ಆದಿತ್ಯ ಧರ್ ನಿರ್ದೇಶನದ ಚಿತ್ರವು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಪರಿಚಿತ ವ್ಯಕ್ತಿಗಳ ಕಥೆ ಜಾಗತಿಕವಾಗಿ 2026ರ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ವಿಶ್ವದಾದ್ಯಂತ ಅನಾವರಣಗೊಳ್ಳಲಿದೆ.
ಸದ್ದು ಮಾಡುತ್ತಿದೆ ಧುರಂದರ್ ಪ್ರತೀಕಾರ ಟ್ರೇಲರ್



