This is the title of the web page
This is the title of the web page

ದಿಗಂತ್ ಅಭಿನಯದ ‘ಲೈಫು ಇಷ್ಟೇನೆ’ ಸಿನಿಮಾ ಮರು ಬಿಡುಗಡೆ: ನಿರ್ದೇಶಕ ಪವನ್ ಕುಮಾರ್

2011 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ‘ಲೈಫು ಇಷ್ಟೇನೆ’ ಪ್ರೇಮಿಗಳ ದಿನಕ್ಕಾಗಿ ಮತ್ತೆ ಫೆಬ್ರುವರಿ 10 ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ದಿಗಂತ್, ಸಂಯುಕ್ತ ಹೊರನಾಡ್, ಸಿಂಧು ಲೋಕನಾಥ್ ಮತ್ತು ಸತೀಶ್ ನೀನಾಸಂ ಮುಖ್ಯ ಭೂಮಿಕೆಯಲ್ಲಿದ್ದಾರೆ. 2011 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ‘ಲೈಫು ಇಷ್ಟೇನೆ’ ಮತ್ತೆ ಫೆಬ್ರುವರಿ 10 ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ದಿಗಂತ್, ಸಂಯುಕ್ತ ಹೊರನಾಡ್, ಸಿಂಧು ಲೋಕನಾಥ್ ಮತ್ತು ಸತೀಶ್ ನೀನಾಸಂ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಈ ಸುದ್ದಿಯನ್ನು ಹಂಚಿಕೊಂಡ ನಿರ್ದೇಶಕ ಪವನ್ ಕುಮಾರ್, ‘ಹುಡುಗರು, ಹುಡುಗಿಯರು, ಪುರುಷರು, ಮಹಿಳೆಯರು ಮತ್ತು ಇತರ ಪ್ರೇಮಿಗಳಿಗಾಗಿ ನನ್ನ ಮೊದಲ ಚಿತ್ರ ‘ಲೈಫು ಇಷ್ಟೇನೆ’ ಸೀಮಿತ ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆಯಾಗಲಿದೆ’ ಎಂದಿದ್ದಾರೆ. 2023ರ ಫೆಬ್ರುವರಿ 10ರಂದು ಚಿತ್ರಮಂದಿರಗಳಲ್ಲಿ ನೋಡಿ, ಇದೊಂದು ರೊಮ್ಯಾಂಟಿಕ್ ಕಾಮಿಡಿ ಎಂಟರ್ಟೈನರ್ ಸಿನಿಮಾ ಎಂದು ಪವನ್ ಹೇಳಿದ್ದಾರೆ. ಪಂಚರಂಗಿ ಚಿತ್ರದ ಒಂದು ಹಾಡಿನಿಂದ ಚಿತ್ರದ ಶೀರ್ಷಿಕೆಯನ್ನು ಪಡೆಯಲಾಗಿದ್ದು, ಅದು ಸಾಕಷ್ಟು ಜನಪ್ರಿಯವಾಗಿತ್ತು.
ರೊಮ್ಯಾಂಟಿಕ್ ಅಂಶಗಳಿರುವ ಈ ಚಿತ್ರ 2011ರ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಿತ್ತು.

ಚಿತ್ರಕ್ಕೆ ಮನೋ ಮೂರ್ತಿ ಅವರ ಸಂಗೀತ ಸಂಯೋಜನೆಯಿದೆ. ಲೈಫು ಇಷ್ಟೇನೆ 2011 ರಲ್ಲಿ ಯಶಸ್ವಿ ಚಿತ್ರಗಳಲ್ಲಿ ಒಂದಾಯಿತು. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು. ನಟರಾದ ಅಚ್ಯುತ್ ಕುಮಾರ್, ವೀಣಾ ಸುಂದರ್, ರಮ್ಯಾ ಬಾರ್ನಾ, ಚಂದನ್ ಕುಮಾರ್, ರಾಜು ತಾಳಿಕೋಟೆ, ಮಿಮಿಕ್ರಿ ದಯಾನಂದ್ ಮತ್ತು ಶ್ರೀನಿವಾಸ್ ಪ್ರಕಾಶ್ ಇತರೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಸದ್ಯ, ನಿರ್ದೇಶಕ ಪವನ್ ಕುಮಾರ್ ಅವರು ‘ಧೂಮಮ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಚಿತ್ರದ ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಮತ್ತು ಅಪರ್ಣಾ ಬಾಲಮರುರಳಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.