ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಬ್ಯುಸಿ ಇರುವುದರಿಂದ ಅವರ ಸಿನಿಮಾ ಅಭಿಮಾನಿಗಳಿಗೆ ಅಷ್ಟು ಸಂತೋಷ ಸಿಗುತ್ತಿಲ್ಲ. ಅವರು ಒಪ್ಪಿಕೊಂಡ ಮೂರು ಸಿನಿಮಾಗಳನ್ನು ಹೇಗೋ ಮುಗಿಸಿಕೊಟ್ಟರು. ಆದರೆ, ಯಾವ ಸಿನಿಮಾದಲ್ಲೂ ಬದ್ಧತೆ ಕಾಣಿಸಿಲ್ಲ. ಕಾಟಾಚಾರಕ್ಕೆ ಅವರು ಸಿನಿಮಾ ಶೂಟ್ ಮುಗಿಸಿಕೊಟ್ಟರು. `ಓಜಿ’, `ಹರಿ ಹರ ವೀರ ಮಲ್ಲು’ ಸಿನಿಮಾ ಸಾಧಾರಣ ಪ್ರದರ್ಶನ ನೀಡಿದ ಬಳಿಕ ಅವರ ನಟನೆಯ `ಉಸ್ತಾದ್ ಭಗತ್ ಸಿಂಗ್’ ಚಿತ್ರವು `ಧುರಂಧರ್ 2′ ಅಬ್ಬರದಿಂದ ತತ್ತರಿಸಿದೆ.
`ಧುರಂಧರ್ 2′ ಸಿನಿಮಾ ಅಬ್ಬರದ ಕಲೆಕ್ಷನ್ ಮಾಡುತ್ತಿದೆ. ಗುರುವಾರ 49 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಾರದ ದಿನವೂ ಇಷ್ಟು ಅಬ್ಬರದ ಗಳಿಕೆ ಆಗುತ್ತಿರುವುದು ನಿಜಕ್ಕೂ ಶಾಕಿಂಗ್ ಎನಿಸಿದೆ. ಈ ಸಿನಿಮಾಗೆ ಗುರುವಾರ ಬರೋಬ್ಬರಿ 19,493 ಶೋಗಳನ್ನು ನೀಡಲಾಗಿತ್ತು. ಈ ಚಿತ್ರದ ಭಾರತದ ನೆಟ್ ಕಲೆಕ್ಷನ್ 674 ಕೋಟಿ ರೂಪಾಯಿ ಆಗಿದೆ. ಭಾರತದ ಗ್ರಾಸ್ ಕಲೆಕ್ಷನ್ 805 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾಗೆ ವಿಶ್ವ ಮಟ್ಟದಲ್ಲಿ 1067 ಕೋಟಿ ರೂಪಾಯಿ ಗಳಿಕೆ ಆಗಿದೆ.
ಗುರುವಾರ `ಧುರಂಧರ್ 2′ ಸಿನಿಮಾದ ತೆಲುಗು ವರ್ಷನ್ಗೆ 2.50 ಕೋಟಿ ರೂಪಾಯಿ ಗಳಿಕೆ ಆಗಿದೆ. ಆದರೆ, ಇದೇ ದಿನ `ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಗಳಿಕೆ ಮಾಡಿದ್ದು ಕೇವಲ 1 ಕೋಟಿ ರೂಪಾಯಿ ಮಾತ್ರ. ಇದು ಚಿತ್ರಕ್ಕೆ ಭಾರೀ ಹಿನ್ನಡೆ ತಂದಿದೆ.
ಪವನ್ ಕಲ್ಯಾಣ್ ಸಿನಿಮಾ ಭಾರತದಲ್ಲಿ 66 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಲ್ಲಿ ಅರ್ಧದಷ್ಟು ಗಳಿಕೆ ಮೊದಲ ದಿನವೇ ಬಂದಿತ್ತು. ಆ ಬಳಿಕ ಸಿನಿಮಾದ ಗಳಿಕ ಸಂಪೂರ್ಣವಾಗಿ ತಗ್ಗಿ ಹೋಗಿದೆ. ಮುಂದಿನ ದಿನಗಳಲ್ಲಿ `ಉಸ್ತಾದ್ ಭಗತ್ ಸಿಂಗ್’ ಪರಿಸ್ಥಿತಿ ಮತ್ತಷ್ಟು ಹೀನಾಯ ಆಗಬಹುದು.
ಪವನ್ ಕಲ್ಯಾಣ್ ಅವರು ಸದ್ಯಕ್ಕಂತೂ ಸಿನಿಮಾ ಮಾಡುತ್ತಿಲ್ಲ. ಅವರು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಆಗಿದ್ದು, ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದರೆ ಅವರು ಸಿನಿಮಾ ರಂಗದಿಂದಲೇ ದೂರ ಆಗಬಹುದು.
ಧುರಂಧರ್ 2′ ಅಬ್ಬರಕ್ಕೆ ಮಕಾಡೆ ಮಲಗಿದ ಪವನ್ ಕಲ್ಯಾಣ್ ಸಿನಿಮಾ; ಹೀನಾಯ ಕಲೆಕ್ಷನ್



